ಕಲಾಂ ಶಾಲೆಯ ಸ್ವಾತಂತ್ರ್ಯೋತ್ಸವಕ್ಕೆ ದಕ್ಷಿಣ ಏಷ್ಯಾ ಕ್ರೀಡಾಪಟು ಮಾಲತಿ
ಕುಷ್ಟಗಿ, 14 ಆಗಸ್ಟ್ (ಹಿ.ಸ.) ಆ್ಯಂಕರ್: ಹಿರೇಬನ್ನಿಗೋಳ ಕ್ರಾಸ್ನಲ್ಲಿ ಇರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆಯಲಿರುವ ೮೦ನೆಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ಯಾರಾ ಥ್ರೋ ಬಾಲ್ನಲ್ಲಿ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿರುವ ಗದಗಿನ ಕ್ರ
ಕಲಾಂ ಶಾಲೆಯ ಸ್ವಾತಂತ್ರ್ಯೋತ್ಸವಕ್ಕೆ ದಕ್ಷಿಣ ಏಷ್ಯಾ ಕ್ರೀಡಾಪಟು ಮಾಲತಿ


ಕುಷ್ಟಗಿ, 14 ಆಗಸ್ಟ್ (ಹಿ.ಸ.)

ಆ್ಯಂಕರ್: ಹಿರೇಬನ್ನಿಗೋಳ ಕ್ರಾಸ್ನಲ್ಲಿ ಇರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆಯಲಿರುವ ೮೦ನೆಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ಯಾರಾ ಥ್ರೋ ಬಾಲ್ನಲ್ಲಿ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿರುವ ಗದಗಿನ ಕ್ರೀಡಾಪಟು ಮಾಲತಿ ಇನಾಮತಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ಶನಿವಾರ ಬೆಳಗ್ಗೆ ಏಳು ಗಂಟೆಗೆ ಶಾಲೆಯ ಅಧ್ಯಕ್ಷೆ ಇಮಾಂಬಿ ಆರ್ ದೊಡ್ಡಮನಿ ಧ್ವಜಾರೋಹಣ ನೆರವೇರಿಸಲಿದ್ದು, ಶಾಲೆಯ ಸಂಸ್ಥಾಪಕ ರೆಹಮಾನಸಾಬ್ ದೊಡ್ಡಮನಿ, ಉಪಾಧ್ಯಕ್ಷೆ ಚಂದ್ರಕಲಾ ಕೃಷ್ಣಮೂರ್ತಿ ಉಪಸ್ಥಿತರಿರಲಿದ್ದಾರೆ ಎಂದು ಶಾಲೆಯ ಆಡಳಿತಾಧಿಕಾರಿ ಸಾನಿಯಾ ದೊಡ್ಡಮನಿ ತಿಳಿಸಿದ್ದಾರೆ.

ಇನಾಮತಿ ಅವರು ಪ್ಯಾರಾ ಥ್ರೋಬಾಲ್ ಕ್ರೀಡಾಪಟು, ಕ್ರೀಡಾ ಆಡಳಿತಗಾರ ಹಾಗೂ ಮಾಜಿ ಐಟಿ ಉದ್ಯೋಗಿ ಆಗಿದ್ದು, ಸೀನಿಯರ್ ಸಿಸ್ಟಮ್ ಆರ್ಕಿಟೆಕ್ಟ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಐಟಿ ಕ್ಷೇತ್ರದಲ್ಲಿ 13 ವರ್ಷಗಳಿಗೂ ಹೆಚ್ಚು ಕಾಲ ಅನುಭವ ಹೊಂದಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನದ ನಂತರ ಕ್ರೀಡಾ ಕ್ಷೇತ್ರದತ್ತ ತಮ್ಮ ಗಮನ ಕೇಂದ್ರೀಕರಿಸಿದ್ದು, ದಕ್ಷಿಣ ಏಷ್ಯಾ ಪ್ಯಾರಾ ಥ್ರೋಬಾಲ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ, ಏಷ್ಯನ್ ಪ್ಯಾರಾ ಥ್ರೋಬಾಲ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ವಿಜೇತೆಯಾಗಿದ್ದು, ಭಾರತೀಯ ಪ್ಯಾರಾ ಥ್ರೋಬಾಲ್ ತಂಡದ ನಾಯಕರಾಗಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಪ್ರಸ್ತುತ ಪ್ಯಾರಾ ಥ್ರೋಬಾಲ್ ಫೆಡರೇಶನ್ ಆಫ್ ಇಂಡಿಯಾದ ಸಂಘಟನಾ ಕಾರ್ಯದರ್ಶಿಯಾಗಿ ಹಾಗೂ ವರ್ಲ್ಡ್ ಪ್ಯಾರಾ ಥ್ರೋಬಾಲ್ ಫೆಡರೇಶನ್ನ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳನ್ನು ಸಬಲೀಕರಿಸುವುದರ ಜೊತೆಗೆ, ಪ್ಯಾರಾ ಥ್ರೋಬಾಲ್ ಕ್ರೀಡೆಯ ಅಭಿವೃದ್ಧಿ, ಉತ್ತೇಜನ ಮತ್ತು ಜಾಗತಿಕ ವಿಸ್ತರಣೆಗೆ ಶ್ರಮಿಸುತ್ತಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande