ಮನ್ ಕಿ ಬಾತ್ 137ನೇ ಸಂಚಿಕೆ ವೀಕ್ಷಿಸಿದ ವಿಜಯೇಂದ್ರ
137ನೇ ಸಂಚಿಕೆ ವೀಕ್ಷಿಸಿದ ವಿಜಯೇಂದ್ರ
b-y-vijayendra-watches-137th-mann-ki-baat-at-bjp-karnataka-office


ಬೆಂಗಳೂರು, 30 ಆಗಸ್ಟ್ (ಹಿ.ಸ.)

ಆ್ಯಂಕರ್:

ಬಿಜೆಪಿ ಕರ್ನಾಟಕ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ 137ನೇ ಸಂಚಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸಬಲೀಕರಣದಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಪ್ರಸ್ತಾಪಿಸಿದರು. ಯೋಜನೆಯ ಫಲಾನುಭವಿಗಳಲ್ಲಿ ಸುಮಾರು 46ರಷ್ಟು ಮಹಿಳೆಯರಿದ್ದು, ದೇಶಾದ್ಯಂತ ಸುಮಾರು 35 ಲಕ್ಷ ಮಹಿಳೆಯರು ಈ ಯೋಜನೆಯ ನೆರವಿನಿಂದ ತಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ತಿಳಿಸಿದರು.

ಬೆಂಗಳೂರು ಮೂಲದ ಟಿ.ಎಸ್. ನಿಂಗಮ್ಮ ಅವರ ಯಶೋಗಾಥೆಯನ್ನೂ ಪ್ರಧಾನಿ ಮೋದಿ ಅವರು ‘ಮನ್ ಕಿ ಬಾತ್’ನಲ್ಲಿ ಹಂಚಿಕೊಂಡರು. ನಿಂಗಮ್ಮ ಅವರು ಪತಿಯೊಂದಿಗೆ ಸಣ್ಣ ಇಡ್ಲಿ–ದೋಸೆ–ಸಾಂಬಾರ್ ಗಾಡಿ ನಡೆಸುತ್ತಿದ್ದರು. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ನೆರವಿನಿಂದ ಗಾಡಿಯನ್ನು ಮೇಲ್ದರ್ಜೆಗೇರಿಸಿ, ಆಹಾರ ಪದಾರ್ಥಗಳ ಮೆನುವನ್ನು ವಿಸ್ತರಿಸಿ ಆದಾಯ ಹೆಚ್ಚಿಸಿಕೊಂಡಿದ್ದಾರೆ. ಇದರಿಂದ ತಮ್ಮ ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಿದೆ ಎಂದು ಪ್ರಧಾನಿ ವಿವರಿಸಿದರು.

ಇದೇ ವೇಳೆ ‘ನಶಾ ಮುಕ್ತ ಭಾರತ’ ನಿರ್ಮಾಣ ಹಾಗೂ ತಾಯಂದಿರು ಮತ್ತು ಸಹೋದರಿಯರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.“ಪ್ರತಿಯೊಬ್ಬ ನಾಗರಿಕನ ಶಕ್ತಿ, ಘನತೆ ಮತ್ತು ಸಬಲೀಕರಣದ ಮೂಲಕ ‘ವಿಕಸಿತ ಭಾರತ’ ನಿರ್ಮಾಣವಾಗಲಿದೆ. ಕರ್ನಾಟಕದ ಮಹಿಳೆಯರೂ ಈ ಪರಿವರ್ತನೆಯ ಭಾಗವಾಗಿರುವುದು ಹೆಮ್ಮೆಯ ಸಂಗತಿ,” ಎಂದು ವಿಜಯೇಂದ್ರ ಅಭಿಪ್ರಾಯಪಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande