ಸ್ವಾತಂತ್ರ್ಯವು ತ್ಯಾಗ-ಬಲಿದಾನಗಳ ಪ್ರತೀಕ, ಸಾಮಾಜಿಕ ನ್ಯಾಯವೇ ನವಭಾರತದ ಗುರಿ: ಡಿ.ಕೆ. ಶಿವಕುಮಾರ್
ಬೆಂಗಳೂರು, 15 ಆಗಸ್ಟ್ (ಹಿ.ಸ.): ಆ್ಯಂಕರ್:ಸ್ವಾತಂತ್ರ್ಯವು ಅಸಂಖ್ಯಾತ ಹೋರಾಟಗಾರರ ತ್ಯಾಗ-ಬಲಿದಾನಗಳ ಮೇಲೆ ಕಟ್ಟಲಾದ ಪ್ರಜಾಪ್ರಭುತ್ವದ ನಿರಂತರ ಹೊಣೆಗಾರಿಕೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 80ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ‘ಎಕ್ಸ್‌’ನಲ್ಲಿ ಸಂದೇಶ ನೀಡ
Cm file photo


ಬೆಂಗಳೂರು, 15 ಆಗಸ್ಟ್ (ಹಿ.ಸ.):

ಆ್ಯಂಕರ್:ಸ್ವಾತಂತ್ರ್ಯವು ಅಸಂಖ್ಯಾತ ಹೋರಾಟಗಾರರ ತ್ಯಾಗ-ಬಲಿದಾನಗಳ ಮೇಲೆ ಕಟ್ಟಲಾದ ಪ್ರಜಾಪ್ರಭುತ್ವದ ನಿರಂತರ ಹೊಣೆಗಾರಿಕೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

80ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ‘ಎಕ್ಸ್‌’ನಲ್ಲಿ ಸಂದೇಶ ನೀಡಿರುವ ಅವರು, ವ್ಯಕ್ತಿಗಳಿಗಿಂತ ವ್ಯವಸ್ಥೆ ಹಾಗೂ ಆಡಳಿತಕ್ಕಿಂತ ಸಾರ್ವಜನಿಕರ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು ಸಮಾಜದ ಕಟ್ಟಕಡೆಯ ಪ್ರಜೆಗೂ ಘನತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಡುವುದೇ ನವಭಾರತಕ್ಕೆ ನೀಡಬಹುದಾದ ಮಹತ್ತರ ಕೊಡುಗೆ ಎಂದಿದ್ದಾರೆ.

ವೈವಿಧ್ಯತೆಯೇ ದೇಶದ ಬಲವಾಗಿದ್ದು, ಸಾಮರಸ್ಯವೇ ಜೀವಾಳ. ಯಾವುದೇ ಭೇದಭಾವವಿಲ್ಲದೆ ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ಸಂರಕ್ಷಿಸಿ, ಸರ್ವರಿಗೂ ಉತ್ತಮ ಬದುಕು ಕಲ್ಪಿಸುವುದು ಸರ್ಕಾರದ ಪ್ರಮುಖ ಧ್ಯೇಯವಾಗಿದೆ ಎಂದು ತಿಳಿಸಿದರು.

ನಾವೆಲ್ಲರೂ ಒಗ್ಗೂಡಿ ಸಮೃದ್ಧ, ಜಗತ್ತೇ ತಿರುಗಿ ನೋಡುವಂತಹ ಕರ್ನಾಟಕವನ್ನು ಕಟ್ಟಲು ಸ್ವಾತಂತ್ರ್ಯೋತ್ಸವದ ಈ ಶುಭದಿನದಂದು ಸಂಕಲ್ಪ ತೊಡೋಣ ಎಂದು ಕರೆ ನೀಡಿದ ಅವರು, ನಾಡಿನ ಸಮಸ್ತ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೋರಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande