ಬಿಸಿಲಹಳ್ಳಿ : ಆ.10 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ, 08 ಆಗಸ್ಟ್ (ಹಿ.ಸ.) ಆ್ಯಂಕರ್ : ನಗರದ 110/11 ಕೆ.ವಿ ಬಿಸಿಲಹಳ್ಳಿ ವಿದ್ಯುತ್ ಉಪ-ಕೇಂದ್ರದ ವ್ಯಾಪ್ತಿಯಲ್ಲಿ ಎಫ್-63 ಮತ್ತು ಎಫ್-64 ಫೀಡರ್ಗಳಲ್ಲಿ ‘ಲಿಂಕ್ ಲೈನ್’ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿ0ದ ಆಗಸ್ಟ್ 10 ರಂದು ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಪೂರೈಕೆಯ
ಬಿಸಿಲಹಳ್ಳಿ : ಆ.10 ರಂದು ವಿದ್ಯುತ್ ವ್ಯತ್ಯಯ


ಬಳ್ಳಾರಿ, 08 ಆಗಸ್ಟ್ (ಹಿ.ಸ.)

ಆ್ಯಂಕರ್ : ನಗರದ 110/11 ಕೆ.ವಿ ಬಿಸಿಲಹಳ್ಳಿ ವಿದ್ಯುತ್ ಉಪ-ಕೇಂದ್ರದ ವ್ಯಾಪ್ತಿಯಲ್ಲಿ ಎಫ್-63 ಮತ್ತು ಎಫ್-64 ಫೀಡರ್ಗಳಲ್ಲಿ ‘ಲಿಂಕ್ ಲೈನ್’ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿ0ದ ಆಗಸ್ಟ್ 10 ರಂದು ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ನಗರ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*

ಎಫ್-64 ಫೀಡರ್ ವ್ಯಾಪ್ತಿ: ಎಸ್.ಆರ್.ಎಂ. ಲೇಔಟ್, ಸಂಸ್ಕೃತಿ ಶಾಲೆ, ವಿಶಾಲ ನಗರ, ಹನುಮಾನ ನಗರ, ಬಿ.ಗೋನಾಳ್, ಹೌಸಿಂಗ್ ಬೋರ್ಡ್, ವೆಂಕಟಲಕ್ಷಿö್ಮ ನಗರ, ಅಂಜಿನಪ್ಪ ನಗರ, ಎಸ್.ಆರ್.ಪಿ ಕಾಲೋನಿ, ಎಮ್.ಜಿ. ಅನಂತಪುರ ರಸ್ತೆ, ಆಗಡಿ ಮಾರೆಪ್ಪ ಕಾಂಪೌ0ಡ್, ದತ್ತ ಸಾಯಿ ನಗರ ಹಾಗೂ ಆಶ್ರಯ ಕಾಲೋನಿ.

ಎಫ್-63 ಫೀಡರ್ ವ್ಯಾಪ್ತಿ: ರೂಪನ್ಗುಡಿ, ಗ್ರಾಂಡ್ ಫಂಕ್ಷನ್ ಹಾಲ್, ವೆಂಕಟರಮಣ ನಗರ, ನಬೀ ಕಾಲೋನಿ, ವರಬಸಪ್ಪ ಗುಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಈ ಭಾಗದ ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಜೆಸ್ಕಾಂ ಸಿಬ್ಬಂದಿಯೊ0ದಿಗೆ ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande