ಇಂಡಿಯಾ ಸ್ಕಿಲ್ಸ್ ಕರ್ನಾಟಕ - 2026 ಸ್ಪರ್ಧೆಗೆ ಅರ್ಜಿ ಆಹ್ವಾನ
ಬಳ್ಳಾರಿ, 11 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ‘ಇಂಡಿಯಾ ಸ್ಕಿಲ್ಸ್ ಕರ್ನಾಟಕ-2026’ ಸ್ಪರ್ಧೆಯನ್ನು ಜಿಲ್ಲಾ, ವಲಯ ಹಾಗೂ ರಾಜ್ಯ ಮಟ್ಟಗಳಲ್ಲಿ ಆಯೋಜಿಸುತ್ತಿದ್ದು,
ಇಂಡಿಯಾ ಸ್ಕಿಲ್ಸ್ ಕರ್ನಾಟಕ - 2026 ಸ್ಪರ್ಧೆಗೆ ಅರ್ಜಿ ಆಹ್ವಾನ


ಬಳ್ಳಾರಿ, 11 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ‘ಇಂಡಿಯಾ ಸ್ಕಿಲ್ಸ್ ಕರ್ನಾಟಕ-2026’ ಸ್ಪರ್ಧೆಯನ್ನು ಜಿಲ್ಲಾ, ವಲಯ ಹಾಗೂ ರಾಜ್ಯ ಮಟ್ಟಗಳಲ್ಲಿ ಆಯೋಜಿಸುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

2028ರಲ್ಲಿ ಜಪಾನ್ನ ಐಚಿಯಲ್ಲಿ ನಡೆಯಲಿರುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಯುವಜನತೆಗೆ ಸುವರ್ಣಾವಕಾಶ ಇದಾಗಿದ್ದು, ವಿಶ್ವದ ಅತಿದೊಡ್ಡ ವೃತ್ತಿಪರ ಕೌಶಲ್ಯ ಸ್ಪರ್ಧೆಯಾದ ಇದರಲ್ಲಿ 60ಕ್ಕೂ ಹೆಚ್ಚು ದೇಶಗಳ 1,800ಕ್ಕೂ ಅಧಿಕ ಯುವಕರು 63 ವಿವಿಧ ಕೌಶಲ್ಯ ವಿಭಾಗಗಳಲ್ಲಿ ಭಾಗವಹಿಸಲಿದ್ದಾರೆ.

*ಅರ್ಹತೆ ಮತ್ತು ವಯೋಮಿತಿ:*

ಕೌಶಲ್ಯ ಕ್ರಮ ಸಂಖ್ಯೆ 01 ರಿಂದ 50: ಅಭ್ಯರ್ಥಿಗಳು ದಿನಾಂಕ 01.01.2006 ರಂದು ಅಥವಾ ನಂತರ ಜನಿಸಿರಬೇಕು.

ಕೌಶಲ್ಯ ಕ್ರಮ ಸಂಖ್ಯೆ 51 ರಿಂದ 63: ಅಭ್ಯರ್ಥಿಗಳು ದಿನಾಂಕ 01.01.2003 ರಂದು ಅಥವಾ ನಂತರ ಜನಿಸಿರಬೇಕು.

ಆಸಕ್ತ ಯುವಕ-ಯುವತಿಯರು [Skill India Digital Portal] ವೆಬ್ಸೈಟ್ಗೆ ಭೇಟಿ ನೀಡಿ, ‘India Skills 2026' ಲಿಂಕ್ ಮೂಲಕ ತಮ್ಮ ಮೊಬೈಲ್ ಸಂಖ್ಯೆ, ಇ-ಕೆವೈಸಿ ಹಾಗೂ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೆ ಸೆಪ್ಟೆಂಬರ್ 15 ಅಂತಿಮ ದಿನ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, ಕಚೇರಿ ಸಂಖ್ಯೆ 17, ಸಿ ಬ್ಲಾಕ್, ಹೊಸ ಡಿಸಿ ಆಫೀಸ್, ಬಳ್ಳಾರಿ ಅಥವಾ ದೂ.08392-294230/ 9606492216 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande