ರಾಮಕೃಷ್ಣ ಹೆಗಡೆ ದೂರದೃಷ್ಟಿಯ ನಾಯಕ, ಸಂಸ್ಥೆ ಹಾಗೂ ನಾಯಕರ ನಿರ್ಮಾತೃ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್
ಬೆಂಗಳೂರು, 29 ಆಗಸ್ಟ್ (ಹಿ.ಸ.): ಆ್ಯಂಕರ್: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರು ಮಹಾನ್ ರಾಜನೀತಿಜ್ಞ, ರಾಷ್ಟ್ರವಾದಿ ಹಾಗೂ ನಾಯಕರನ್ನು ರೂಪಿಸಿದ ಮುತ್ಸದ್ದಿ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಬಣ್ಣಿಸಿದರು. ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ರಾಮಕೃಷ್ಣ ಹೆಗ
ಉಪ ರಾಷ್ಟ್ರಪತಿ


ಬೆಂಗಳೂರು, 29 ಆಗಸ್ಟ್ (ಹಿ.ಸ.):

ಆ್ಯಂಕರ್:

ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರು ಮಹಾನ್ ರಾಜನೀತಿಜ್ಞ, ರಾಷ್ಟ್ರವಾದಿ ಹಾಗೂ ನಾಯಕರನ್ನು ರೂಪಿಸಿದ ಮುತ್ಸದ್ದಿ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಬಣ್ಣಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ರಾಮಕೃಷ್ಣ ಹೆಗಡೆ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಗಡೆ ಅವರ ನಾಯಕತ್ವದಲ್ಲಿ ಕರ್ನಾಟಕವು ಉತ್ತಮ ಆಡಳಿತಕ್ಕೆ ಮಾದರಿಯಾಗಿ ಹೊರಹೊಮ್ಮಿತ್ತು ಎಂದರು.

ರಾಮಕೃಷ್ಣ ಹೆಗಡೆ ಅವರು ಸಂಸ್ಥೆಗಳು ಹಾಗೂ ನಾಯಕರ ನಿರ್ಮಾತೃರಾಗಿದ್ದರು. ಮಹಾನ್ ನಾಯಕರು ಒಂದು ಕ್ಷಣವನ್ನು ಬದಲಾಯಿಸಬಲ್ಲರು. ಆದರೆ ಮಹಾನ್ ಸಂಸ್ಥೆ ನಿರ್ಮಾತೃಗಳು ತಲೆಮಾರುಗಳನ್ನು ಬದಲಾಯಿಸುತ್ತಾರೆ ಎಂದು ರಾಧಾಕೃಷ್ಣನ್ ಹೇಳಿದರು.

ಹೆಗಡೆ ಅವರ ಪ್ರಾಮಾಣಿಕತೆ, ಧೈರ್ಯ ಹಾಗೂ ಸಾರ್ವಜನಿಕ ಸೇವೆಯ ಬದ್ಧತೆಯನ್ನು ಯುವಜನತೆ ಆದರ್ಶವಾಗಿಸಿಕೊಳ್ಳಬೇಕು. ‘ರಾಷ್ಟ್ರ ಮೊದಲು’ ಎಂಬ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಸುವುದೇ ಹೆಗಡೆ ಅವರ ಪರಂಪರೆಗೆ ಸಲ್ಲಿಸುವ ಅತ್ಯಂತ ಅರ್ಥಪೂರ್ಣ ಗೌರವವಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹೆಗಡೆ ಅವರ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande