
ರಾಜೌರಿ, 28 ಆಗಸ್ಟ್ (ಹಿ.ಸ.):
ಆ್ಯಂಕರ್:
ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಭಾರತೀಯ ವಾಯುಪ್ರದೇಶಕ್ಕೆ ನುಸುಳಲು ನಡೆಸಿದ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಅಧಿಕಾರಿಗಳ ಪ್ರಕಾರ, ನೌಶೆರಾ ಪ್ರದೇಶದ ರುಮ್ಲಿಧಾರಾ ಸಮೀಪ ಶುಕ್ರವಾರ ಮೂರು ಪಾಕಿಸ್ತಾನಿ ಡ್ರೋನ್‌ಗಳು ಭಾರತೀಯ ವಾಯುಪ್ರದೇಶ ಪ್ರವೇಶಿಸಿದ್ದವು. ಗಡಿ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಭಾರತೀಯ ಸೇನಾ ಸಿಬ್ಬಂದಿ ಡ್ರೋನ್‌ಗಳ ಚಲನವಲನವನ್ನು ಗಮನಿಸಿ ತಕ್ಷಣ ಪ್ರತಿದಾಳಿ ಡ್ರೋನ್ ತಡೆ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದರು.
ಗಡಿ ದಾಟಿ ಪಾಕಿಸ್ತಾನದತ್ತ ಮರಳುವಂತೆ ಮಾಡಲಾಯಿತು. ಡ್ರೋನ್‌ಗಳ ಒಳನುಸುಳುವಿಕೆಯ ಉದ್ದೇಶ ಹಾಗೂ ಅವುಗಳ ಚಲನವಲನದ ಕುರಿತು ಸೇನೆ ನಿಗಾ ವಹಿಸಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ರುಮ್ಲಿಧಾರಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ಚಟುವಟಿಕೆಗಳು ಕಂಡುಬಂದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.