ವಿಕಸಿತ ಭಾರತದ ನಿರ್ಮಾಣಕ್ಕೆ ವಿಕಸಿತ ಕರ್ನಾಟಕ ಅಗತ್ಯ: ವಿಜಯೇಂದ್ರ
ತುಮಕೂರು, 29 ಆಗಸ್ಟ್ (ಹಿ.ಸ.): ಆ್ಯಂಕರ್: ವಿಕಸಿತ ಭಾರತದ ನಿರ್ಮಾಣದ ನಿಟ್ಟಿನಲ್ಲಿ ವಿಕಸಿತ ಕರ್ನಾಟಕವನ್ನು ರೂಪಿಸುವುದು ಅಗತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ತುಮಕೂರಿನ ಎಸ್‌ಐಟಿ ಬಿರ್ಲಾ ಸಭಾಂಗಣದಲ್ಲಿ ಸಮೃದ್ಧ, ಸುಸ್ಥಿರ ಹಾಗೂ ಸಮತೋಲಿತ ಕರ್ನಾಟಕ ನಿರ್ಮಾಣಕ್ಕಾಗಿ
ಸಂವಾದದಲ್ಲಿ ಮಾತನಾಡಿದ ವಿಜಯೇಂದ್ರ


ತುಮಕೂರು, 29 ಆಗಸ್ಟ್ (ಹಿ.ಸ.):

ಆ್ಯಂಕರ್:

ವಿಕಸಿತ ಭಾರತದ ನಿರ್ಮಾಣದ ನಿಟ್ಟಿನಲ್ಲಿ ವಿಕಸಿತ ಕರ್ನಾಟಕವನ್ನು ರೂಪಿಸುವುದು ಅಗತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ತುಮಕೂರಿನ ಎಸ್‌ಐಟಿ ಬಿರ್ಲಾ ಸಭಾಂಗಣದಲ್ಲಿ ಸಮೃದ್ಧ, ಸುಸ್ಥಿರ ಹಾಗೂ ಸಮತೋಲಿತ ಕರ್ನಾಟಕ ನಿರ್ಮಾಣಕ್ಕಾಗಿ ಆಯೋಜಿಸಿದ್ದ ‘ಕರ್ನಾಟಕ ಸಮಗ್ರ ಅಭಿವೃದ್ಧಿ ವೇದಿಕೆ’ಯ ಚಿಂತನ ಸಮಾವೇಶದಲ್ಲಿ ಭಾಗವಹಿಸಿ ಅವರು ಸಂವಾದ ನಡೆಸಿದರು.

ನಾಡಿನ ಸಾಧಕರು, ಚಿಂತಕರು, ಉದ್ಯಮಿಗಳು, ವೃತ್ತಿಪರರು, ಮಾಜಿ ಹಿರಿಯ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ತಜ್ಞರು ಒಂದೇ ವೇದಿಕೆಯಲ್ಲಿ ನಡೆಸಿದ ವೈಚಾರಿಕ ಚಿಂತನ ಮಂಥನ ಮತ್ತು ನೀಡಿದ ಸಲಹೆಗಳು ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಪ್ರಾಯೋಗಿಕವಾಗಿವೆ ಎಂದು ವಿಜಯೇಂದ್ರ ಹೇಳಿದರು.

ವಿಕಸಿತ ಭಾರತ ನಿರ್ಮಾಣದಲ್ಲಿ ದೇಶದ ಜನಸಂಖ್ಯೆಯ ಶೇ.60ಕ್ಕೂ ಅಧಿಕವಾಗಿರುವ ಯುವಶಕ್ತಿಯ ಸದ್ಬಳಕೆ, ಅವರ ಪ್ರತಿಭೆಯ ಪೋಷಣೆ ಹಾಗೂ ಪರಿಣಾಮಕಾರಿ ತೊಡಗಿಸಿಕೊಳ್ಳುವಿಕೆ ಪ್ರಮುಖ ಆದ್ಯತೆಯಾಗಬೇಕು. ರಾಜ್ಯದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡರೆ ಉದ್ಯೋಗ ಸೃಷ್ಟಿಗೆ ದೊಡ್ಡ ಅವಕಾಶವಿದೆ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಚಿಂತನ ಸಮಾವೇಶ ಹೊಸ ದಿಕ್ಸೂಚಿ ನೀಡಿದೆ ಎಂದು ಅವರು ಹೇಳಿದರು.

ಸಮಾವೇಶದಲ್ಲಿ ತುಮಕೂರು ಶಾಸಕರಾದ ಜ್ಯೋತಿ ಗಣೇಶ್, ಜಿ. ಸುರೇಶ್, ಡಾ. ಶ್ರೀನಿವಾಸ ಬಳ್ಳಿ, ಎಸ್.ವಿ.ಎಸ್. ಪ್ರಸಾದ್, ಮದನ್ ಪದಕಿ ಸೇರಿದಂತೆ ಹಲವು ಗಣ್ಯರು ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande