ರಾಸಾಯನಿಕ ತ್ಯಾಜ್ಯ: ಕೈಗಾರಿಕೆಗಳ ವಿರುದ್ಧ ಕ್ರಮ; ಈಶ್ವರ ಖಂಡ್ರೆ ಭರವಸೆ
ಬೀದರ್, 11 ಆಗಸ್ಟ್ (ಹಿ.ಸ.): ಆ್ಯಂಕರ್:ಹುಮನಾಬಾದ್ ಕೈಗಾರಿಕಾ ಪ್ರದೇಶದಿಂದ ಗುರುಗಂಗಾ, ಮಾಂಜ್ರಾ ನದಿ ಹಾಗೂ ಕಾರಂಜಾ ಹಿನ್ನೀರಿಗೆ ರಾಸಾಯನಿಕ ತ್ಯಾಜ್ಯ ಸೇರುತ್ತಿರುವುದನ್ನು ವಿರೋಧಿಸಿ ಹುಮನಾಬಾದ್–ಕಲಬುರಗಿ ಮುಖ್ಯ ರಸ್ತೆಯಲ್ಲಿ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಡೆಸಿದ ಪ್ರತಿಭಟನಾ ಸ್ಥ
ರಾಸಾಯನಿಕ ತ್ಯಾಜ್ಯ: ಕೈಗಾರಿಕೆಗಳ ವಿರುದ್ಧ ಕ್ರಮ; ಈಶ್ವರ ಖಂಡ್ರೆ ಭರವಸೆ


ಬೀದರ್, 11 ಆಗಸ್ಟ್ (ಹಿ.ಸ.):

ಆ್ಯಂಕರ್:ಹುಮನಾಬಾದ್ ಕೈಗಾರಿಕಾ ಪ್ರದೇಶದಿಂದ ಗುರುಗಂಗಾ, ಮಾಂಜ್ರಾ ನದಿ ಹಾಗೂ ಕಾರಂಜಾ ಹಿನ್ನೀರಿಗೆ ರಾಸಾಯನಿಕ ತ್ಯಾಜ್ಯ ಸೇರುತ್ತಿರುವುದನ್ನು ವಿರೋಧಿಸಿ ಹುಮನಾಬಾದ್–ಕಲಬುರಗಿ ಮುಖ್ಯ ರಸ್ತೆಯಲ್ಲಿ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು.

ಜನರ ಆರೋಗ್ಯ ಹಾಗೂ ಜಲಮೂಲಗಳ ಸಂರಕ್ಷಣೆಯಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಈಗಾಗಲೇ 6H ಇಂಡಸ್ಟ್ರೀಸ್, ಸತ್ಯದೀಪ್ತ ಕೆ. ಇಂಡಸ್ಟ್ರೀಸ್ ಹಾಗೂ ಹಿಮಾಲಯ ಇಂಡಸ್ಟ್ರೀಸ್ ವಿರುದ್ಧ ಮುಚ್ಚುವಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ವಿಸ್ತೃತ ಪರಿಶೀಲನೆ ಹಾಗೂ ವರದಿ ಆಧರಿಸಿ, ಮುಂದಿನ 15 ದಿನಗಳೊಳಗಾಗಿ ಕಾನೂನು ಪ್ರಕಾರ ಮಾಲಿನ್ಯಕ್ಕೆ ಕಾರಣವಾಗಿರುವ ಕೈಗಾರಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಗುರುಗಂಗಾ–ಮಾಂಜ್ರಾ ನದಿ ಹಾಗೂ ಕಾರಂಜಾ ಹಿನ್ನೀರನ್ನು ಸಂರಕ್ಷಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಜಲಮೂಲಗಳನ್ನು ಕಲುಷಿತಗೊಳಿಸುವವರ ವಿರುದ್ಧ ಕಾನೂನುಬದ್ಧ ಕ್ರಮ ಖಚಿತ ಎಂದು ಈಶ್ವರ ಖಂಡ್ರೆ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande