ಸೆ.18ಕ್ಕೆ ಕನ್ನಡ-ತುಳು ಭಾಷೆಯ ಟಾಸ್ ಚಿತ್ರ ತೆರೆಗೆ
ಹುಬ್ಬಳ್ಳಿ, 10 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ನಾಣ್ಯ ಚಿಮ್ಮಿಸುವ ಮೂಲಕ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಯುವಕನ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ತಿರುವುಗಳು, ಪ್ರೀತಿ, ಹಾಸ್ಯ, ಸಾಹಸ, ಆಕ್ಷನ್ ಹಾಗೂ ಭಾವನಾತ್ಮಕ ಸನ್ನಿವೇಶಗಳನ್ನು ಒಳಗೊಂಡ ಕನ್ನಡ-ತುಳು ಭಾಷೆಯ ‘ಟಾಸ್’ ಚಿತ್ರ ಸೆ.18ರಂ
ಪತ್ರಿಕಾಗೋಷ್ಠಿಯಲ್ಲಿ ಚಿತ್ರ ತಂಡ


ಹುಬ್ಬಳ್ಳಿ, 10 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ನಾಣ್ಯ ಚಿಮ್ಮಿಸುವ ಮೂಲಕ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಯುವಕನ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ತಿರುವುಗಳು, ಪ್ರೀತಿ, ಹಾಸ್ಯ, ಸಾಹಸ, ಆಕ್ಷನ್ ಹಾಗೂ ಭಾವನಾತ್ಮಕ ಸನ್ನಿವೇಶಗಳನ್ನು ಒಳಗೊಂಡ ಕನ್ನಡ-ತುಳು ಭಾಷೆಯ ‘ಟಾಸ್’ ಚಿತ್ರ ಸೆ.18ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಅರ್ಜುನ ದೇವ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಾಸ್’ ವಿಭಿನ್ನ ಕಥಾಹಂದರ ಹೊಂದಿರುವ ಪ್ರೇಮಕಥೆ, ಹಾಸ್ಯ, ಸಾಹಸ ಹಾಗೂ ಕೌಟುಂಬಿಕ ಭಾವನೆಗಳನ್ನೊಳಗೊಂಡ ಚಿತ್ರವಾಗಿದೆ. ಪ್ರತಿಯೊಂದು ನಿರ್ಧಾರದ ಹಿಂದೆ ಒಂದು ಕಥೆ ಹಾಗೂ ಪ್ರತಿಯೊಂದು ಟಾಸ್‌ನ ಹಿಂದೆ ಒಂದು ನಿರ್ಧಾರವಿದೆ. ಇದೇ ಚಿತ್ರದ ಪ್ರಮುಖ ತಿರುಳಾಗಿದೆ ಎಂದರು.

ಚಿತ್ರದ ನಾಯಕ ಶಿವನಿಗೆ ಜೀವನದ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಮಾರ್ಗವನ್ನು ಆತನ ತಾಯಿ ಭಾಗ್ಯ ಕಲಿಸಿರುತ್ತಾಳೆ. ಹೀಗಾಗಿ ಯಾವುದೇ ಗೊಂದಲ ಎದುರಾದರೂ ನಾಣ್ಯ ಚಿಮ್ಮಿಸಿ ನಿರ್ಧಾರ ತೆಗೆದುಕೊಳ್ಳುವುದು ಶಿವನ ಜೀವನದ ಒಂದು ಭಾಗವಾಗುತ್ತದೆ. ನಾಣ್ಯದ ಹೆಡ್ಸ್ ಬಂದರೆ ‘ಹೌದು’, ಟೇಲ್ಸ್ ಬಂದರೆ ‘ಇಲ್ಲ’ ಎಂಬ ಸರಳ ಸೂತ್ರದಂತೆ ಆತ ಬದುಕಿನ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಾನೆ. ಇದೇ ಮುಂದೆ ಚಿತ್ರದ ಕಥೆಯಲ್ಲಿ ಹಲವು ಅನಿರೀಕ್ಷಿತ ತಿರುವುಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.

ಕನ್ನಡ ಹಾಗೂ ತುಳು ಭಾಷೆಯಲ್ಲಿ ನಿರ್ಮಾಣವಾಗಿರುವ ‘ಟಾಸ್’ನಲ್ಲಿ ಪ್ರೀತಿ, ಹಾಸ್ಯ, ಸಾಹಸ ಹಾಗೂ ಕೌಟುಂಬಿಕ ಭಾವನೆಗಳ ಸಮನ್ವಯವಿದೆ. ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ವಿಶ್ವಾಸವಿದೆ ಎಂದರು.

ನಾಯಕಿ ಸುತೇಚ ಶೆಟ್ಟಿ ಮಾತನಾಡಿ, ಇದು ತಮ್ಮ ಮೊದಲ ಚಿತ್ರವಾಗಿದ್ದು, ಎರಡು ಭಾಷೆಗಳಲ್ಲಿ ಚಿತ್ರ ತೆರೆಕಾಣುತ್ತಿರುವುದು ಸಂತಸ ತಂದಿದೆ. ಇಡೀ ಕುಟುಂಬ ಕುಳಿತು ವೀಕ್ಷಿಸಬಹುದಾದ ಚಿತ್ರ ಇದಾಗಿದ್ದು, ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಚಿತ್ರದಲ್ಲಿ ಅರ್ಜುನ ದೇವ್, ಗರುಡ ರಾಮ, ಬಾಲಾಜಿ ಮನೋಹರ, ಡಾ. ದೇವದಾಸ ಕಾಪಿಕಾಡ್, ನವೀನ ಪಡೀಲ್, ಅರವಿಂದ ಬೋಳಾರ, ಭೋಜರಾಜ ವಾಮಂಜೂರ, ಪ್ರಕಾಶ ತುಮ್ಮಿನಾಡು, ದೀಪಕ ರೈ, ಕೃತಿ ಶೆಟ್ಟಿ, ಸ್ವರಾಜ್ ಶೆಟ್ಟಿ, ಶೋಭರಾಜ್, ಪುಷ್ಪರಾಜ್ ಬೋಲ್ದಾರ್, ರೋಷನ್ ಶೆಟ್ಟಿ, ಚೈತ್ರಾ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರಕ್ಕೆ ಯೋಗರಾಜ್ ಭಟ್ ಹಾಗೂ ನಾಗರ್ಜುನ ಶರ್ಮಾ ಗೀತೆಗಳನ್ನು ರಚಿಸಿದ್ದಾರೆ. ಅರ್ಮಾನ್ ಮಲ್ಲಿಕ್, ಎಂ.ಸಿ. ಬಿಜು, ನಕಾಶ್ ಅಜೀಜ್ ಹಾಗೂ ಐಶ್ವರ್ಯ ರಂಗರಾಜನ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಸಂಗೀತ ನಿರ್ದೇಶಕ ಮಣಿಕಂಠ ಕದ್ರಿ ಮಾತನಾಡಿ, ಚಿತ್ರದಲ್ಲಿ ಐದು ಹಾಡುಗಳಿದ್ದು, ಉತ್ತಮವಾಗಿ ಮೂಡಿಬಂದಿವೆ. ಚಿತ್ರದ ಸಾಹಸ ದೃಶ್ಯಗಳಿಗೆ ಅರ್ಜುನ ಮಾಸ್ಟರ್ ಸಾಹಸ ನಿರ್ದೇಶನ ಮಾಡಿದ್ದಾರೆ. ಸೆ.18ರಂದು ರಾಜ್ಯಾದ್ಯಂತ ವಿವಿಧ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಾಗರ ಪೂಜಾರಿ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande