ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನವರ ಜನ್ಮ ದಿನಾಚಾರಣೆಯನ್ನು ಆಗಸ್ಟ್ ೧೫ ರಂದು ಆಚರಿಸಲು ಒತ್ತಾಯ
ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನವರ ಜನ್ಮ ದಿನಾಚಾರಣೆಯನ್ನು ಆಗಸ್ಟ್ ೧೫ ರಂದು ಆಚರಿಸಲು ಒತ್ತಾಯ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮಜಯಂತಿ ಆಚರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಕೋಲಾರ ಜಿಲ್ಲಾಧಿಕಾರಿಗಳ ಮೂಲಕ ಕೆ.ಎನ್.ರವೀಂದ್ರನಾಥ್ ಹಾಗೂ ಇತರರು ಮನವಿ ಸಲ್ಲಿಸಿದರು.


ಕೋಲಾರ, 12 ಆಗಷ್ಟ್ (ಹಿ.ಸ):

ಆ್ಯಂಕರ್ : ಬ್ರಿಟೀಷರ ವಿರುದ್ದ ಹೋರಾಟ ಮಾಡಿದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನವರ ಜನ್ಮ ದಿನಾಚಾರಣೆಯನ್ನು ಆಗಸ್ಟ್ ೧೫ ರಂದು ಮತ್ತು ಹುತಾತ್ಮರಾದ ದಿನವನ್ನು ಜನವರಿ ೨೬ ರಂದು ಪ್ರತಿ ವರ್ಷ ರಾಜ್ಯದಲ್ಲಿ ಆಚರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ರವರ ಮುಖಾಂತರ ಗೌರಿಪೇಟೆಯ ಕೆ.ಎನ್.ರವೀಂದ್ರನಾಥ್, ಕನಕ ಬಳಗದ ರಾಜ್ಯಾಧ್ಯಕ್ಷ ಶಿವಕುಮಾರ್, ನಿವೃತ್ತ ಎ.ಎಸ್.ಐ. ರಮೇಶ್ ಮನವಿ ಸಲ್ಲಿಸಿದರು.

ಬಸವರಾಜು ಬೊಮ್ಮಾಯಿಯವರು ಮುಖ್ಯಮಂತ್ರಿಗಳಾಗಿದ್ದಂತಹ ಅವಧಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ಜನ್ಮ ದಿನವನ್ನು ಆಗಸ್ಟ್ ೧೫ ರಂದು ಮತ್ತು ಹುತಾತ್ಮರಾದ ದಿನವನ್ನು ಜನವರಿ ೨೬ ರಂದು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಆಚರಿಸುವಂತೆ ಆದೇಶಿಸಿ ಸುತ್ತೋಲೆ ಹೊರಡಿಸಿದ್ದರು. ಆದರೆ ಸದರಿ ಸುತ್ತೊಲೆಯಲ್ಲಿ ತಿಳಿಸಿರುವಂತೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ವರ್ಷ ಆಚರಿಸುತ್ತಿಲ್ಲ. ಭಾರತದ ಸ್ವಾತಂತ್ರö್ಯ ಹೋರಾಟಗಾರ ತನ್ನ ಪ್ರಾಣವನ್ನು ಬಲಿದಾನ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರಿಗೆ ಮಾಡಲಾಗುತ್ತಿರುವ ಅವಮಾನವಾಗಿದ್ದು, ಇದನ್ನು ಇಡೀ ರಾಜ್ಯದ ಕುರುಬ ಸಮಾಜ ಖಂಡಿಸಿ ಪ್ರತಿಭಟಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಮುಂದೆ ಪ್ರತಿ ವರ್ಷ ಜನವರಿ ೨೬ ರಂದು ಸಂಗೊಳ್ಳಿ ರಾಯಣ್ಣ ನವರ ಹುತಾತ್ಮ ದಿನವನ್ನಾಗಿ ಮತ್ತು ಆಗಸ್ಟ್ ೧೫ ರಂದು ಜನ್ಮ ದಿನವನ್ನಾಗಿ ರಾಜ್ಯ ಮಟ್ಟದಲ್ಲಿ ಎಲ್ಲಾ ಜಿಲ್ಲಾ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವಂತೆ ಸುತ್ತೋಲೆಯನ್ನು ಹೊರಡಿಸುವ ಮೂಲಕ ರಾಜ್ಯದ ಕುರುಬ ಸಮಾಜಕ್ಕೆ ೨೦೨೬ನೇ ವರ್ಷದ ಕೊಡುಗೆಯನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande