ಹೆಚ್ಡಿಕೆ ಸಿಎಂ ಆಗುವುದು ಕಾರ್ಯಕರ್ತರ ಬಯಕೆ:ವೀರೇಶ ದಳಪತಿ
ಕೊಪ್ಪಳ, 11 ಆಗಸ್ಟ್ (ಹಿ.ಸ.) ಆ್ಯಂಕರ್ : ಮುಂದಿನ ಚುನಾವಣೆಯ ನಂತರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಬೇಕು ಎನ್ನುವುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಜೆಡಿಎಸ್ ಕೊಪ್ಪಳ ತಾಲೂಕು ಘಟಕದ ಅಧ್ಯಕ್ಷ ವೀರೇಶಗೌಡ್ರು ದಳಪತಿ ಹೇಳಿದರು. ಮಂಗಳವಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಗುಡಗೇರಿ,
ಹೆಚ್ಡಿಕೆ ಸಿಎಂ ಆಗುವುದು ಕಾರ್ಯಕರ್ತರ ಬಯಕೆ


ಕೊಪ್ಪಳ, 11 ಆಗಸ್ಟ್ (ಹಿ.ಸ.)

ಆ್ಯಂಕರ್ : ಮುಂದಿನ ಚುನಾವಣೆಯ ನಂತರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಬೇಕು ಎನ್ನುವುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಜೆಡಿಎಸ್ ಕೊಪ್ಪಳ ತಾಲೂಕು ಘಟಕದ ಅಧ್ಯಕ್ಷ ವೀರೇಶಗೌಡ್ರು ದಳಪತಿ ಹೇಳಿದರು.

ಮಂಗಳವಾರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಗುಡಗೇರಿ, ಘಟ್ಟಿರಡ್ಡಿಹಾಳ, ಮುರ್ಲಾಪುರ, ಬೆಳಗಟ್ಟಿ ಗ್ರಾಮಗಳಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಕಳೆದ ಮೂರು ವರ್ಷಗಳಲ್ಲಿ ಕೊಪ್ಪಳದಲ್ಲಿ ಜೆಡಿಎಸ್ ಬಲಿಷ್ಠಗೊಂಡಿದೆ. ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಅವರ ನಾಯಕತ್ವದ ಬಗ್ಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮುಂದುವರೆಯುತ್ತದೆ ಎಂದು ನಾಯಕರು ಸ್ಪಷ್ಟಪಡಿಸಿದ್ದಾರೆ. ಕೊಪ್ಪಳದಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯ ಗೆಲುವು ಸ್ಪಷ್ಟವಾಗಿದೆ, ಎಂದು ಹೇಳಿದರು.

ಕಳೆದ ಮೂರು ವರ್ಷಗಳಿಂದ ಸಿ.ವಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ರೈತ ಪರ ಹಾಗೂ ಜನಪರ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ. ಬರ ವೀಕ್ಷಣೆಗಾಗಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಹಿರಿಯ ಮುಖಂಡರು ಶೀಘ್ರದಲ್ಲಿ ಕೊಪ್ಪಳಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ಕಳೆದ ಎರಡು ವರ್ಷಗಳಲ್ಲಿ ವ್ಯಾಪಕವಾಗಿ ಪಕ್ಷದ ಸದಸ್ಯತ್ವ ಮಾಡಲಾಗಿದೆ. ಈ ಅಭಿಯಾನದಲ್ಲಿ ರಾಜ್ಯದಲ್ಲಿ ಕೊಪ್ಪಳ ಮುಂಚೂಣಿಯಲ್ಲಿರುವುದು ವಿಶೇಷ. ಪಕ್ಷದ ಕಾರ್ಯಕರ್ತರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನೂತನ ಸದಸ್ಯತ್ವ ಮಾಡಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಪ್ರಮುಖರಾದ ಶೇಖರಗೌಡ ಪಾಟೀಲ್, ವಿರೂಪಾಕ್ಷಗೌಡ ಗುಡಗೇರಿ, ರವಿಕುಮಾರ ಗುಡಗೇರಿ, ಗಿರೀಶ ಕುಮಾರ, ಸುರೇಶ ಗುಡಗೇರಿ, ಪಂಪಾಪತಿ ಗುಡಗೇರಿ, ಬಸವರಾಜ ಮುರ್ಲಾಪುರ, ಸಚಿನ್ ಡಂಬಳ, ಬಸವರಾಜ ಘಟ್ಟಿರಡ್ಡಿಹಾಳ, ರಮೇಶ ಘಟ್ಟಿರಡ್ಡಿಹಾಳ, ಚಿರಂಜೀವಿ ಪೂಜಾರ, ಕೋಟೇಶ ಬೆಳಗಟ್ಟಿ, ರಮೇಶ ಬೆಳಗಟ್ಟಿ, ದೇವಪ್ಪ ತಳವಾರ, ಮರ್ಧಾನಸಾಬ ಬೆಳಗಟ್ಟಿ, ಹನುಮಂತ ಬೆಳಗಟ್ಟಿ, ಅರುಣಕುಮಾರ ಬೆಳಗಟ್ಟಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande