
ನವದೆಹಲಿ, 29 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಸುತ್ತಮುತ್ತಲಿನ ನಗರಗಳಲ್ಲಿ ಸಿಎನ್‌ಜಿ ಬೆಲೆಯನ್ನು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಕೆಜಿಗೆ ₹3.89ರಷ್ಟು ಹೆಚ್ಚಿಸಿದೆ. ಪರಿಷ್ಕೃತ ದರಗಳು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬಂದಿವೆ.
ಬೆಲೆ ಏರಿಕೆಯ ಬಳಿಕ ದೆಹಲಿಯಲ್ಲಿ ಸಿಎನ್‌ಜಿ ದರ ಕೆಜಿಗೆ ₹86.98ಕ್ಕೆ ಏರಿಕೆಯಾಗಿದೆ. ಈ ಹಿಂದೆ ₹83.09 ಇತ್ತು. ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ₹95.59, ಶಾಮ್ಲಿ ಹಾಗೂ ಮೀರತ್‌ನಲ್ಲಿ ₹95.47, ಗುರುಗ್ರಾಮದಲ್ಲಿ ₹92.01 ಮತ್ತು ಹರಿಯಾಣದ ರೇವಾಡಿಯಲ್ಲಿ ₹91.59ಕ್ಕೆ ಹೊಸ ದರ ನಿಗದಿಯಾಗಿದೆ.
ಸಿಎನ್‌ಜಿಗೆ ಅಗತ್ಯವಿರುವ ಅನಿಲದ ದೊಡ್ಡ ಪ್ರಮಾಣವನ್ನು ಆಮದು ಮಾಡಿಕೊಳ್ಳುವ ದ್ರವೀಕೃತ ನೈಸರ್ಗಿಕ ಅನಿಲದಿಂದ ಪೂರೈಸಲಾಗುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾದ ಬಳಿಕ ಮಾರುಕಟ್ಟೆಯಲ್ಲಿ ಇದರ ಬೆಲೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಿಎನ್‌ಜಿ ದರ ಏರಿಕೆ ಮಾಡಲಾಗಿದೆ ಎಂದು ಐಜಿಎಲ್ ತಿಳಿಸಿದೆ.
ಈ ವರ್ಷ ಸಿಎನ್‌ಜಿ ದರ ಏರಿಕೆಯಾಗುತ್ತಿರುವುದು ಇದು ಐದನೇ ಬಾರಿಯಾಗಿದೆ. ಇದಕ್ಕೂ ಮುನ್ನ ಕೇವಲ 10 ದಿನಗಳ ಅವಧಿಯಲ್ಲಿ ನಾಲ್ಕು ಹಂತಗಳಲ್ಲಿ ಒಟ್ಟು ಕೆಜಿಗೆ ₹6ರಷ್ಟು ಬೆಲೆ ಹೆಚ್ಚಿಸಲಾಗಿತ್ತು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.