ವೀರಶೈವ - ಲಿಂಗಾಯಿತ ಎರಡೂ ಒಂದೇ ಎನ್ನುವಲ್ಲಿ ಎನ್. ತಿಪ್ಪಣ್ಣ ಅವರ ಪಾತ್ರ ದೊಡ್ಡದು : ಸಚಿವ ಈಶ್ವರ ಖಂಡ್ರೆ
ಬಳ್ಳಾರಿ, 09 ಆಗಸ್ಟ್ (ಹಿ.ಸ.) ಆ್ಯಂಕರ್ : ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಸಿದ್ದಗಂಗಾ ಡಾ. ಶಿವಕುಮಾರ ಶ್ರೀಗಳ ನೇತೃತ್ವದಲ್ಲಿ ಇತ್ಯರ್ಥಪಡಿಸುವಲ್ಲಿ ದಿವಂಗತ ಎನ್. ತಿಪ್ಪಣ್ಣ ಅವರ ಪಾತ್ರ ಮಹತ್ತರವಾದದ್ದು ಎಂದು ಸಚಿವ ಈಶ್ಚರ ಖಂಡ್ರೆ ಅವರು ತಿಳಿಸಿದ್ದಾರೆ. ಎನ್. ತಿಪ್ಪಣ್ಣ ಅವರ ಪ್ರಥಮ
ವೀರಶೈವ - ಲಿಂಗಾಯಿತ ಎರಡೂ ಒಂದೇ ಎನ್ನುವಲ್ಲಿ ಎನ್. ತಿಪ್ಪಣ್ಣ ಅವರ ಪಾತ್ರ ದೊಡ್ಡದು : ಸಚಿವ ಈಶ್ವರ ಖಂಡ್ರೆ


ವೀರಶೈವ - ಲಿಂಗಾಯಿತ ಎರಡೂ ಒಂದೇ ಎನ್ನುವಲ್ಲಿ ಎನ್. ತಿಪ್ಪಣ್ಣ ಅವರ ಪಾತ್ರ ದೊಡ್ಡದು : ಸಚಿವ ಈಶ್ವರ ಖಂಡ್ರೆ


ವೀರಶೈವ - ಲಿಂಗಾಯಿತ ಎರಡೂ ಒಂದೇ ಎನ್ನುವಲ್ಲಿ ಎನ್. ತಿಪ್ಪಣ್ಣ ಅವರ ಪಾತ್ರ ದೊಡ್ಡದು : ಸಚಿವ ಈಶ್ವರ ಖಂಡ್ರೆ


ವೀರಶೈವ - ಲಿಂಗಾಯಿತ ಎರಡೂ ಒಂದೇ ಎನ್ನುವಲ್ಲಿ ಎನ್. ತಿಪ್ಪಣ್ಣ ಅವರ ಪಾತ್ರ ದೊಡ್ಡದು : ಸಚಿವ ಈಶ್ವರ ಖಂಡ್ರೆ


ವೀರಶೈವ - ಲಿಂಗಾಯಿತ ಎರಡೂ ಒಂದೇ ಎನ್ನುವಲ್ಲಿ ಎನ್. ತಿಪ್ಪಣ್ಣ ಅವರ ಪಾತ್ರ ದೊಡ್ಡದು : ಸಚಿವ ಈಶ್ವರ ಖಂಡ್ರೆ


ಬಳ್ಳಾರಿ, 09 ಆಗಸ್ಟ್ (ಹಿ.ಸ.)

ಆ್ಯಂಕರ್ : ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಸಿದ್ದಗಂಗಾ ಡಾ. ಶಿವಕುಮಾರ ಶ್ರೀಗಳ ನೇತೃತ್ವದಲ್ಲಿ ಇತ್ಯರ್ಥಪಡಿಸುವಲ್ಲಿ ದಿವಂಗತ ಎನ್. ತಿಪ್ಪಣ್ಣ ಅವರ ಪಾತ್ರ ಮಹತ್ತರವಾದದ್ದು ಎಂದು ಸಚಿವ ಈಶ್ಚರ ಖಂಡ್ರೆ ಅವರು ತಿಳಿಸಿದ್ದಾರೆ.

ಎನ್. ತಿಪ್ಪಣ್ಣ ಅವರ ಪ್ರಥಮ ಪುಣ್ಯಸ್ಮರಣೆಯನ್ನು ಭಾನುವಾರ ದೀಪ ಬೆಳಗಿಸಿ, ಉದ್ಘಾಟಿಸಿ ಅವರು ಮಾತನಾಡಿದರು.

ವೀರಶೈವ - ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದದ ಸಂದರ್ಭದಲ್ಲಿ ಎನ್. ತಿಪ್ಪಣ್ಣ ಅವರ ಸಲಹೆಯಂತೆ ಸಿದ್ದಗಂಗಾ ಶ್ರೀಗಳನ್ನು ಸಂಪರ್ಕ ಮಾಡಿದಾಗ, ಶ್ರೀಗಳು, ವೀರಶೈವ - ಲಿಂಗಾಯತ ಎರೆಡೂ ಒಂದೇ ಎನ್ನುವುದು ಸ್ಪಷ್ಟವಾಗಿತ್ತು. ಆ ನಂತರ ಎನ್. ತಿಪ್ಪಣ್ಣ ಅವರು ನಾಡಿನ ಗುರು - ವಿರಕ್ತರನ್ನು ಒಗ್ಗೂಡಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಬಲವರ್ಧನೆಗೆ ವಿಶ್ವನಾಥರೆಡ್ಡಿ ಮುದ್ನಾಳ್, ಭೀಮಣ್ಣ ಖಂಡ್ರೆ, ಎನ್. ತಿಪ್ಪಣ್ಣ ಮತ್ತು ಶ್ಯಾಮನೂರು ಶಿವಶಂಕರಪ್ಪ ಅವರ ಶ್ರಮ, ಬದ್ಧತೆ ಮತ್ತು ನಿಸ್ವಾರ್ಥತೆ ಸದಾ ಸ್ಮರಣೀಯ ಎಂದರು.

ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ದಿವ್ಯ ನೇತೃತ್ವವಹಿಸಿ ಎನ್. ತಿಪ್ಪಣ್ಣ ಅವರು ಜೀವನದುದ್ದಕ್ಕೂ ಸಮಾಜಕ್ಕಾಗಿ, ಸೇವೆಗಾಗಿ ಸಾರ್ಥಕತೆಯನ್ನು ಸಾಧಿಸಿ ಸದಾ ಸ್ಮರಣೀಯರಾಗಿ ನಮ್ಮೊಂದಿಗಿದ್ದಾರೆ ಎಂದು ಆಶೀರ್ವಚನದಲ್ಲಿ ತಿಳಿಸಿದರು.

ಕೊಪ್ಪಳದ ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯವಹಿಸಿ, ನೋಡುವ ದೃಷ್ಟಿಕೋನವು ಅತಿ ಮುಖ್ಯ. ಮನುಷ್ಯ ಹುಟ್ಡಿದ ಕ್ಷಣವೇ ಸಾವಿನ ಆರಂಭ. ಹುಟ್ಟು - ಸಾವು ಜೊತೆ ಜೊತೆ ಸಾಗುತ್ತವೆ. ಹುಟ್ಟು ಖುಷಿಯನ್ನು, ಸಾವು ಭಯವನ್ನು ಮೂಡಿಸುತ್ತದೆ. 'ನನ್ನದು' ಎನ್ನುವುದನ್ನು ಸಾವು ಕಿತ್ತುಕೊಳ್ಳುವ ಕಾರಣ ಸಾವು ದುಃಖ, ನೋವು ಮೂಡಿಸುತ್ತದೆ. ಎನ್. ತಿಪ್ಪಣ್ಣ ಅವರ ಸೇವೆ, ಬದ್ಧತೆ ಮತ್ತು ನಿಸ್ವಾರ್ಥಗಳ ಸ್ಮರಣೆಯೇ ಪುಣ್ಯಸ್ಮರಣೆ ಎಂದು ಆಶೀರ್ವಚನ ನೀಡಿದರು.

ಶಾಸಕ ನಾರಾ ಭರತರೆಡ್ಡಿ ಅವರು ಅತಿಥಿಗಳಾಗಿ, ಎನ್. ತಿಪ್ಪಣ್ಣ ಅವರು ವೃತ್ತಿ, ಕುಟುಂಬ, ರಾಜಕೀಯ, ಶಿಕ್ಷಣ, ಜನಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ್ದಾರೆ. ಎನ್. ತಿಪ್ಪಣ್ಣ ಅವರು ಕೊಡುಗೈ ದಾನಿಗಳಾಗಿದ್ದರು. ಎನ್. ತಿಪ್ಪಣ್ಣ ಅವರ ಹೆಸರಲ್ಲಿ ರಸ್ತೆಗೆ ನಾಮಕರಣಕ್ಕೆ ಶ್ರಮಿಸುವೆ. 'ಟಚ್ ಫಾರ್ ಲೈಫ್' ಫೌಂಡೇಶನ್ ನಿಂದ ಶಿಷ್ಯವೇತನವನ್ನು ನೀಡಲಾಗುತ್ತದೆ ಎಂದರು.

ಮುಖಂಡರಾದ ಅಲ್ಲಂ ವೀರಭದದ್ರಪ್ಪ ಅವರು, ಎನ್.ತಿಪ್ಪಣ್ಣ ಮತ್ತು ಶ್ರೀಮತಿ ಗೌರಮ್ಮ ಅವರ ದಾಸೋಹ, ಸೇವೆ, ನಿಸ್ವಾರ್ಥ ಜೀವನ ಹಾಗೂ ಅಲ್ಲಂ ಕರಿಬಸಪ್ಪ ಮತ್ತು ಎನ್. ತಿಪ್ಪಣ್ಣ ಅವರ ದೂರದೃಷ್ಟಿ ಅಗಾಧ ಎಂದು ಹೇಳಿದರು.

ವಿಶ್ರಾಂತ ಉಪ ಲೋಕಾಯುಕ್ತರಾದ ಪತ್ರಿ ಬಸವನಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಎನ್. ತಿಪ್ಪಣ್ಣ ಅವರು ಮಾನವೀಯತೆಯನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುವುದನ್ನು ರೂಢಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಮುಖಂಡರಾದ ಬಸವರಾಜ ಪಾಟೀಲ್ ಅನ್ವರಿ, ಮಾಜಿ ಸಚಿವರಾದ ಎಚ್. ಏಕಾಂತಯ್ಯ, ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾದ ಮಂಜುನಾಥ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೊಡ್ಡಬಸವ ಗವಾಯಿಗಳು ಮತ್ತು ತಂಡವು ಪ್ರಾರ್ಥನೆ ಸಲ್ಲಿಸಿತು. ಡಾ. ಎನ್. ಮಂಜುನಾಥ್ ಅವರು ಸ್ವಾಗತ ಕೋರಿದರು. ಹಿರಿಯ ವಕೀಲರಾದ ಬಿ.ವಿ. ಬಸವರಾಜ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಲಿಂಗೈಕ್ಯ ಎನ್. ತಿಪ್ಪಣ್ಣ ಅವರ ಸಾಧನೆಗಳನ್ನು - ಜೀವನ ಶೈಲಿಯನ್ನು ಸ್ಮರಿಸಿದರು. ಶ್ರೀಗಳು ಡಾ. ಎನ್. ತಿಮ್ಮಣ್ಣ ಮತ್ತು ಶ್ರೀಮತಿ ಗೌರಮ್ಮ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.

ಮರೇಗೌಡ ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಐಎಎಸ್ ಅಧಿಕಾರಿಗಳಾದ ಜಿ.ಎನ್. ಶಿವಮೂರ್ತಿ ಅವರು ವಂದನಾರ್ಪಣೆ ಸಲ್ಲಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande