ಹಿರಿಯ ನಾಗರೀಕರ ಹಸಿವು ನೀಗಿಸಿದ ಕಲಾವಿದ ಗೌತಮ್
ಹಿರಿಯ ನಾಗರೀಕರ ಹಸಿವು ನೀಗಿಸಿದ ಕಲಾವಿದ ಗೌತಮ್
ಮಾಲೂರು ನಗರದಲ್ಲಿ ಗಾನಸುಧ ಕಲಾ ಸಂಘದ ಅಧ್ಯಕ್ಷ ಗೌತಮ್ ಹಿರಿಯ ನಾಗರೀಕರಿಗೆ ಬೆಳಗಿನ ಉಪಹಾರ ನೀಡಿದರು.


ಕೋಲಾರ, ೧೬, ಆಗಸ್ಟ್ (ಹಿ.ಸ.):

ಆ್ಯಂಕರ್: ಹಿರಿಯ ನಾಗರಿಕರ ವಸತಿ ಗೃಹಕ್ಕೆ ಭೇಟಿ ನೀಡಿದ ಗಾನಸುಧ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷರಾದ ಗೌತಮ್ ಕೆ. ಅವರು, ಅಲ್ಲಿನ ಹಿರಿಯ ನಾಗರಿಕರಿಗೆ ಬೆಳಗಿನ ಉಪಹಾರ ಹಾಗೂ ತಿಂಡಿಯನ್ನು ವಿತರಿಸುವುದರ ಜೊತೆಗೆ ೫೦ ಕೆ.ಜಿ. ಅಕ್ಕಿಯನ್ನು ದೇಣಿಗೆಯಾಗಿ ನೀಡಿದರು.

ಗೌತಮ್ ಕೆ. ಮಾತನಾಡಿ “ಹಸಿದವರಿಗೆ ಅನ್ನ ನೀಡುವುದು ಸಣ್ಣ ಸೇವೆಯಲ್ಲ. ಹಸಿದ ಹೊಟ್ಟೆಗೆ ಒಂದು ಹೊತ್ತಿನ ಊಟ ನೀಡುವುದು ಎಂದರೆ ಒಂದು ಜೀವಕ್ಕೆ ಆಸರೆಯಾಗುವುದು. ಸಮಾಜದಲ್ಲಿ ಸಂಕಷ್ಟದಲ್ಲಿರುವವರು ಹಾಗೂ ಹಿರಿಯ ನಾಗರಿಕರ ಅಗತ್ಯಗಳಿಗೆ ಸ್ಪಂದಿಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ” ಎಂದು ಹೇಳಿದರು.

ಹಿರಿಯ ನಾಗರಿಕರೊಂದಿಗೆ ಆತ್ಮೀಯವಾಗಿ ಮಾತನಾಡಿ, ಅವರ ಯೋಗಕ್ಷೇಮವನ್ನು ವಿಚಾರಿಸಿದ ಅವರು, ಮುಂದಿನ ದಿನಗಳಲ್ಲಿಯೂ ಅಗತ್ಯವಿರುವವರಿಗೆ ತಮ್ಮ ಕೈಲಾದ ಸಹಾಯವನ್ನು ಮುಂದುವರಿಸುವ ಭರವಸೆ ನೀಡಿದರು. ಹಿರಿಯ ನಾಗರಿಕರೊಂದಿಗೆ ಸಮಯ ಕಳೆಯುವುದರ ಜೊತೆಗೆ ಆಹಾರ ಮತ್ತು ಅಕ್ಕಿಯನ್ನು ವಿತರಿಸಿದ ಗೌತಮ್ ಕೆ. ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕಾರ್ಯಕ್ರಮದಲ್ಲಿ ಆರ್.ಎಫ್.ಎಫ್. ಹೋರಾಟಗಾರ ಪುರ ಮುನಿರಾಜು, ಮಾಲೂರು ಫುಡ್ ಬ್ಯಾಂಕ್ ಅಧ್ಯಕ್ಷರಾದ ಪುರ ಪ್ರದೀಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande