ಬೇದ ಭಾವವಿಲ್ಲದೆ ಅರಿವಿನ ಬೆಳಕನ್ನು ನೀಡುವ ಗ್ರಂಥಾಲಯಗಳು : ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ
ಬೇದ ಭಾವವಿಲ್ಲದೆ ಅರಿವಿನ ಬೆಳಕನ್ನು ನೀಡುವ ಗ್ರಂಥಾಲಯಗಳು : ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ
ಬೆಂಗಳೂರಿನ ನಾರಾಯಣಪುರ ಕ್ರೆöÊಸ್ಟ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ’ಯಲ್ಲಿ ಕನ್ನಡ ಪ್ರಾಧ್ಯಾಪಕ ಹಾಗೂ ಚಿಂತಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಮಾತನಾಡಿದರು.


ಕೋಲಾರ, 12 ಆಗಷ್ಟ್ (ಹಿ.ಸ)

ಆ್ಯಂಕರ್ : ಆಯಾ ಧರ್ಮದವರು ಅವರಿಚ್ಛೆಯ ಆರಾಧನಾಲಯಗಳಿಗೆ ಹೋಗಿಬರುವುದು ಸಹಜ. ಇದಕ್ಕೆ ಕೆಲವು ನಿರ್ಬಂಧಗಳೂ ಉಂಟು. ಜೊತೆಗೆ ನಮ್ಮ ಭಕ್ತಿ, ಮಂತ್ರಗಳಿಗೆ ದೇವಾಲಯದ ದೇವರು ಒಲಿಯುತ್ತಾರೋ ಇಲ್ಲವೋ ತಿಳಿಯದು. ಆದರೆ ಸರ್ವಜನಾಂಗಕ್ಕೂ ಜ್ಞಾನತಾಣವಾದ ಗ್ರಂಥಾಲಯಕ್ಕೆ ಹೋಗಲು ಯಾರಿಗೂ ನಿರ್ಬಂಧಗಳಿಲ್ಲ. ಜ್ಞಾನಾಲಯದಲ್ಲಿ ಪರಂಜ್ಯೋತಿ ಸ್ವರೂಪದಂತಿರುವ ಪುಸ್ತಕಗಳನ್ನು ಸರ್ವರೂ ಮುಟ್ಟಬಹುದು, ಶ್ರದ್ಧೆಯಿಂದ ಓದಿದರೆ ಮನ ಮುಟ್ಟಬಹುದು, ಸಾಧಿಸಿ ಜೀವನ ಕಟ್ಟಿಕೊಳ್ಳಬಹುದು. ಗ್ರಂಥಾಲಯಗಳು ಯಾವುದೇ ಭಿನ್ನಭೇದಗಳಿಲ್ಲದೆ ಅರಿವಿನ ಬೆಳಕನ್ನು ನೀಡುವ ಜ್ಞಾನಾಲಯಗಳು ಎಂದು ಕನ್ನಡ ಪ್ರಾಧ್ಯಾಪಕ ಹಾಗೂ ಚಿಂತಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಗ್ರಂಥಾಲಯ ಸಂಪನ್ಮೂಲ ಬಳಕೆ ಅತ್ಯುತ್ತಮೀಕರಣ ಸಮಿತಿಯ ವತಿಯಿಂದ ‘ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ’ಯ ಪ್ರಯುಕ್ತ ಆಯೋಜಿಸಲಾಗಿದ್ದ ‘ಜಗಬೆಳಗುವ ಜ್ಞಾನಾಲಯ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜ್ಞಾನಸಾಗರವಾಗಿರುವ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಾಗಲೀ ಜ್ಞಾನಾರ್ಥಿಗಳಾಗಲೀ ಈಜುತ್ತಾ ಈಜುತ್ತಾ, ಆಳಕ್ಕಿಳಿದರೆ ಸರ್ವಜ್ಞಾನದ ಮುತ್ತುರತ್ನಗಳು ದೊರೆಯುತ್ತವೆ. ಅವುಗಳ ಮೂಲಕ ಸರ್ವಾದರಣೀಯ ಸಾಧನೆಯನ್ನು ಮಾಡಬಹುದಾಗಿದೆ. ಜಗತ್ತಿನ ಬಹುಸಂಗತಿಗಳ ಸತ್ಯಶೋಧನೆ ಹಾಗೂ ಹಲವು ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾದ ತತ್ವಜ್ಞಾನಿಗಳು, ಚಿಂತಕರು, ವಿದ್ವಾಂಸರು, ಹೋರಾಟಗಾರರು, ನಾಯಕರು, ಆರ್ಥಿಕ ಹಾಗೂ ಸಾಂಸ್ಕೃತಿಕ ಮುಂದಾಳುಗಳೆಲ್ಲರೂ ಗ್ರಂಥಗಳನ್ನೇ ತಮ್ಮ ಲೋಕವಾಗಿಸಿಕೊಳ್ಳುತ್ತಾ ಲೋಕಮುಖೀ ಗ್ರಂಥಗಳೇ ತಾವಾಗಿದ್ದು ಹೆಮ್ಮೆಯ ಸಂಗತಿ ಎಂದರು.

ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ವಿಶ್ವಪ್ರಸಿದ್ಧರಾದ ಡಾ.ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ಗೌರವಾರ್ಥವಾಗಿ ಈ ದಿನವು ಸಾರ್ಥಕಗೊಳ್ಳಲು ಜ್ಞಾನದಾಸೋಹಿಯಂತಿರುವ ಗ್ರಂಥಾಲಯಗಳನ್ನು ನಾವೆಲ್ಲರೂ ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಸಂಕುಚಿತವಾದ ಹಲವು ಸಂಗತಿಗಳಿAದ ಕುಬ್ಜರಾಗುತ್ತಿರುವ ಮಾನವರು ಜ್ಞಾನಾಲಯಗಳಲ್ಲಿ ಶ್ರದ್ಧೆಯಿಂದ ನಡೆದಾಡಿದರೆ ವಿಶ್ವಮಾನವರಾಗಬಹುದು. ಯಾಕೆಂದರೆ, ಇಲ್ಲಿ ಜಗತ್ತಿನ ಸರ್ವ ಜ್ಞಾನ ಹಾಗೂ ಜ್ಞಾನಿಗಳ ಸಂವಾದದ ಮೂಲಕ ಬಹುಮುಖಿ ಅರಿವಿನ ಬೆಳಗು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ನಿರ್ದೇಶಕ ರಾದ ರೆ.ಫಾ.ಸೋಮ್ ಜಕಾರಿಯ, ಗ್ರಂಥಾಲಯ ಸಂಪನ್ಮೂಲ ಬಳಕೆ ಅತ್ಯುತ್ತಮೀಕರಣ ಸಮಿತಿಯ ಸಂಯೋಜಕರಾದ ಡಾ.ಉಮಾ ಮಹೇಶ್ವರಿ, ಡಾ. ಕೃಷ್ಣ ಡಿ. ಲಮಾಣಿ, ಡಾ. ರಾಜೇಶ್ ನಾಯಕ್, ಪ್ರೊ. ಸೋನಾ, ವಿಶ್ವವಿದ್ಯಾಲಯದ ಮುಖ್ಯ ಗ್ರಂಥಪಾಲಕರಾದ ಹರೀಶ್ ಡಿ. ಎನ್., ಪ್ರಭು ಸಿ., ಸಹಾಯಕ ಗ್ರಂಥಪಾಲಕರಾದ ಅನಿಲ್ ಕುಮಾರ್, ಕುಮಾರಿ ನೇತ್ರಾವತಿ, ಮನೋಜ್ ಕುಮಾರ್, ಕುಮಾರಿ ಮಂಜಿಮಾ ಭಾಗವಹಿಸಿದ್ದರು.ಪುಸ್ತಕ ಓದು ಹಾಗೂ ಬಳಕೆ ಕುರಿತು ವಿದ್ಯಾರ್ಥಿಗಳು ಸಂವಾದ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande