ಅಕ್ಟೋಬರ್–ನವೆಂಬರ್ನಲ್ಲಿ ಹಲವು ರೈಲುಗಳ ಸಂಚಾರ ರದ್ದು
ಮೈಸೂರು, 11 ಆಗಸ್ಟ್ (ಹಿ.ಸ.): ಆ್ಯಂಕರ್:ಮೈಸೂರು ವಿಭಾಗದ ಶ್ರೀವಾಗಿಲು ಹಾಗೂ ಯಡಕುಮರಿ ರೈಲು ನಿಲ್ದಾಣಗಳ ನಡುವಿನ ಹಳಿ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳ ಹಿನ್ನೆಲೆಯಲ್ಲಿ ಲೈನ್ ಬ್ಲಾಕ್ ಕೈಗೊಳ್ಳಲಾಗಿದ್ದು, ಹಲವು ರೈಲುಗಳ ಸಂಚಾರವನ್ನು ನಿಗದಿತ ದಿನಗಳಲ್ಲಿ ರದ್ದುಗೊಳಿಸಲಾಗಿದೆ ಎಂದು ಮೈಸೂರ
ಅಕ್ಟೋಬರ್–ನವೆಂಬರ್ನಲ್ಲಿ ಹಲವು ರೈಲುಗಳ ಸಂಚಾರ ರದ್ದು


ಮೈಸೂರು, 11 ಆಗಸ್ಟ್ (ಹಿ.ಸ.):

ಆ್ಯಂಕರ್:ಮೈಸೂರು ವಿಭಾಗದ ಶ್ರೀವಾಗಿಲು ಹಾಗೂ ಯಡಕುಮರಿ ರೈಲು ನಿಲ್ದಾಣಗಳ ನಡುವಿನ ಹಳಿ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳ ಹಿನ್ನೆಲೆಯಲ್ಲಿ ಲೈನ್ ಬ್ಲಾಕ್ ಕೈಗೊಳ್ಳಲಾಗಿದ್ದು, ಹಲವು ರೈಲುಗಳ ಸಂಚಾರವನ್ನು ನಿಗದಿತ ದಿನಗಳಲ್ಲಿ ರದ್ದುಗೊಳಿಸಲಾಗಿದೆ ಎಂದು ಮೈಸೂರು ರೇಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರದ್ದುಪಡಿಸಿರುವ ರೈಲುಗಳು:

- 16575 ಯಶವಂತಪುರ–ಮಂಗಳೂರು ಜಂಕ್ಷನ್ ತ್ರಿ-ಸಾಪ್ತಾಹಿಕ ಎಕ್ಸ್‌ಪ್ರೆಸ್: ಅಕ್ಟೋಬರ್ 4, 6, 8, 11, 13, 15, 22, 25, 27, 29 ಹಾಗೂ ನವೆಂಬರ್ 1, 3ರಂದು — ಒಟ್ಟು 12 ದಿನ.

- 16576 ಮಂಗಳೂರು ಜಂಕ್ಷನ್–ಯಶವಂತಪುರ ತ್ರಿ-ಸಾಪ್ತಾಹಿಕ ಎಕ್ಸ್‌ಪ್ರೆಸ್: ಅಕ್ಟೋಬರ್ 5, 7, 9, 12, 14, 16, 23, 26, 28, 30 ಹಾಗೂ ನವೆಂಬರ್ 2, 4ರಂದು — ಒಟ್ಟು 12 ದಿನ.

- 16515 ಯಶವಂತಪುರ–ಕಾರವಾರ ತ್ರಿ-ಸಾಪ್ತಾಹಿಕ ಎಕ್ಸ್‌ಪ್ರೆಸ್: ಅಕ್ಟೋಬರ್ 5, 7, 9, 12, 14, 21, 23, 26, 28, 30 ಹಾಗೂ ನವೆಂಬರ್ 2ರಂದು — ಒಟ್ಟು 11 ದಿನ.

- 16516 ಕಾರವಾರ–ಯಶವಂತಪುರ ತ್ರಿ-ಸಾಪ್ತಾಹಿಕ ಎಕ್ಸ್‌ಪ್ರೆಸ್: ಅಕ್ಟೋಬರ್ 6, 8, 10, 13, 15, 22, 24, 27, 29, 31 ಹಾಗೂ ನವೆಂಬರ್ 3ರಂದು — ಒಟ್ಟು 11 ದಿನ.

- 16539 ಯಶವಂತಪುರ–ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್: ಅಕ್ಟೋಬರ್ 10, 24 ಮತ್ತು 31ರಂದು — ಒಟ್ಟು 3 ದಿನ.

- 16540 ಮಂಗಳೂರು ಜಂಕ್ಷನ್–ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್: ಅಕ್ಟೋಬರ್ 11, 25 ಹಾಗೂ ನವೆಂಬರ್ 1ರಂದು — ಒಟ್ಟು 3 ದಿನ.

ಹಳಿ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳ ಹಿನ್ನೆಲೆಯಲ್ಲಿ ರೈಲು ಸಂಚಾರದಲ್ಲಿ ಈ ತಾತ್ಕಾಲಿಕ ಬದಲಾವಣೆ ಮಾಡಲಾಗಿದ್ದು, ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ತಮ್ಮ ರೈಲಿನ ಸಂಚಾರ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande