ಭೂ ಸ್ವಾಧೀನ ವಿರೋಧಿಸಿ ಬಳ್ಳಾರಿಯಲ್ಲಿ ಪ್ರತಿಭಟನೆ
ಬಳ್ಳಾರಿ, 10 ಆಗಸ್ಟ್ (ಹಿ.ಸ.) ಆ್ಯಂಕರ್ : ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ಮತ್ತು ಬಹು ರಾಷ್ಟ್ರೀಯ ಕಂಪನಿಗಳ ಭೂ ಕಬಳಿಕೆಯನ್ನು ವಿರೋಧಿಸಿ ರೈತರು ಹಾಗೂ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಜಂಟಿ ಕಾರ್ಮಿಕ ಸಂಘಟನೆಗಳ ವೇದಿಕೆ ವತಿಯಿಂದ ಕೇಂದ್ರ ಸರ್ಕಾರಕ್ಕೆ ಸೋಮವಾ
ಭೂ ಸ್ವಾಧೀನ ವಿರೋಧಿಸಿ ಬಳ್ಳಾರಿಯಲ್ಲಿ ಪ್ರತಿಭಟನೆ


ಬಳ್ಳಾರಿ, 10 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ಮತ್ತು ಬಹು ರಾಷ್ಟ್ರೀಯ ಕಂಪನಿಗಳ ಭೂ ಕಬಳಿಕೆಯನ್ನು ವಿರೋಧಿಸಿ ರೈತರು ಹಾಗೂ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಜಂಟಿ ಕಾರ್ಮಿಕ ಸಂಘಟನೆಗಳ ವೇದಿಕೆ ವತಿಯಿಂದ ಕೇಂದ್ರ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಲಾಯಿತು.

ಕೃಷಿ ಭೂಮಿ ಕೇವಲ ಒಂದು ಆಸ್ತಿ ಅಲ್ಲ. ಕೃಷಿ ಭೂಮಿ ರೈತರ ಜೀವನಾಧಾರ ಮಾತ್ರವಲ್ಲದೆ ದೇಶದ ಆಹಾರ ಭದ್ರತೆಯ ಆಧಾರವೂ ಆಗಿದೆ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡು ಕೈಗಾರಿಕೆ, ರಿಯಲ್ ಎಸ್ಟೇಟ್ ಹಾಗೂ ಬಹು ರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಳಿಗೆ ಒದಗಿಸುವ ಕ್ರಮಗಳು ರೈತರನ್ನು ಭೂಹೀನರನ್ನಾಗಿ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ನೀತಿಗಳು, ಬೀಜ ಕಾಯ್ದೆ, ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ರಾಷ್ಟ್ರೀಯ ಧೋರಣಾ ಚೌಕಟ್ಟು ಸೇರಿದಂತೆ ರೈತ ವಿರೋಧಿ ಕ್ರಮಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ವಿರೋಧಿ 4 ಲೇಬರ್ ಕೋಡ್ಗಳು ತಕ್ಷಣವೇ ರದ್ದಾಗಬೇಕು. ಬೆಲೆ ಏರಿಕೆ ತಡೆಗಟ್ಟಬೇಕು. ಅರಣ್ಯ ಕಂದಾಯ ಮತ್ತು ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಕೂಡಲೇ ಹಕ್ಕು ಪತ್ತ ವಿತರಿಸಬೇಕು. ರೈತರು ಮತ್ತು ಕಾರ್ಮಿಕರ ಮೇಲೆ ಹೆಚ್ಚುತ್ತಿರುವ ಆರ್ಥಿಕ ಒತ್ತಡವನ್ನು ನಿವಾರಿಸಿ, ಅವರಿಗೆ ಉದ್ಯೋಗ, ನ್ಯಾಯಯುತ ಆದಾಯ ಮತ್ತು ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷ ಸತ್ಯಬಾಬು, ಎಐಯುಟಿಯುಸಿ ಅಧ್ಯಕ್ಷರಾದ ಎ. ದೇವದಾಸ್, ಬಿಈಇಫ್ಐ ಕಾರ್ಯದರ್ಶಿ ಘನ ಮಲ್ಲಿಕಾರ್ಜುನ, ಕೆಪಿಆರ್ಎಸ್ ಅಧ್ಯಕ್ಷ ಶಿವಶಂಕರ್, ಕೆಆರ್ಆರ್ಎಸ್ ಹಾಗೂ ಹಸಿರು ಸೇನೆಯ ರಾಜ್ಯ ಅಧ್ಯಕ್ಷರಾದ ಮಾಧವರೆಡ್ಡಿ, ಮುಖಂಡರುಗಳಾದ ಡಾ. ಎನ್. ಪ್ರಮೋದ್, ಟಿ.ಜಿ. ವಿಠ್ಠಲ್, ಮಹಿಳಾ ಸಂಘದ ನಾಯಕಿ ಚಂದ್ರಕುಮಾರಿ, ಮಲ್ಲಮ್ಮ, ದುರುಗಮ್ಮ, ಗುರಳ್ಳಿ ರಾಜ, ಜಂಗ್ಲಿ ಸಾಬ್, ತಿಪ್ಪೇಸ್ವಾಮಿ, ತಾಯಪ್ಪ, ಖಾಧರ್ ಸುರೇಶ ಸೇರಿ ಅನೇಕರು ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande