ಸಚಿವ ಸಂಪುಟದಲ್ಲೇ ಭ್ರಷ್ಟರಿದ್ದರೆ ಭ್ರಷ್ಟಾಚಾರ ನಿರ್ಮೂಲನೆ ಹೇಗೆ ಸಾಧ್ಯ: ಆರ್. ಅಶೋಕ
ಬೆಂಗಳೂರು, 12 ಆಗಸ್ಟ್ (ಹಿ.ಸ.): ಆ್ಯಂಕರ್:ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಯನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ ತೀವ್ರವಾಗಿ ಟೀಕಿಸಿದ್ದಾರೆ. ಸಚಿವ ಸಂಪುಟದಲ್ಲಿ ಭ್ರಷ್ಟಾಚಾರ ಹಾಗೂ ವಿವಿಧ ಆರೋಪಗಳನ್
ಅಶೋಕ


ಬೆಂಗಳೂರು, 12 ಆಗಸ್ಟ್ (ಹಿ.ಸ.):

ಆ್ಯಂಕರ್:ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಯನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ ತೀವ್ರವಾಗಿ ಟೀಕಿಸಿದ್ದಾರೆ. ಸಚಿವ ಸಂಪುಟದಲ್ಲಿ ಭ್ರಷ್ಟಾಚಾರ ಹಾಗೂ ವಿವಿಧ ಆರೋಪಗಳನ್ನು ಎದುರಿಸುತ್ತಿರುವವರನ್ನು ಮುಂದುವರಿಸಿಕೊಂಡು, ಭ್ರಷ್ಟಾಚಾರಿಗಳನ್ನು ಬಡಿದು ಹಾಕುತ್ತೇನೆ ಎನ್ನುವುದು ‘ಶತಮಾನದ ಅತ್ಯಂತ ದೊಡ್ಡ ಜೋಕ್’ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಆರ್‌. ಅಶೋಕ, “ಒಂದೆಡೆ ಸಚಿವ ಸಂಪುಟದಲ್ಲಿ ಸಾಲು ಸಾಲು ಭ್ರಷ್ಟರು, ಕಳಂಕಿತರು ಹಾಗೂ ಹಗರಣಗಳ ಆರೋಪಗಳನ್ನು ಎದುರಿಸುತ್ತಿರುವವರನ್ನು ಕೂರಿಸಿಕೊಂಡು, ಇನ್ನೊಂದೆಡೆ ಭ್ರಷ್ಟಾಚಾರ ಮಾಡುವವರನ್ನು ಬಡಿದು ಹಾಕುವೆ ಎಂದು ಮುಖ್ಯಮಂತ್ರಿ ಹೇಳುತ್ತಿರುವುದು ಜೋಕ್ ಆಫ್ ದಿ ಸೆಂಚುರಿ” ಎಂದು ಟೀಕಿಸಿದ್ದಾರೆ.

“ಬೇವಿನ ಮರ ತೋರಿಸಿ ಮಾವಿನ ಹಣ್ಣು ಕಿತ್ತು ಕೊಡುತ್ತೇನೆ ಎಂದಂತಾಗಿದೆ ನಿಮ್ಮ ಮಾತು” ಎಂದು ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಆರೋಪಗಳಿಗೆ ಪೂರಕವಾಗಿ ಸಚಿವರಾದ ಬಿ. ನಾಗೇಂದ್ರ, ಜಮೀರ್ ಅಹಮದ್, ಸಂತೋಷ್ ಲಾಡ್, ಮಧು ಬಂಗಾರಪ್ಪ ಹಾಗೂ ಇತರರ ವಿರುದ್ಧದ ವಿವಿಧ ಪ್ರಕರಣಗಳು ಮತ್ತು ಆರೋಪಗಳನ್ನು ಆರ್‌. ಅಶೋಕ ಪ್ರಸ್ತಾಪಿಸಿದ್ದಾರೆ.

ಬಿ. ನಾಗೇಂದ್ರ ಅವರ ವಿರುದ್ಧ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಆರೋಪಗಳಿವೆ ಎಂದು ಹೇಳಿರುವ ಅವರು, ಜಮೀರ್ ಅಹಮದ್ ವಿರುದ್ಧ ಮನೆ ಹಂಚಿಕೆ, ಐಎಂಎ ಆಸ್ತಿ ಮಾರಾಟ ಹಾಗೂ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸಂಬಂಧಿಸಿದಂತೆ ಆರೋಪಗಳನ್ನು ಉಲ್ಲೇಖಿಸಿದ್ದಾರೆ. ಸಂತೋಷ್ ಲಾಡ್ ವಿರುದ್ಧ ಕಾರ್ಮಿಕ ಇಲಾಖೆಯ ಆರೋಗ್ಯ ಕಿಟ್‌ ಪ್ರಕರಣವನ್ನು, ಮಧು ಬಂಗಾರಪ್ಪ ವಿರುದ್ಧ ಚೆಕ್‌ ಬೌನ್ಸ್‌ ಪ್ರಕರಣವನ್ನು ಪ್ರಸ್ತಾಪಿಸಿದ್ದಾರೆ.

ಅದೇ ರೀತಿ ವಿಜಯಾನಂದ ಕಾಶಪ್ಪನವರ್ ಹಾಗೂ ಕೆ.ಎಂ. ಶಿವಲಿಂಗೇಗೌಡ ಅವರ ನಡೆಗಳನ್ನೂ ಟೀಕಿಸಿರುವ ಅಶೋಕ, ಅರ್ಹತೆ ಮತ್ತು ನೈತಿಕತೆಗೆ ಜಾಗವಿಲ್ಲದೆ ಭ್ರಷ್ಟಾಚಾರ ಹಾಗೂ ಅನರ್ಹತೆಯ ಆರೋಪಗಳನ್ನು ಎದುರಿಸುತ್ತಿರುವವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

“ನಕಲಿ ಬಿಲ್, ಡಬಲ್ ಬಿಲ್ ಮಾಡುವವರನ್ನು ನಂತರ ಬಡಿದು ಹಾಕಿ. ಮೊದಲು ಕೋಟಿ ಕೋಟಿ ಸಾರ್ವಜನಿಕರ ಹಣ ಲೂಟಿ ಮಾಡಿದ ಆರೋಪ ಎದುರಿಸುತ್ತಿರುವವರು ನಿಮ್ಮ ಪಕ್ಕದಲ್ಲೇ ಸಚಿವರಾಗಿ ಮೆರೆಯುತ್ತಿದ್ದರೆ, ಅವರನ್ನು ಸಂಪುಟದಿಂದ ಹೊರಗೆ ಬಡಿದು ಹಾಕಿ” ಎಂದು ಅವರು ಮುಖ್ಯಮಂತ್ರಿ ಅವರಿಗೆ ಸವಾಲು ಹಾಕಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಡಳಿತವನ್ನು ‘ಕೊತ್ವಾಲ್ ಮಾಡೆಲ್’ ಎಂದು ಟೀಕಿಸಿರುವ ಅಶೋಕ, ಭ್ರಷ್ಟಾಚಾರ ವಿರುದ್ಧದ ಸರ್ಕಾರದ ಘೋಷಣೆಗಳು ಮತ್ತು ಸಂಪುಟದಲ್ಲಿನ ನೇಮಕಾತಿಗಳ ನಡುವೆ ಹೊಂದಾಣಿಕೆ ಇಲ್ಲ ಎಂದು ಆರೋಪಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande