
ಕೊಪ್ಪಳ, 14 ಆಗಸ್ಟ್ (ಹಿ.ಸ.)
ಆ್ಯಂಕರ್: ತೋಟಗಾರಿಕೆ ಇಲಾಖೆ (ಜಿ.ಪಂ.) ಕೊಪ್ಪಳ ವತಿಯಿಂದ ರೈತರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ‘ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ- 2026’ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಗಸ್ಟ್ 15 ರಿಂದ ಆ. 20 ರವರೆಗೆ ತೋಟಗಾರಿಕೆ ಜಂಟಿನಿರ್ದೇಶಕರ ಕಛೇರಿ ಆವರಣ ಆಯೋಜಿಸಲಾಗಿದ್ದು, ಆ. 15ರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ.
*ಮೇಳದ ಪ್ರಮುಖ ವಿಶೇಷತೆಗಳು:* ತೋಟಗಾರಿಕೆ ಕ್ಷೇತ್ರಗಳಲ್ಲಿ ವಿಶೇಷವಾಗಿ ಅಭಿವೃದ್ಧಿಪಡಿಸಿದ ಅತ್ಯುತ್ತಮ ಗುಣಮಟ್ಟದ ವಿವಿಧ ತಳಿಯ ಸಸಿಗಳು ನೇರ ಮಾರಾಟ. ಒಣಭೂಮಿ ತೋಟಗಾರಿಕೆ ಬೇಸಾಯಕ್ಕೆ ಸೂಕ್ತವಾದ ಹಾಗೂ ರೈತರ ಆದಾಯವನ್ನು ಹೆಚ್ಚಿಸುವ ತೋಟಗಾರಿಕೆ ಸಸಿ ತಳಿಗಳ ಪರಿಚಯ ಮತ್ತು ಮಾರಾಟ. ಸ್ವದೇಶಿ ಮತ್ತು ವಿದೇಶಿ ತಳಿಯ ವಿವಿಧ ಹಣ್ಣಿನ ಸಸಿಗಳು ಸಾರ್ವಜನಿಕರಿಗೆ ಲಭ್ಯವಿರಲಿವೆ.
ತೋಟಗಾರಿಕೆ ಆಸಕ್ತರು, ರೈತರು ಹಾಗೂ ಸಾರ್ವಜನಿಕರು ಈ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕೊಪ್ಪಳ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್