ಮತಬ್ಯಾಂಕ್ಗಾಗಿ ಕಾಂಗ್ರೆಸ್ ವಂದೇ ಮಾತರಂ ಗೀತೆ ಮರೆತಿದೆ: ಅಮಿತ್ ಶಾ
ಚಿತ್ತೋಡ್ಗಢ, 16 ಆಗಸ್ಟ್ 16 (ಹಿ.ಸ.): ಆ್ಯಂಕರ್: ಮತಬ್ಯಾಂಕ್‌ನ ರಾಜಕಾರಣಕ್ಕಾಗಿ ಕಾಂಗ್ರೆಸ್‌ ‘ವಂದೇ ಮಾತರಂ’ ಗೀತೆಯನ್ನು ಮರೆತಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ರಾಜಸ್ಥಾನದ ನಿಂಬಾಹೇಡಾದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 21 ಅಡಿ ಎತ್ತರದ ಅಷ
केंद्रीय गृहमंत्री शाह मंच पर राजस्थान के सीएम शर्मा और अन्य नेताओं के साथ।


अमित शाह सभा को संबोधित करते हुए


ಚಿತ್ತೋಡ್ಗಢ, 16 ಆಗಸ್ಟ್ 16 (ಹಿ.ಸ.):

ಆ್ಯಂಕರ್:

ಮತಬ್ಯಾಂಕ್‌ನ ರಾಜಕಾರಣಕ್ಕಾಗಿ ಕಾಂಗ್ರೆಸ್‌ ‘ವಂದೇ ಮಾತರಂ’ ಗೀತೆಯನ್ನು ಮರೆತಿದೆ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ರಾಜಸ್ಥಾನದ ನಿಂಬಾಹೇಡಾದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 21 ಅಡಿ ಎತ್ತರದ ಅಷ್ಟಧಾತು ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ‘ವಂದೇ ಮಾತರಂ’ನ 150ನೇ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಿಂದ ಈ ಗೀತೆಗೆ ಮತ್ತೆ ಗೌರವ ತಂದುಕೊಟ್ಟಿದ್ದಾರೆ ಎಂದರು.

ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ‘ವಂದೇ ಮಾತರಂ’ ಗಾಯನ ನಡೆಯುತ್ತಿದ್ದಾಗ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಗಾಯನವನ್ನು ನಿಲ್ಲಿಸುವಂತೆ ಸೂಚಿಸಿದ್ದರು ಎಂದು ಆರೋಪಿಸಿದ ಶಾ, ಈ ಕೃತ್ಯವನ್ನು ದೇಶದ ಜನತೆ ಎಂದಿಗೂ ಒಪ್ಪುವುದಿಲ್ಲ ಎಂದರು. ಕಾಂಗ್ರೆಸ್‌ಗೆ ನಾಚಿಕೆ ಉಳಿದಿದ್ದರೆ ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಆತ್ಮ ಹಾಗೂ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಮಹಾರಾಣಾ ಪ್ರತಾಪ್, ವೀರ ಪೂಂಜಾ ಭೀಲ್ ಹಾಗೂ ಸೇಠ್ ಭಾಮಾಶಾ ಅವರ ದೇಶಭಕ್ತಿ ಮತ್ತು ಸ್ವರಾಜ್ಯದ ಹೋರಾಟವನ್ನು ಶ್ಲಾಘಿಸಿದ ಅವರು, ರಾಜಸ್ಥಾನದ ನೀರಿನ ಸಮಸ್ಯೆ ನಿವಾರಣೆಗೆ ಬಿಜೆಪಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.

ಇದೇ ವೇಳೆ ವಾಜಪೇಯಿ ಅವರ ರಾಷ್ಟ್ರಪ್ರಥಮದ ಸಿದ್ಧಾಂತವನ್ನು ಸ್ಮರಿಸಿದ ಶಾ, ಪೋಖ್ರಾನ್ ಅಣುಪರೀಕ್ಷೆ, ಸುವರ್ಣ ಚತುಷ್ಪಥ ಯೋಜನೆ, ಗ್ರಾಮೀಣ ರಸ್ತೆ ಅಭಿವೃದ್ಧಿ ಹಾಗೂ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸ್ಥಾಪನೆಯಂತಹ ಮಹತ್ವದ ಕಾರ್ಯಗಳನ್ನು ಅವರು ಕೈಗೊಂಡಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಚಿತ್ತೋರ್‌ಗಢ ಸೇರಿದಂತೆ 15 ಜಿಲ್ಲೆಗಳಲ್ಲಿ ₹5,659 ಕೋಟಿ ವೆಚ್ಚದ 944 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. 1,500 ಗ್ರಾಮಗಳಿಗೆ ಜಲ ಜೀವನ್ ಮಿಷನ್‌ ಅಡಿ ಕೊಳವೆ ನೀರಿನ ಸೌಲಭ್ಯ ಕಲ್ಪಿಸುವ ಯೋಜನೆಗೂ ಚಾಲನೆ ನೀಡಲಾಯಿತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande