
ಹುಬ್ಬಳ್ಳಿ, 10 ಸೆಪ್ಟೆಂಬರ್ (ಹಿ.ಸ.):
ದಿನ ಭವಿಷ್
*ಮೇಷ ರಾಶಿ.*
ನಿರುದ್ಯೋಗಿಗಳು ಉದ್ಯೋಗ ಪ್ರಯತ್ನಗಳನ್ನು ವೇಗಗೊಳಿಸುತ್ತಾರೆ. ಕೈಗೊಂಡ ಕಾರ್ಯಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸುತ್ತಾರೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವುದು ಉತ್ತಮ. ಬಾಲ್ಯದ ಸ್ನೇಹಿತರ ಆಗಮನ ಸಂತಸವನ್ನು ಉಂಟುಮಾಡುತ್ತದೆ. ಬಂಧುವರ್ಗದಿಂದ ಆರ್ಥಿಕ ಸಹಾಯ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳು ಅನುಕೂಲಕರವಾಗಿ ಸಾಗುತ್ತವೆ.
*ವೃಷಭ ರಾಶಿ.*
ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವುದು ಒಳಿತಲ್ಲ. ಕುಟುಂಬ ಸದಸ್ಯರೊಂದಿಗೆ ಅನಾವಶ್ಯಕ ವಿವಾದಗಳು ಉಂಟಾಗಬಹುದು. ಆಸ್ತಿ ವಿವಾದಗಳು ಮಾನಸಿಕ ಕಿರಿಕಿರಿಯನ್ನು ಉಂಟುಮಾಡುತ್ತವೆ. ಅನಗತ್ಯ ಪ್ರಯಾಣಗಳನ್ನು ಮಾಡಬೇಕಾಗಬಹುದು. ವ್ಯಾಪಾರ ಮತ್ತು ಉದ್ಯೋಗ ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ. ಕಾರ್ಯಗಳಲ್ಲಿ ವಿಳಂಬ ಉಂಟಾಗುತ್ತದೆ.
*ಮಿಥುನ ರಾಶಿ.*
ವ್ಯಾಪಾರ ವ್ಯವಹಾರಗಳಲ್ಲಿ ಹಠಾತ್ ನಿರ್ಧಾರಗಳಿಂದ ನಷ್ಟ ಉಂಟಾಗುವ ಸಾಧ್ಯತೆ ಇದೆ. ಬಾಲ್ಯದ ಸ್ನೇಹಿತರೊಂದಿಗೆ ಮಾತಿನ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೀರಿ. ಉದ್ಯೋಗಸ್ಥರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಪ್ರಮುಖ ಕಾರ್ಯಗಳು ಹೆಚ್ಚಿನ ಶ್ರಮದಿಂದಲೇ ಪೂರ್ಣಗೊಳ್ಳುತ್ತವೆ. ಕೆಲವು ವಿಚಾರಗಳಲ್ಲಿ ಆಲೋಚಿಸಿ ಮುನ್ನಡೆಯುವುದು ಉತ್ತಮ.
*ಕಟಕ ರಾಶಿ.*
ಸ್ಥಿರಾಸ್ತಿ ಖರೀದಿ ಪ್ರಯತ್ನಗಳು ಫಲಿಸುತ್ತವೆ. ಆಪ್ತರಿಂದ ಪ್ರಮುಖ ಮಾಹಿತಿ ದೊರೆಯುತ್ತದೆ. ವ್ಯಾಪಾರಗಳು ಲಾಭದಾಯಕವಾಗಿ ಸಾಗುತ್ತವೆ. ಉದ್ಯೋಗದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಬಹುಕಾಲದಿಂದ ಪೂರ್ಣಗೊಳ್ಳದೆ ಉಳಿದಿದ್ದ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ.ವಿಂದು ವಿನೋದ ಕಾರ್ಯಕ್ರಮಗಳಿಗೆ ಆಹ್ವಾನಗಳು ದೊರೆಯುತ್ತವ.
*ಸಿಂಹ ರಾಶಿ.*
ವ್ಯಾಪಾರಗಳು ಲಾಭದಾಯಕವಾಗಿ ಸಾಗುತ್ತವೆ. ಕೈಗೊಂಡ ಕಾರ್ಯಗಳನ್ನು ನಿರೀಕ್ಷಿಸಿದ ರೀತಿಯಲ್ಲಿ ಪೂರ್ಣಗೊಳಿಸುತ್ತೀರಿ. ಆರ್ಥಿಕ ತೊಂದರೆಗಳಿದ್ದರೂ ಅಗತ್ಯಕ್ಕೆ ತಕ್ಕಂತೆ ಧನಸಹಾಯ ದೊರೆಯುತ್ತದೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ. ಸ್ನೇಹಿತರೊಂದಿಗೆ ಶುಭಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ದೈವ ಹಾಗೂ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ.
*ಕನ್ಯಾ ರಾಶಿ.*
ವಿದ್ಯಾರ್ಥಿಗಳಿಗೆ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಪ್ರಮುಖ ಕಾರ್ಯಗಳನ್ನು ಮುಂದೂಡಬೇಕಾಗುತ್ತದೆ. ಕುಟುಂಬ ಸದಸ್ಯರಿಂದ ಆಶ್ಚರ್ಯಕರ ವಿಷಯಗಳು ತಿಳಿದುಬರುತ್ತವೆ. ಬಂಧುವರ್ಗದೊಂದಿಗೆ ವಿವಾದಗಳು ಉಂಟಾಗಬಹುದು. ವ್ಯಾಪಾರ ಮತ್ತು ಉದ್ಯೋಗ ವ್ಯವಹಾರಗಳು ನಿರೀಕ್ಷಿಸಿದ ರೀತಿಯಲ್ಲಿ ಸಾಗುತ್ತವೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವುದು ಒಳಿತಲ್ಲ. ಹಠಾತ್ ಪ್ರಯಾಣದ ಸೂಚನೆಗಳಿವೆ.
*ತುಲಾ ರಾಶಿ.*
ವ್ಯಾಪಾರ ವ್ಯವಹಾರಗಳಲ್ಲಿ ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಕೈಗೊಂಡ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಬಂಧುಗಳೊಂದಿಗೆ ವಿವಾದಗಳಿಗೆ ದೂರವಿರುವುದು ಉತ್ತಮ. ಉದ್ಯೋಗದಲ್ಲಿ ಕೆಲವು ತೊಂದರೆಗಳು ಎದುರಾಗಬಹುದು. ದೂರ ಪ್ರಯಾಣಗಳನ್ನು ಮುಂದೂಡುವುದು ಒಳಿತು. ಆಧ್ಯಾತ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳ ಮೇಲೆ ಆಸಕ್ತಿ ಹೆಚ್ಚಾಗುತ್ತದೆ.
*ವೃಶ್ಚಿಕ ರಾಶಿ.*
ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತೀರಿ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತೀರಿ. ಸ್ಥಿರಾಸ್ತಿ ಖರೀದಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ವೃತ್ತಿ ಮತ್ತು ವ್ಯಾಪಾರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಬಡ್ತಿ ಅವಕಾಶಗಳು ಹೆಚ್ಚಾಗುತ್ತವೆ. ಆಪ್ತರೊಂದಿಗೆ ಸೌಹಾರ್ದತೆ ಹೆಚ್ಚುತ್ತದೆ. ವಿಂದುವಿನೋದ ಕಾರ್ಯಕ್ರಮಗಳಿಗೆ ಧನವ್ಯಯ ಮಾಡುತ್ತೀರಿ.
*ಧನುಸ್ಸು ರಾಶಿ.*
ವ್ಯಾಪಾರಗಳು ಸಾಧಾರಣವಾಗಿ ಸಾಗುತ್ತವೆ. ಆಪ್ತರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗಬಹುದು. ಆರ್ಥಿಕ ಪರಿಸ್ಥಿತಿ ಸ್ವಲ್ಪ ನಿರಾಶೆಯನ್ನು ಉಂಟುಮಾಡುತ್ತದೆ. ಸಹೋದರರೊಂದಿಗೆ ಮಾಡಿಕೊಳ್ಳಬೇಕಾದ ಒಪ್ಪಂದಗಳನ್ನು ಮುಂದೂಡುತ್ತೀರಿ. ಉದ್ಯೋಗದಲ್ಲಿ ಕೆಲವೊಂದು ಗೊಂದಲದ ಪರಿಸ್ಥಿತಿಗಳು ಎದುರಾಗಬಹುದು. ಸಾಧ್ಯವಾದಷ್ಟು ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ದೈವಚಿಂತನೆ ಹೆಚ್ಚಾಗುತ್ತದೆ.
*ಮಕರ ರಾಶಿ.*
ಬಾಲ್ಯದ ಸ್ನೇಹಿತರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಾಲ ಕಳೆಯುತ್ತೀರಿ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯಗಳು ಹೆಚ್ಚಾಗುತ್ತವೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭಗಳು ದೊರೆಯುತ್ತವೆ. ಉದ್ಯೋಗದಲ್ಲಿ ಬಡ್ತಿ ಅವಕಾಶಗಳು ಹೆಚ್ಚಾಗುತ್ತವೆ. ಗೌರವ ಮತ್ತು ಮರ್ಯಾದೆಗೆ ಯಾವುದೇ ಕೊರತೆ ಇರುವುದಿಲ್ಲ. ಹಠಾತ್ ಧನಲಾಭದ ಸೂಚನೆಗಳಿವೆ.
*ಕುಂಭ ರಾಶಿ.*
ಕೈಗೊಂಡ ವ್ಯವಹಾರಗಳು ಮುಂದುವರಿಯದೆ ನಿರಾಶೆ ಹೆಚ್ಚಾಗುತ್ತದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ. ಆರ್ಥಿಕ ವ್ಯವಹಾರಗಳಲ್ಲಿ ಆಲೋಚನೆಗಳು ಸ್ಥಿರವಾಗಿರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ಅನಾವಶ್ಯಕ ಮಾತಿನ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
*ಮೀನ ರಾಶಿ.*
ವ್ಯಾಪಾರಗಳು ಲಾಭದಾಯಕವಾಗಿ ಸಾಗುತ್ತವೆ. ಕೈಗೊಂಡ ವ್ಯವಹಾರಗಳಲ್ಲಿ ಅಡೆತಡೆಗಳು ಎದುರಾದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಉದ್ಯೋಗದಲ್ಲಿ ಅಧಿಕಾರಿಗಳ ಅನುಗ್ರಹ ದೊರೆಯುತ್ತದೆ. ಮನೆಯಲ್ಲಿ ಹಾಗೂ ಹೊರಗೆ ಅನುಕೂಲಕರ ವಾತಾವರಣ ಇರುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯಗಳು ಹೆಚ್ಚಾಗುತ್ತವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.