ಕೊಪ್ಪಳ : 287ನೇ ದಿನದಲ್ಲಿ ಬಲ್ಡೋಟ ಹಾಗೂ ಮಾಲಿನ್ಯ ವಿರೋಧಿ ಧರಣಿ
ಕೊಪ್ಪಳ, 13 ಆಗಸ್ಟ್ (ಹಿ.ಸ.) ಆ್ಯಂಕರ್ : ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ (ಜಂಟಿ ಕ್ರಿಯಾ ವೇದಿಕೆ) ವತಿಯಿಂದ 287ನೇ ದಿನದಲ್ಲಿ ಬಲ್ಡೋಟ ವಿರೋಧಿಸಿ, ಕಾರ್ಖಾನೆ ಮಾಲಿನ್ಯ ತೊಲಗಲಿ, ಹೈಕೋರ್ಟ್ ಆದೇಶದಂತೆ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ, ಕೇಂದ್ರ ಪ
ಕೊಪ್ಪಳ : 287ನೇ ದಿನದಲ್ಲಿ ಬಲ್ಡೋಟ ಹಾಗೂ ಮಾಲಿನ್ಯ ವಿರೋಧಿ ಧರಣಿ


ಕೊಪ್ಪಳ : 287ನೇ ದಿನದಲ್ಲಿ ಬಲ್ಡೋಟ ಹಾಗೂ ಮಾಲಿನ್ಯ ವಿರೋಧಿ ಧರಣಿ


ಕೊಪ್ಪಳ, 13 ಆಗಸ್ಟ್ (ಹಿ.ಸ.)

ಆ್ಯಂಕರ್ : ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ (ಜಂಟಿ ಕ್ರಿಯಾ ವೇದಿಕೆ) ವತಿಯಿಂದ 287ನೇ ದಿನದಲ್ಲಿ ಬಲ್ಡೋಟ ವಿರೋಧಿಸಿ, ಕಾರ್ಖಾನೆ ಮಾಲಿನ್ಯ ತೊಲಗಲಿ, ಹೈಕೋರ್ಟ್ ಆದೇಶದಂತೆ ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿ, ಕೇಂದ್ರ ಪರಿಸರ ಇಲಾಖೆಯ ಶಿಫಾರಸಿನಂತೆ ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಮಾಲಿನ್ಯಕಾರಿ ಕಾರ್ಖಾನೆಗಳನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಿ, ಐಐಎಸ್ಸಿ ಮೂಲಕ ಪರಿಸರ ಹಾನಿಯ ಸಮೀಕ್ಷೆ, ಏಮ್ಸ್ ಮೂಲಕ 22 ಬಾಧಿತ ಹಳ್ಳಿಗಳ ಆರೋಗ್ಯ ಸಮೀಕ್ಷೆ ನಡೆಸಬೇಕು, ಬಾಧಿತ ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ.

ಆ.15 ಸ್ವಾತಂತ್ರ್ಯೋತ್ಸವ ದಿನದಂದು ಧರಣಿ ಸ್ಥಳಕ್ಕೆ ಜಿಲ್ಲಾ ಮಂತ್ರಿ ಶಿವರಾಜ್ ತಂಗಡಗಿ, ಶಾಸಕರು, ಸಂಸದರು ಧರಣಿ ಸ್ಥಳಕ್ಕೆ ಆಗಮಿಸಿ ಗವಿಶ್ರೀಗಳು ಬಲ್ಡೋಟ (ಬಿಎಸ್ಪಿಎಲ್) ಸ್ಥಾಪನೆ ವಿರೋಧಿಸಿ ಸರಕಾರದಿಂದ ಜನಪ್ರತಿನಿಧಿಗಳು ಆದೇಶ ತರಬೇಕೆಂದು ಸಾವಿರಾರು ಜನರು ನೆರೆದಿದ್ದ ಬಹಿರಂಗ ಸಭೆಯಲ್ಲಿ ಕೊಪ್ಪಳ ಜನರ ಉಳಿವಿಗಾಗಿ ಧರ್ಮಾದೇಶ ಮಾಡಿದ್ದರು. ಒಂದೂವರೆ ವರ್ಷ ಕಳೆಯುತ್ತಾ ಬಂದರೂ ಇದುವರೆಗೆ ಕಾರ್ಖಾನೆ ಸ್ಥಾಪನೆ ರದ್ದುಪಡಿಸಿದ ಆದೇಶ ತಂದಿಲ್ಲ. ಸಚಿವರು ಈ ಪ್ರಶ್ನೆಗೆ ಉತ್ತರಿಸಲು ಆ ದಿನ ಧರಣಿ ಸ್ಥಳಕ್ಕೆ ಬರಲಿದ್ದಾರೆ. ಕೊಪ್ಪಳ-ಭಾಗ್ಯನಗರ ಹಾಗೂ ಬಾಧಿತ ಹಳ್ಳಿಯ ಜನರು ಆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಬಳಗ್ಗೆ 9 ಗಂಟೆಗೆ ಧರಣಿ ಸ್ಥಳಕ್ಕೆ ಬರಬೇಕೆಂದು ಹೋರಾಟ ವೇದಿಕೆ ಮೂಲಕ ವಿನಂತಿ ಮಾಡಲಾಗಿದೆ.

ಧರಣಿಯಲ್ಲಿ ಪ್ರಕಾಶಕ ಡಿ.ಎಂ.ಬಡಿಗೇರ, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಮಹಾದೇವಪ್ಪ ಮಾವಿನಮಡು, ರಾಜಶೇಖರ ಏಳುಭಾವಿ, ವಿಜಯ ಮಹಾಂತೇಶ ಹಟ್ಟಿ, ಶಿವಾನಂದಯ್ಶ ಬೀಳಗಿಮಠ, ಶಿವಪ್ಪ ಜಲ್ಲಿ, ಗಂಗಪ್ಪ ಡಂಬಳ, ಪಂಪಣ್ಣ ಚಿಂತಪಲ್ಲಿ, ರಮೇಶ ಸುರ್ವೆ, ಬಸವರಾಜಪ್ಪ ಮುಧೋಳ, ಬಿ.ಜಿ. ಕರಿಗಾರ, ರವಿ ಕಾಂತನವರ, ಮೂಕಪ್ಪ ಮೇಸ್ತ್ರಿ ಬಸಾಪುರ, ಗುಡದಪ್ಪ ಬನಪ್ಪನವರ, ರತ್ನಮ್ಮ ದೊಡ್ಡಮನಿ, ಶಿವಪ್ಪ ಹಲಗೇರಿ, ವೆಂಕಣ್ಣಾಚಾರ ಕಟ್ಟಿ ಮುಂತಾದವರು ಪಾಲ್ಗೊಂಡರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande