
ಬೆಂಗಳೂರು, 14 ಆಗಸ್ಟ್ (ಹಿ.ಸ.):
ಆ್ಯಂಕರ್:
ಬೆಂಗಳೂರಿನ ನಗರ ಜೀವವೈವಿಧ್ಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಜಿಬಿಎ ಹವಾಮಾನ ಕ್ರಿಯಾ ಘಟಕದ ವತಿಯಿಂದ ಜಿಬಿಎ ಕೇಂದ್ರ ಕಚೇರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಎಫ್‌ಇಸಿಸಿ ವಿಶೇಷ ಆಯುಕ್ತೆ ಸುಷ್ಮಾ ಗೋಡಭೋಲೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೂ ಬಿಡುವ ಹಾಗೂ ಸ್ಥಳೀಯ ಸಸ್ಯ ಪ್ರಭೇದಗಳನ್ನು ನೆಡುವ ಮೂಲಕ ಕೀಟಗಳು, ಚಿಟ್ಟೆಗಳು ಮತ್ತು ಪಕ್ಷಿಗಳಿಗೆ ಅನುಕೂಲಕರ ವಾಸಸ್ಥಳ ನಿರ್ಮಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ನಗರದಲ್ಲಿ ಹೂವುಗಳು, ಪರಾಗಸ್ಪರ್ಶಕ ಕೀಟಗಳು ಮತ್ತು ಪಕ್ಷಿಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಹಸಿರು ಪರಿಸರ ಹಾಗೂ ನಗರ ಜೀವವೈವಿಧ್ಯವನ್ನು ಸಂರಕ್ಷಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಜಿಬಿಎ ಪ್ರಕಟಣೆಯಲ್ಲಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.