ಕೋಲಾರದಲ್ಲಿ ರಾಷ್ಟಿಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ
ಕೋಲಾರದಲ್ಲಿ ರಾಷ್ಟಿಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ
ಕೋಲಾರದಲ್ಲಿ ೪೧ನೇ ರಾಷ್ಟಿçÃಯ ನೇತ್ರ ದಾನ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.


ಕೋಲಾರ, ಆಗಸ್ಟ್ ೨೫ (ಹಿ.ಸ.)

ಆ್ಯಂಕರ್ ದೇಶದಲ್ಲಿ ಅಂದಾಜು ೧.೨೫ ಲಕ್ಷ ಜನರು ಕಾರ್ನಿಯಾ ಸಂಬ0ಧಿ ಅಂಧತ್ವದಿ0ದ ಬಳಲುತಿದ್ದು, ನೇತ್ರದಾನಕ್ಕಾಗಿ ಕಾಯುತ್ತಿದ್ದಾರೆ. ಒಬ್ಬ ವ್ಯಕ್ತಿಯೂ ದಾನ ಮಾಡಿದ ನೇತ್ರಗಳಿಂದ ಇಬ್ಬರು ಕಾರ್ನಿಯ ಅಂಧರಿಗೆ ದೃಷ್ಠಿ ನೀಡಿದಂತಾಗುತ್ತದೆ ಎಂದು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಮತ್ತು ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಎಸ್ಸೆನ್ನಾರ್ ಆಸ್ಪತ್ರೆ ಆವರಣದಲ್ಲಿ `ತಮ್ಮ ನೇತ್ರಗಳು ಸದಾ ಜೀವಂತವಾಗಿರಲಿ' ಎಂಬ ಈ ವರ್ಷದ ಘೋಷ ವಾಕ್ಯದಂತೆ, ೪೧ನೇ ರಾಷ್ಟಿಯ ನೇತ್ರ ದಾನ ಪಾಕ್ಷಿಕ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಮಾತನಾಡಿದರು.

ಪ್ರತೀ ವರ್ಷ ಸರಾಸರಿ ೫,೬೦೦ ನೇತ್ರಾ ದಾನಿಗಳು ಸಿಗುತ್ತಿದಾರೆ, ಕಣ್ಣಿನ ದಾನ ಮಹಾ ದಾನ ಎಂಬ ನಾನ್ನುಡಿಯಂತೆ ನೇತ್ರಗಳಿಗೆ ಅನೇಕರು ಕಾಯುತ್ತಿದ್ದು, ಸತ್ತ ನಂತರ ಮಣ್ಣಿಗೆ ಸೇರಿಸುವ ಬದಲಿಗೆ ಮೃತ ಕಣ್ಣುಗಳನ್ನು ದಾನ ಮಾಡಿದರೆ ದೃಷ್ಟಿ ಹೀನರಿಗೆ ಕಣ್ಣು ನೀಡಿದಂತಾಗುತ್ತದೆ. ವಿಶ್ವಾದ್ಯಾಂತ ಧಾರ್ಮಿಕ ನಾಯಕರು ನೇತ್ರ ದಾನಕ್ಕೆ ಬೆಂಬಲ ಸೂಚಿಸಿದ್ದು, ನೇತ್ರದಾನ ಅತ್ಯತ್ತಮ ಮಾನವಿಯ ಸೇವೆ ಎಂದಿದ್ದಾರೆ. ಕರ್ನಾಟಕದಲ್ಲಿ ೩೨ ನೇತ್ರ ಸಂಗ್ರಹಣ ಕೇಂದ್ರಗಳು ಸೇವೆ ಸಲ್ಲಿಸುತ್ತಿದ್ದು, ಅದರಲ್ಲಿ ೭ ಸರ್ಕಾರಿ ನೇತ್ರ ಸಂಗ್ರಹಣ ಕೇಂದ್ರಗಳಾಗಿರುತ್ತದೆ ಎಂದರು.

ನೇತ್ರ ದಾನ ಮಾಡಲು ವಯಸ್ಸು, ಲಿಂಗ ಜಾತಿ ರಕ್ತದ ಗುಂಪು ಯಾವುದೇ ಬೇಧವಿಲ್ಲ. ಎಲ್ಲರು ನೇತ್ರ ದಾನ ಮಾಡಬಹುದು. ಆದರೆ ಹೆಚ್.ಐ.ವಿ, ಏಡ್ಸ್, ಎಚ್.ಬಿ.ಎಸ್.ಎ.ಜಿ., ವಿ.ಡಿ.ಆರ್.ಎಲ್. ಸೋಂಕಿತರು ಮತ್ತು ವಿಷ ಸೇವೆನೆ ಮಾಡಿದವರು ನೇತ್ರ ದಾನ ಮಾಡಿದರೆ, ಕಾರ್ನಿಯ ಚಿಕಿತ್ಸೆಗೆ ಈ ನೇತ್ರಗಳು ಉಪಯೋಗವಾಗುವುದಿಲ್ಲ, ಆದರೆ ವೈದ್ಯಕೀಯ ಕಲಿಕೆಯ ವಿದ್ಯಾ ಸಂಸ್ಥೆಗಳಿಗೆ ಉಪಯೋಗವಾಗುತ್ತದೆ. ವ್ಯಕ್ತಿಯ ಮರಣದ ನಂತರ ೬ ಗಂಟೆಯೊಳಗೆ ನೇತ್ರಗಳು ಸಂಗ್ರಹಿಸಲಾಗುವುದು. ನೇತ್ರ ಸಂಗ್ರಹಣೆಗೆ ಬೇಕಾಗುವ ಸಮಯ ಕೇವಲ ೨೦ ನಿಮಿಷಗಳು ಹಾಗೂ ಸಂಗ್ರಹಣೆಯ ನಂತರ ಮೃತರ ಮುಖ ವಿಕಾರವಾಗುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಯ ಹಿರಿಯ ನೇತ್ರತಜ್ಞೆ ಡಾ|| ಶರ್ಮಿಳ ಮಾತನಾಡಿ, ನೇತ್ರ ದಾನವೂ ನೀವು ಮಾಡಬಹುದಾದ ಅತ್ಯಂತ ಶ್ರೇಷ್ಠ ದಾನ ಹಾಗೂ ಮಾನವಿಯ ಸೇವೆ, ನೇತ್ರ ದಾನ ಸೇವೆ ಸಂಪೂರ್ಣ ಉಚಿತ. ನೇತ್ರ ಸಂಗ್ರಹಣೆ ಮತ್ತು ವಿತರಣೆ ಉಚಿತ ಸೇವೆಯಾಗಿದ್ದು, ಇದು ಮೃತರ ಆತ್ಮಕ್ಕೆ ಶಾಂತಿ ನೀಡುತ್ತದೆ. ಹತ್ತಿರದ ಬಂಧುಗಳನ್ನು ನೇತ್ರ ದಾನಕ್ಕೆÀ ಒಪ್ಪಿಸಲು ಮನ ವೊಲಿಸುವುದು. ಕಣ್ಣು ರೆಪ್ಪೆಗಳನ್ನು ಶುದ್ದ ಬಟ್ಟೆಯಿಂದ, ಹತ್ತಿಯಿಂದ ಮುಚ್ಚಿಡುವುದು. ತಲೆಯನ್ನು ಸ್ವಲ್ಪ ಎತ್ತರಿಸಿಡಿ, ವಿದ್ಯುತ್ ಫ್ಯಾನ್ನ್ನು ನಿಲ್ಲಿಸುವುದು. ಸಾಧ್ಯವಾದರೆ ಪಾಲಿಥೀನ್ ಚೀಲದಲ್ಲಿ ಮಂಜುಗಡ್ಡೆಹಾಕಿ ಮೃತರ ಹಣೆಯ ಮೇಲಿಟ್ಟು ತಕ್ಷಣವೇ ಸರ್ಕಾರಿ ಜಿಲ್ಲಾ ಆಸ್ಪತ್ರೆ ಅಥವಾ ನೇತ್ರ ಬ್ಯಾಂಕ್, ಸಂಗ್ರಹ ಕೇಂದ್ರಕ್ಕೆ ಕರೆಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತçಚಿಕಿತ್ಸಕ ಡಾ|| ಶರೀಫ್, ನೇತ್ರ ತಜ್ಞ ಡಾ|| ಅರುಲ್ ಸೆಲ್ವಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ, ಆರೋಗ್ಯ ನಿರೀಕ್ಷಕ ವೆಂಕಟೇಶ್ ಬಾಬು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೇಣುಕಾದೇವಿ, ಅನಿತ,ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಾರೆಡ್ಡಿ, ಜಿಲ್ಲಾ ಅಂಧತ್ವ ಸಂಯೋಜಕ ನಾಗೇಂದ್ರಮಣಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಆಶಾ, ದಿನೇಶ್ ಹಾಗೂ ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande