ಸಹಕಾರ ಸಂಘಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಅವಕಾಶ
ಗದಗ, 12 ಆಗಸ್ಟ್ (ಹಿ.ಸ.) ಆ್ಯಂಕರ್: ಗದಗ ಜಿಲ್ಲೆಯ ಗದಗ ಮತ್ತು ರೋಣ ತಾಲೂಕಿನಲ್ಲಿರುವ ಎರಡು ಸಹಕಾರ ಸಂಘಗಳು ಹಲವು ವರ್ಷಗಳಿಂದ ತಮ್ಮ ಬೈಲಾದಲ್ಲಿ ನಮೂದಿಸಿರುವ ಉದ್ದೇಶಗಳಂತೆ ಯಾವುದೇ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಸಮಾಪನೆಗೊಳಿಸಿ ನೋಂದಣಿ ರದ್ದುಗೊಳಿಸುವ ಪ್ರಕ್ರಿ
ಫೋಟೋ


ಗದಗ, 12 ಆಗಸ್ಟ್ (ಹಿ.ಸ.)

ಆ್ಯಂಕರ್: ಗದಗ ಜಿಲ್ಲೆಯ ಗದಗ ಮತ್ತು ರೋಣ ತಾಲೂಕಿನಲ್ಲಿರುವ ಎರಡು ಸಹಕಾರ ಸಂಘಗಳು ಹಲವು ವರ್ಷಗಳಿಂದ ತಮ್ಮ ಬೈಲಾದಲ್ಲಿ ನಮೂದಿಸಿರುವ ಉದ್ದೇಶಗಳಂತೆ ಯಾವುದೇ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಸಮಾಪನೆಗೊಳಿಸಿ ನೋಂದಣಿ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.

ಸಹಕಾರ ಸಂಘಗಳ ಉಪನಿಬಂಧಕರು, ಗದಗ ಜಿಲ್ಲೆ, ಗದಗ ಅವರು ಸಮಾಪನಾ ಆದೇಶ ಹೊರಡಿಸಿ ಸಮಾಪನಾಧಿಕಾರಿಯನ್ನು ನೇಮಕ ಮಾಡಿದ್ದಾರೆ. ಸಮಾಪನೆಗೊಂಡಿರುವ ಸಹಕಾರ ಸಂಘಗಳು ತಮ್ಮ ನೋಂದಾಯಿತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ, ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರು (ಕಾರ್ಯದರ್ಶಿ) ಯಾರು ಎಂಬ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಕೆಳಕಂಡ ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಗಳಿಗೆ ಸಂಘದಿಂದ ಬರಬೇಕಾದ ಅಥವಾ ಸಂಘಕ್ಕೆ ಕೊಡಬೇಕಾದ ಹಣಕಾಸು ಬಾಬ್ತುಗಳಿದ್ದಲ್ಲಿ, ಸೂಕ್ತ ದಾಖಲಾತಿಗಳೊಂದಿಗೆ ಪ್ರಕಟಣೆ ಹೊರಡಿಸಿದ ಏಳು ದಿನಗಳೊಳಗಾಗಿ ಆಕ್ಷೇಪಣೆ ಸಲ್ಲಿಸುವಂತೆ ಕೋರಲಾಗಿದೆ.

ಆಕ್ಷೇಪಣೆ ಅಥವಾ ಹಕ್ಕು-ಬಾಧ್ಯತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಗದಗ ಉಪವಿಭಾಗ, ಗದಗ ಇವರಿಗೆ ಸಲ್ಲಿಸಬೇಕು.

ನಿಗದಿತ ಏಳು ದಿನಗಳ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಅಥವಾ ಹಕ್ಕು-ಬಾಧ್ಯತೆಗಳ ಕುರಿತು ದಾವೆ ಸಲ್ಲಿಸದಿದ್ದಲ್ಲಿ, ಯಾವುದೇ ಆಕ್ಷೇಪಣೆಗಳಿಲ್ಲವೆಂದು ಪರಿಗಣಿಸಿ, ಸಮಾಪನೆಗೊಂಡ ಸಹಕಾರ ಸಂಘಗಳ ಅಢಾವೆಯನ್ನು ನಿಯಮಾನುಸಾರ ಶೂನ್ಯಗೊಳಿಸಿ ನೋಂದಣಿ ರದ್ದುಗೊಳಿಸುವ ಕ್ರಮ ಕೈಗೊಳ್ಳಲಾಗುವುದು. ನಂತರ ಸಲ್ಲಿಕೆಯಾಗುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸಮಾಪನೆಗೊಂಡ ಸಹಕಾರ ಸಂಘಗಳು:

1. ದೈವಜ್ಞ ಕ್ರಿಯಾ ಸಮಿತಿ ವಿವಿಧೋದ್ದೇಶಗಳ ಸಹಕಾರ ಸಂಘ ನಿ., ಗದಗ, ಗದಗ ತಾಲೂಕು.

2. ಶ್ರೀ ಬಸವೇಶ್ವರ ವಿವಿಧೋದ್ದೇಶಗಳ ಸಹಕಾರ ಸಂಘ ನಿ., ಅಬ್ಬಿಗೇರಿ, ರೋಣ ತಾಲೂಕು.

ಸಂಬಂಧಪಟ್ಟ ವ್ಯಕ್ತಿಗಳು ನಿಗದಿತ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸುವಂತೆ ತಿಳಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande