
ಕೋಲಾರ, 09 ಆಗಷ್ಟ್ (ಹಿ.ಸ):
ಆ್ಯಂಕರ್ : ನಗರದ ಹೊರವಲಯದಲ್ಲಿರುವ ಟಮಕ ಶ್ರೀ ದೇವರಾಜ ಅರಸ್ ಶುಶ್ರೂûಷ ಕಾಲೇಜಿನವತಿಯಿಂದ ಶನಿವಾರ ಸಾರ್ವಜನಿಕರಿಗಾಗಿ ಪೌಷ್ಠಿಕಾಂಶ ಪ್ರದರ್ಶನವನ್ನು ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮೂರನೇ ಮಹಡಿಯಲ್ಲಿ ಏರ್ಪಡಿಸಲಾಗಿತ್ತು. ಸಮತೋಲಿತ ಪೋಷಣೆ, ಆರೋಗ್ಯಕರ ಆಹಾರ ಪದ್ಧತಿ, ಪೌಷ್ಟಿಕಾಂಶದ ಕೊರತೆಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸಕ ಆಹಾರದ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸರಿಯಾದ ಪೌಷ್ಟಿಕಾಂಶದ ಪಾತ್ರ ವಿದ್ಯಾರ್ಥಿಗಳು ವಿವಿಧ ಪೌಷ್ಟಿಕಾಂಶ ಸಂಬಂಧಿತ ಚಾರ್ಟ್ಗಳು, ಪೋಸ್ಟರ್ ಗಳ ಮಾದರಿಗಳು, ಆಹಾರ ಮಾದರಿಗಳು ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಮತ್ತು ಆಹಾರ ಪದ್ಧತಿಗಳ ಕುರಿತು ಆರೋಗ್ಯ ಶಿಕ್ಷಣವನ್ನು ಒದಗಿಸಲು ಸಾರ್ವಜನಿಕರೊಂದಿಗೆ ಸಂವಹನ ನಡೆಸಿದರು.ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಬಗ್ಗೆ ತಮ್ಮ ಸೈದ್ಧಾಂತಿಕ ಜ್ಞಾನವನ್ನು ಪ್ರಾಯೋಗಿಕ ನೆಲೆಯಲ್ಲಿ ಅನ್ವಯಿಸಲು ಅವಕಾಶವನ್ನು ಒದಗಿಸಿತು.
ಕಾರ್ಯಕ್ರಮದಲ್ಲಿ ಆರ್. ಎಲ್.ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಮುಖ್ಯ ಮೇಲ್ವಿಚಾರಕ ಡಾ.ಜೆ.ಕೃಷ್ಣಪ್ಪ, ನರ್ಸಿಂಗ್ ಅಧಿಕಾರಿ ಡಾ.ಜೀನತ್ , ಪ್ರಾಂಶುಪಾಲ ಡಾ. ಜಿ ವಿಜಯಲಕ್ಷಿ÷್ಮ, ಪ್ರೊಫೆಸರ್ ಜೈರಾಕಿನಿ ಆರುಣಾ, ಡಾ.ಮಾಲಾತಿ ಹಾಗೂ ಪ್ರೊಫೆಸರ್ ಗಾಯತ್ರಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್