
ಬಳ್ಳಾರಿ, 13 ಆಗಸ್ಟ್ (ಹಿ.ಸ.)
ಆ್ಯಂಕರ್ :
ಜೆಸ್ಕಾಂ ನಗರದ ಉಪವಿಭಾಗ-2 ರ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ಗಳ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಆಗಸ್ಟ್ 14 ರಂದು ಬೆಳಿಗ್ಗೆ 09 ರಿಂದ ಸಂಜೆ 04 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್-33 ಫೀಡರ್ ವ್ಯಾಪ್ತಿ: ಕೆ.ಎಚ್.ಬಿ. ಕಾಲೋನಿ, ನೇತಾಜಿ ನಗರ, ಇನ್ನಾರೆಡ್ಡಿ ಲೇಔಟ್, ಇನ್ಫಾಂಟ್ರಿ ರಸ್ತೆ, ವಾಸವಿ ಸ್ಕೂಲ್, ಕೊಳಗಲ್ ರೋಡ್, ವಿದ್ಯಾನಗರ, ಕಲ್ಯಾಣಿ ಕಾಲೋನಿ, ಭತ್ರಿ ರೋಡ್, ಭತ್ರಿ, ಗುರು ಕಾಲೋನಿ, ಸತ್ಯವಾಣಿ ನಗರ, ಸಿದ್ಧಾರ್ಥ ನಗರ ಮತ್ತು ವಿಯಾನಿ ಶಾಲೆ ಸುತ್ತಮುತ್ತಲಿನ ಪ್ರದೇಶಗಳು.
ಎಫ್-77 ಫೀಡರ್ ವ್ಯಾಪ್ತಿ: ಒ.ಪಿ.ಡಿ, ಶಾಂತಿ ನಗರ, ಕೊಳಗಲ್ ರೋಡ್ ಹಾಗೂ ಬಿಎಂಸಿಆರ್ಸಿ ಕ್ಯಾಂಪಸ್ ಪ್ರದೇಶಗಳು. ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಜೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್