ಮಾಂಸದ ತ್ಯಾಜ್ಯ ವಿಲೇವಾರಿ ಶುಲ್ಕ ವಿರೋಧಿಸಿ ಮಾಂಸ ಮಾರಾಟ ಅಂಗಡಿ ಮಾಲೀಕರಿಂದ ಪ್ರತಿಭಟನೆಗೆ ನಿರ್ಧಾರ
ಮಾಂಸ ತ್ಯಾಜ್ಯ ವಿಲೇವಾರಿ ಗುತ್ತಿಗೆ ವಿರೋಧಿಸಿ ಅಂಗಡಿಗಳ ಬಂದ್ ಹಾಗೂ ಪ್ರತಿಭಟನೆ
ಮಾಂಸದ ತ್ಯಾಜ್ಯ ವಿಲೇವಾರಿ ಶುಲ್ಕ ವಿರೋಧಿಸಿ ಮಾಂಸ ಮಾರಾಟ ಅಂಗಡಿ ಮಾಲೀಕರಿಂದ ಪ್ರತಿಭಟನೆಗೆ ನಿರ್ಧಾರ


ಬೆಂಗಳೂರು, 01 ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿಗೆ ತಂದಿರುವ ನೂತನ ತ್ಯಾಜ್ಯ ವಿಲೇವಾರಿ ಶುಲ್ಕವನ್ನು ಖಂಡಿಸಿ, ನಗರದ ಮಾಂಸದ ಅಂಗಡಿ ಮಾಲೀಕರು ಸೆಪ್ಟೆಂಬರ್ 3 ಮತ್ತು 4 ರಂದು ಎರಡು ದಿನಗಳ ಕಾಲ ಮಾಂಸ ಮಾರಾಟ ಬಂದ್ಗೆ ಕರೆ ನೀಡಿದ್ದಾರೆ. ಇದರಿಂದಾಗಿ ಮಾಂಸ ಪ್ರಿಯರಿಗೆ ಶಾಕ್ ಎದುರಾಗಿದ್ದು, ನಗರದಲ್ಲಿ ಚಿಕನ್ ಹಾಗೂ ಮಟನ್ ಸಿಗುವುದು ಕಷ್ಟವಾಗಲಿದೆ.

ಪ್ರತಿಭಟನೆಗೆ ಪ್ರಮುಖ ಕಾರಣಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್ ನಿಯೋಜಿಸಿರುವ ಏಜೆನ್ಸಿಗಳು ಕೋಳಿ ಮತ್ತು ಕುರಿ ಮಾಂಸದ ತ್ಯಾಜ್ಯ ಸಂಗ್ರಹಣೆಗಾಗಿ ಹೊಸದಾಗಿ ವಿಧಿಸಿರುವ ಹೆಚ್ಚಿನ ಶುಲ್ಕವನ್ನು ವಿರೋಧಿಸಿ ಮಾಂಸದಂಗಡಿ ಮಾಲೀಕರು ಮತ್ತು ಪೌಲ್ಟ್ರಿ ಉದ್ಯಮಿಗಳ ಸಂಘಟನೆಗಳು ಈ ಪ್ರತಿಭಟನೆಗೆ ಮುಂದಾಗಿವೆ. ಸೆಪ್ಟೆಂಬರ್ 3 ಮತ್ತು 4 ರಂದು ನಗರದಾದ್ಯಂತ ಸುಮಾರು 6,000 ಕ್ಕೂ ಹೆಚ್ಚು ಚಿಕನ್ ಹಾಗೂ ಮಟನ್ ಅಂಗಡಿಗಳು ಮುಚ್ಚಲಿವೆ. ಅಲ್ಲದೆ, ಮಾಲೀಕರು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ.

ಮಾರುಕಟ್ಟೆ ದರಗಳ ವಿವರಸದ್ಯ ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾಂಸದ ಪ್ರಮುಖ ದರಗಳು ಈ ಕೆಳಗಿನಂತಿವೆ:ಕೋಳಿ ಮಾಂಸ : ವಿತ್ ಸ್ಕಿನ್ ಪ್ರತಿ ಕೆಜಿಗೆ ₹210 - ₹240, ಸ್ಕಿನ್ಲೆಸ್ ಪ್ರತಿ ಕೆಜಿಗೆ ₹240 - ₹270, ಮತ್ತು ಬೋನ್ಲೆಸ್ ಚಿಕನ್ ಪ್ರತಿ ಕೆಜಿಗೆ ₹360 - ₹450 ರವರೆಗೆ ಮಾರಾಟವಾಗುತ್ತಿದೆ.

ನಾಟಿ ಕೋಳಿ: ಗುಣಮಟ್ಟಕ್ಕೆ ಅನುಗುಣವಾಗಿ ಪ್ರತಿ ಕೆಜಿಗೆ ₹550 ರಿಂದ ₹720 ರಷ್ಟಿದೆ.ಕುರಿ ಮಾಂಸ: ನಗರದ ಪ್ರಮುಖ ಭಾಗಗಳಲ್ಲಿ ಪ್ರತಿ ಕೆಜಿಗೆ ₹800 ರಿಂದ ₹850 ರ ಆಸುಪಾಸಿನಲ್ಲಿದೆ.

ಆಹಾರ ಸುರಕ್ಷತಾ ಇಲಾಖೆ ತಪಾಸಣೆಇತ್ತೀಚೆಗೆ ನಗರದ ಪ್ರಮುಖ ಹೋಟೆಲ್ಗಳು ಮತ್ತು ಮಾಂಸದ ಅಂಗಡಿಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದಾರೆ. ಮಾಂಸದಂಗಡಿಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು, ನಿಷೇಧಿತ ರಾಸಾಯನಿಕ ಬಣ್ಣಗಳನ್ನು ಬಳಸದಿರುವುದು ಮತ್ತು ಪರವಾನಗಿ ನವೀಕರಿಸುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande