
ಬಳ್ಳಾರಿ, 14 ಆಗಸ್ಟ್ (ಹಿ.ಸ.)
ಆ್ಯಂಕರ್ : ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರಿಗೆ ಹಾಗೂ ಸ್ವ-ಉದ್ಯೋಗ ಆಕಾಂಕ್ಷಿಗಳಿಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಬಳ್ಳಾರಿ ವತಿಯಿಂದ ಉಚಿತ ಊಟ ಮತ್ತು ವಸತಿ ಸಹಿತ ವಿವಿಧ ವೃತ್ತಿಪರ ತರಬೇತಿಗಳನ್ನು ಆಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಈ ತರಬೇತಿಗಳಿಗೆ 19 ರಿಂದ 45 ವರ್ಷ ವಯೋಮಿತಿಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ತರಬೇತಿಗಳ ವಿವರ:
ಆ.18 ರಿಂದ ಮೋಟರ್ ರಿವೈಂಡಿಂಗ್ ಮತ್ತು ಪಂಪಸೇಟ್ ರೀಪೆರಿ ತರಬೇತಿ (31 ದಿನ).
ಆ.24 ರಿಂದ ಕೃಷಿ ಉದ್ಯಮಿ(ಕೋಳಿ ಸಾಕಾಣಿಕೆ) ತರಬೇತಿ (13 ದಿನ).
ಸೆ.07 ರಿಂದ ಅಣಬೆ ಬೇಸಾಯಿ (10 ದಿನ).
ಸೆ.16 ರಿಂದ ಫಾಸ್ಟ್ ಫುಡ್ ತಯಾರಿಕೆ ತರಬೇತಿ (12 ದಿನ).
ಸೆ.21 ರಿಂದ ಎಂಬ್ರಾಯಡರಿ (ಮಗ್ಗಂ ವರ್ಕ್) ತರಬೇತಿ (31 ದಿನ).
ಅ.05 ರಿಂದ ಕೃತಕ ಆಭರಣ ತಯಾರಿಕೆ ತರಬೇತಿ (12 ದಿನ).
ಅ.12 ರಿಂದ ಕೃಷಿ ಉದ್ಯಮಿ (ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ) ತರಬೇತಿ (13 ದಿನ).
ಅ.27 ರಿಂದ ಲಘು ವಾಹನ ಚಾಲನ ತರಬೇತಿ (31 ದಿನ).
ನ.02 ರಿಂದ ಪೇಪರ್ ಕವರ್ ಪೈಲ್ ಮೆಕಿಂಗ್ ತರಬೇತಿ (12 ದಿನ).
ಆಧಾರ್ ಕಾರ್ಡ್, ಬಿ.ಪಿ.ಎಲ್. ಕಾರ್ಡ್, 5 ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು, ಕನಿಷ್ಠ 10 ನೇ ತರಗತಿ ವಿದ್ಯಾರ್ಹತೆ ಪ್ರಮಾಣಪತ್ರ, ಉದ್ಯೋಗ ಖಾತರಿ ಕಾರ್ಡ್.
ಹೆಚ್ಚಿನ ಮಾಹಿತಿಗೆ ಮತ್ತು ಸಂಪರ್ಕಕ್ಕಾಗಿ ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ , ಡಿ.ಐ.ಸಿ. ಕಾಂಪೌಂಡ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ, ಹೊಸಪೇಟೆ ರಸ್ತೆ, ಬಳ್ಳಾರಿ ಅಥವಾ ದೂ.08392-299117, ಮೊ.9449860659, 9008464120, 9980123608 ಗೆ ಸಂಪರ್ಕಿಸಬಹುದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್