
ಕೋಲಾರ, 30 ಆಗಸ್ಟ್ (ಹಿ.ಸ)
ಆ್ಯಂಕರ್ : ಕೆಜಿಎಫ್ನಲ್ಲಿ ಬುದ್ದನ ಪಾಳಿ ಭಾಷೆಯ ಪುಸ್ತಕವನ್ನು ರಚಿಸಿರುವ ಹಿರಿಯ ಉಪಾಸಕ ಡಾ ಆರ್.ಪ್ರಭುರಾಂ ಅವರ ಮಹತ್ತರ ಕಾರ್ಯವನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಶ್ಲಾಘಿಸಿದ್ದಾರೆ.
ಅಶೋಕ ದಮ್ಮ ಧೂತ ಬುದ್ದ ಸಂಘದ ವತಿಯಿಂದ ಹಿರಿಯ ಉಪಾಸಕ ಡಾ. ಆರ್.ಪ್ರಭುರಾಂ ಅವರು ಹೊರತಂದಿರುವ ಬುದ್ದನ ಭಾಷೆ ಪಾಳಿ ಪುಸ್ತಕವನ್ನು ಸ್ವೀಕರಿಸಿದ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಬುದ್ದನ ಪಾಳಿ ಭಾಷೆಯ ಪುಸ್ತಕವನ್ನು ಲೋಕಾರ್ಪಣೆ ಮಾಡಿದ ಪ್ರಭುರಾಂ ಅವರ ಸಾಧನೆಯು ಮಹತ್ತರವಾದದ್ದೆಂದು ಶ್ಲಾಘಿಸಿ ಇದು ಸಮಾಜಕ್ಕೆ ದೊಡ್ಡ ಪ್ರೇರಣೆ ಎಂದು ಅಭಿನಂದಿಸಿದರು.
ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ತಮ್ಮ ಸಂದೇಶದಲ್ಲಿ ಪ್ರಸಂಶೆ ಮಾಡಿದ್ದಾರೆ. ಬುದ್ದನ ಭಾಷೆಯಾದ ಪಾಳಿ ಪುಸ್ತಕವನ್ನು ಸಂಶೋಧಿಸಿ, ಪ್ರಕಟಿಸಿ, ಲೋಕಾರ್ಪಣೆ ಮಾಡಿದ ಬುದ್ದ ಸಂಘದ ಹಿರಿಯ ಉಪಾಸಕ ಡಾ. ಆರ್.ಪ್ರಭುರಾಂ ಅವರು, ಪಾಳಿ ಭಾಷೆಯು ಸಾಮಾನ್ಯ ಓದುಗರಿಗೂ ಅರ್ಥವಾಗುವಂತೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸುಲಭವಾಗಿ ಬರೆದಿದ್ದಾರೆ. ಪಾಳಿ ಭಾಷೆಯ ಕುರಿತು ಸುದೀರ್ಘವಾದ ಸಂಶೋಧನೆ ಮತ್ತು ಪುಸ್ತಕ ರಚನೆಗೆ, ಪಾಳಿ ಭಾಷೆ-ಬುದ್ಧನ ಭಾಷೆ-ಅವರ ತಿಳುವಳಿಕೆಯನ್ನು ಗಾಢವಾಗಿಸಲು ಮತ್ತು ಧಮ್ಮದ ಪದಗಳ ಅಧ್ಯಯನದ ಮೂಲಕ ಅವರ ಅಭ್ಯಾಸವನ್ನು ಬಲಪಡಿಸಲು ಪಾಳಿ ಪುಸ್ತಕವನ್ನು ಪ್ರಕಟಿಸಿ, ಸಾರ್ವಜನಿಕರಿಗೆ ಒದಗಿಸಲು ಮಾಡಿರುವ ಕಾರ್ಯ ಶ್ಲಾಘನೀಯವೆಂದರು.
ಬೌದ್ಧಸಂಪ್ರದಾಯ ಮಗಧವನ್ನು ಪಾಳಿ ಭಾಷೆಯ ಮೂಲಸ್ಥಾನವೆಂದು ಪರಿಗಣಿಸಲಾಗಿದೆ. ಪಾಳಿ ಸಾಹಿತ್ಯದಲ್ಲಿ ಸಾಕಷ್ಟು ಸಂಶೋಧನೆಯಾಗದಿದ್ದ ಹಿಂದಿನ ಶತಮಾನದಲ್ಲಿ ಮತ್ತು ಶತಮಾನದ ಪೂರ್ವಪಾದದಲ್ಲಿ ಪಾಳಿ ಭಾಷೆಯ ಮೂಲಸ್ಥಾನದ ಬಗ್ಗೆ ಕೆಲವು ಪಾಶ್ಚಾತ್ಯ ಪಂಡಿತರು ವಿವಿಧ ಮತಗಳನ್ನು ಪ್ರತಿಪಾದಿಸಿದ್ದರು. ಕಾಲಾನಂತರದಲ್ಲಿ ಇದು ಬೌದ್ಧ ಧರ್ಮಗ್ರಂಥಗಳ ದೇಹವನ್ನು ರೂಪಿಸುವ 'ಪುಸ್ತಕಗಳ ಸರಣಿ' ಎಂದು ಅರ್ಥೈಸಲು ವಿಸ್ತರಿಸಲಾಗಿದೆ. ಪಠ್ಯಗಳನ್ನು ಸಂರಕ್ಷಿಸಿರುವ ಭಾಷೆಯ ಹೆಸರು ಪಾಳಿ ಆಗಿರುತ್ತದೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ವಿವರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್