ಶಿವಸಿಂಪಿ ಸಮಾಜ ಬೇಡುವ ಸಮಾಜವಲ್ಲ : ಸಿ.ವಿ. ಚಂದ್ರಶೇಖರ್
ಕೊಪ್ಪಳ, 11 ಆಗಸ್ಟ್ (ಹಿ.ಸ.) ಆ್ಯಂಕರ್: ಶಿವಸಿಂಪಿ ಸಮಾಜ ಇತರ ಸಮಾಜಗಳಿಗಿಂತ ಚಿಕ್ಕ ಸಮಾಜವಾದರೂ, ಚೊಕ್ಕ ಮತ್ತು ಸುಂದರ ಸಮಾಜ. ಇದು ಕೊಡುಗೆ ನೀಡುವ ಸಮಾಜವೇ ಹೊರತು, ಬೇಡುವ ಸಮಾಜವಲ್ಲ ಎಂದು ಜೆಡಿಎಸ್ ರಾಜ್ಯ ಕೋರ್ ಕಮೀಟಿ ಸದಸ್ಯರಾದ ಸಿ.ವಿ.ಚಂದ್ರಶೇಖರ್ ಹೇಳಿದರು. ನಗರದ ಸಾಹಿತ್ಯ ಭವನದಲ್ಲಿ ನಡೆದ
ಶಿವಸಿಂಪಿ ಸಮಾಜ ಬೇಡುವ ಸಮಾಜವಲ್ಲ : ಸಿ.ವಿ. ಚಂದ್ರಶೇಖರ್


ಶಿವಸಿಂಪಿ ಸಮಾಜ ಬೇಡುವ ಸಮಾಜವಲ್ಲ : ಸಿ.ವಿ. ಚಂದ್ರಶೇಖರ್


ಶಿವಸಿಂಪಿ ಸಮಾಜ ಬೇಡುವ ಸಮಾಜವಲ್ಲ : ಸಿ.ವಿ. ಚಂದ್ರಶೇಖರ್


ಕೊಪ್ಪಳ, 11 ಆಗಸ್ಟ್ (ಹಿ.ಸ.)

ಆ್ಯಂಕರ್: ಶಿವಸಿಂಪಿ ಸಮಾಜ ಇತರ ಸಮಾಜಗಳಿಗಿಂತ ಚಿಕ್ಕ ಸಮಾಜವಾದರೂ, ಚೊಕ್ಕ ಮತ್ತು ಸುಂದರ ಸಮಾಜ. ಇದು ಕೊಡುಗೆ ನೀಡುವ ಸಮಾಜವೇ ಹೊರತು, ಬೇಡುವ ಸಮಾಜವಲ್ಲ ಎಂದು ಜೆಡಿಎಸ್ ರಾಜ್ಯ ಕೋರ್ ಕಮೀಟಿ ಸದಸ್ಯರಾದ ಸಿ.ವಿ.ಚಂದ್ರಶೇಖರ್ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ನಡೆದ ಕುಲಗುರು ಶ್ರೀ ಶಿವದಾಸಿಮಯ್ಯನವರ ಜಯಂತ್ಸೋವ ಕಾರ್ಯಕ್ರಮ ಉದ್ಘಾಟಿಸಿದ ಅವರು, ಶಿವಸಿಂಪಿಗರು ಮಾನಮುಚ್ಚುವ ಕೆಲಸದಲ್ಲಿ ತೊಡಗಿದವರು. ನಮ್ಮೆಲ್ಲರ ಮೈಯನ್ನು ತಮ್ಮ ಬಟ್ಟೆ ಹೊಲಿಯುವ ಕಾಯಕದಿಂದ ನಮ್ಮ ಮಾನವನ್ನು ರಕ್ಷಿಸುವವರು ಅವರು ಕಾಯಕ ಯೋಗಿಗಳು ಆಗಿದ್ದು, ಶಿವಸಿಂಪಿ ಸಮಾಜ ಬಟ್ಟೆ ಹೊಲಿಯುವ ಕಾಯಕದ ಜತೆಗೆ ಸಮಾಜದಲ್ಲಿ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಮಾಜದ ಹಿರಿಯರಾದ ಬಸವರಾಜಪ್ಪ ಅವರು, ವಚನ ಸಾಹಿತ್ಯವನ್ನು ನಿತ್ಯ ಬದುಕಿಗೆ ಹೇಗೆ ಅಳವಡಿಸಿಕೊಳ್ಳಬೇಕು. ಅವುಗಳನ್ನು ಅಳವಡಿಸಿಕೊಂಡರೆ ನಮ್ಮ ಬದುಕಿನ ಮಾರ್ಗಗಳು ಹೇಗೆ ಬದಲಾಗುತ್ತವೆ - ಸಮಾಜದಲ್ಲಿ ನಂಬಿಕೆಗೆ ಅರ್ಹವಾದ ಹಾಗು ನಂಬಿಕೆಯಿಂದ ಸಮುದಾಯವನ್ನು ಬೇಳೆಸುವ ಕಾರ್ಯವನ್ನು ನಾವು ಮಾಡಬೇಕು ಎಂದರು.

ಗಣ್ಯರಾದ ಗುರುರಾಜ ಹಲಗೇರಿ, ಹಾಗೂ ಬಸವರಾಜ ಬೊಳ್ಕೊಳ್ಳಿ ಅವರು, ಸಮಾಜವನ್ನು ಕಟ್ಟುವ ಕೆಲಸ ಸುಲಭದ ಮಾತಲ್ಲ. ಎಲ್ಲರೂ ಒಂದುಗೂಡಿ ಸಮಾಜವನ್ನು ಕಟ್ಟಿ, ಸಮಾಜವನ್ನು ಬೆಳೆಸಿದರೆ ಸಮಾಜ ತಮ್ಮನ್ನು ಬೆಳಸುತ್ತ ಹೋಗುತ್ತದೆ. ಸಮಾಜದ ಬೆಳವಣಿಗೆಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಿವಸಿಂಪಿ ಸಮಾಜದ ಜಿಲ್ಲಾಧ್ಯಕ್ಷರಾದ ವಿರೇಶಕುಮಾರ ಬೆಟಗೇರಿ ಅವರು, ಸಮಾಜವನ್ನು ಕಟ್ಟುವಲ್ಲಿ ಒಗ್ಗಟ್ಟು ಮುಖ್ಯ. ನಾವು ನಮ್ಮ ಬದುಕಿನ ಸ್ವಲ್ಪ ಭಾಗವನ್ನಾದರೂ ಸಮಾಜಕ್ಕೆ ಮೀಸಲಿಡಬೇಕು. ಇಲ್ಲವಾದಲ್ಲಿ ಬದುಕಿಗೆ ಸಾರ್ಥಕತೆ ಬರುವುದಿಲ್ಲ.

ಶಿವಶಿಂಪಿ ಸಮುದಾಯದವರು ಬಟ್ಟೆಯನ್ನು ಹೊಲೆಯುವ ವೃತ್ತಿಯಿಂದ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ. ಸೂಜಿಯನ್ನು ದಾರ ಹಿಂಬಾಲಿಸಿ ಬಟ್ಟೆಗೆ ರೂಪ ನೀಡತ್ತದೆ. ಬೇಡವಾದ ಬಟ್ಟೆಯನ್ನು ಕತ್ತರಿ ಕತ್ತರಿಸುತ್ತದೆ. ಹಾಗೇಯೇ ಸಮಾಜದವರು ಸಹಿತ ಬೇಡವಾದ ವಿಷಯಗಳ ಕಡೆಗೆ ಗಮನಹರಿಸದೇ ಸಮಾಜದ ಅಭಿವೃದ್ದಿಯತ್ತ ಗಮನಹರಿಸಬೇಕು ಎಂದರು.

ಶ್ರೀಗವಿಮಠದ ಆವರಣದಿಂದ ಗಡಿಯಾರಕಂಬ ಮೂಲಕ ಕಾರ್ಯಕ್ರಮದ ವೇದಿಕೆ ಸಾಹಿತ್ಯ ಭವನದವರೆಗೆ ನಡೆದ ಕುಲಗುರು ಶ್ರೀ ಶಿವದಾಸಿಮಯ್ಯವರ ಭಾವಚಿತ್ರ ಹಾಗೂ ಕುಂಭ ಮೆರವಣಿಗೆಗೆ ಸಮಾಜದ ಗೌರವಾಧ್ಯಕ್ಷರಾದ ಶಿವಪುತ್ರಪ್ಪ ಸಿಂಪಿ ಮೆರವಣಿಗೆಗೆ ಚಾಲನೆ ನೀಡಿದರು. ಶಿವದಾಸಿಮಯ್ಯನವರ ಭಾವಚಿತ್ರಕ್ಕೆ ಹಿರಿಯರಾದ ಬಸವರಾಜ ಬೊಳ್ಳೋಳ್ಳಿ, ಸಯ್ಯದ ಜುಲ್ಲು ಖಾದ್ರಿ, ಗುರುರಾಜ ಹಲಗೇರಿ ಹಾಗೂ ಸಮಾಜದ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಬಸವರಾಜ ಅಂಗಡಿ ಪುಷ್ಪಾರ್ಚನೆ ಮಾಡಿದರು.

ಸಮಾಜದ ಪದಾಧಿಕಾರಿಗಳು, ಕೊಪ್ಪಳ ಶಿವಸಿಂಪಿ ಸೌಹಾರ್ದ ಸಹಕಾರಿ ನಿ.ದ ಆಡಳಿತ ಮಂಡಳಿ ಸದಸ್ಯರು, ಶಿವಪುತ್ರಪ್ಪ ಸಿಂಪಿ, ಮಹಾದೇವಪ್ಪ ಸಿಂಪಿ, ಬಸವರಾಜ ಸಿಂಪಿ, ಬಸವರಾಜ ಅಂಗಡಿ, ಸುಮಂಗಲಾ ಸಿಂಪಿ, ಬಸವರಾಜ ಹೆಬ್ಬಳ್ಳಿ , ಸೂಗಪ್ಪ ಶಿವಸಿಂಪಿ, ಮಲ್ಲಪ್ಪ ಗೊಂಡಬಾಳ, ಶಿವಣ್ಣ ಶಿವಸಿಂಪಿ. ಪ್ರಭಾತಕುಮಾರ, ಶ್ರೀಮತಿ ಲಕ್ಷ್ಮೀ ಬೆಟಗೇರಿ, ಸೋಮಶೇಖರ ಶಿವಸಿಂಪಿ, ಶಿವಲಿಂಗಪ್ಪ ಶಿವಸಿಂಪಿ, ಚನ್ನಬಸವ ಶಿವಸಿಂಪಿ, ಶ್ರೀಮತಿ ರೇಣುಕಾ ಶಿವಸಿಂಪಿ, ಮಂಜುನಾಥ ಶಿವಸಿಂಪಿ, ವಪ್ಪತ್ತೇಶ ಸಮಾಜ ಹಿರಿಯರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿಉಪಸ್ಥಿತಿ ಇದ್ದರು.

2025-26ನೇ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಶೇ.90% ರಷ್ಟು ಅಂಕಗಳಿಸಿ ತೇರ್ಗಡೆಯಾದ ಮಕ್ಕಳು ಹಾಗೂ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande