ಹೀರದ ಸೂಗಮ್ಮ ಶಾಲೆ ಶತಮಾನೋತ್ಸವ : ವಿಶ್ರಾಂತ ಗುರುಗಳ ನಮನ
ಬಳ್ಳಾರಿ, 09 ಆಗಸ್ಟ್ (ಹಿ.ಸ.) ಆ್ಯಂಕರ್ : ವೀರಶೈವ ವಿದ್ಯಾವರ್ಧಕ ಸಂಘದ ಹೀರದ ಸೂಗಮ್ಮ ಶಾಲೆಯ ಶತಮಾನೋತ್ಸವದ ಎರೆಡನೇ ದಿನವಾದ ಭಾನುವಾರ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮಗೆ ಬೋಧಿಸಿದ್ದ ವಿಶ್ರಾಂತ ಗುರುವೃಂದಕ್ಕೆ ಗೌರವ ಸಲ್ಲಿಸಿ ಅವರ ಸೇವೆಯನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿ ಅಭಿನಂದಿಸಲಾಯಿತು.
ಹೀರದ ಸೂಗಮ್ಮ ಶಾಲೆ ಶತಮಾನೋತ್ಸವ : ವಿಶ್ರಾಂತ ಗುರುಗಳ ನಮನ


ಹೀರದ ಸೂಗಮ್ಮ ಶಾಲೆ ಶತಮಾನೋತ್ಸವ : ವಿಶ್ರಾಂತ ಗುರುಗಳ ನಮನ


ಬಳ್ಳಾರಿ, 09 ಆಗಸ್ಟ್ (ಹಿ.ಸ.)

ಆ್ಯಂಕರ್ : ವೀರಶೈವ ವಿದ್ಯಾವರ್ಧಕ ಸಂಘದ ಹೀರದ ಸೂಗಮ್ಮ ಶಾಲೆಯ ಶತಮಾನೋತ್ಸವದ ಎರೆಡನೇ ದಿನವಾದ ಭಾನುವಾರ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮಗೆ ಬೋಧಿಸಿದ್ದ ವಿಶ್ರಾಂತ ಗುರುವೃಂದಕ್ಕೆ ಗೌರವ ಸಲ್ಲಿಸಿ ಅವರ ಸೇವೆಯನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿ ಅಭಿನಂದಿಸಲಾಯಿತು.

ಕೊಟ್ಟೂರು ಸಂಸ್ಥಾನ ಮಠದ ಗುರು ಬಸವಲಿಂಗ ಸ್ವಾಮಿಗಳು ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಜನತೆ ಅಕ್ಷರವಂತರು ಆಗಬೇಕು ಎನ್ನುವ ದೂರುದೃಷ್ಟಿಯಿಂದಾಗಿ

ವೀರಶೈವ ವಿದ್ಯಾವರ್ಧಕ ಸಂಘ ಆರಂಭವಾಯಿತು. ವೀವಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶಿಕ್ಷಣ ಸಂಸ್ಥೆಗಳು ಆರಂಭಗೊಂಡು ಜ್ಞಾನದ ಬೆಳಕು ಅನೇಕರಲ್ಲಿ ಪ್ರಜ್ವಲಿಸುತ್ತಿದೆ ಎಂದು ಆಶೀರ್ವದಿಸಿದರು.

ಶ್ರೀಧರಗಡ್ಡೆಯ ಮರಿ ಕೊಟ್ಟೂರು ದೇಶಿಕರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಕಣೇಕಲ್ ಮಹಾಂತೇಶ್, ಕಾರ್ಯದರ್ಶಿಗಳಾದ ಡಾ. ಅರವಿದ ಪಟೇಲ್, ಸಹ ಕಾರ್ಯದರ್ಶಿಗಳಾದ ಯ್ಯಾಳ್ಪಿ ಪಂಪನಗೌಡ, ಖಜಾಂಚಿಗಳಾದ ಬೈಲುವದ್ದಿಗೇರಿ ಎರ್ರಿಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಾಲಿ ಪ್ರಕಾಶ್, ಕಲ್ಗುಡಿ ಮಂಜುನಾಥ, ವರಕನಹಳ್ಳಿ ಮೋಹನರೆಡ್ಡಿ, ಮೆಟ್ರಿ ಮಲ್ಲಿಕಾರ್ಜುನ, ಹಿರಿಯರಾದ ಅರವಿ ಬಸವನಗೌಡ, ಡಾ.ಎಸ್.ಜೆ.ವಿ. ಮಹಿಪಾಲ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹೀರದಸೂಗಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಸಿರಿಗೇರಿ ಪನ್ನರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಎನ್. ವೀರಭದ್ರಗೌಡ ಅವರು ಸ್ವಾಗತಿಸಿದರು. ಅಮಾತಿ ಬಸವರಾಜ್ ಮತ್ತು ಜಯಂತಿ ಅವರು ಕಾರ್ಯಕ್ರಮ ನಿರೂಪಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande