ಬಲ್ಡೋಟ ಕಾರ್ಖಾನೆ ಮಾಲಿನ್ಯ ವಿರೋಧಿ ಹೋರಾಟ: ಆಗಸ್ಟ್ 27ರಂದು ಹೋರಾಟದ ನಡೆ ಶಾಸಕರ ಮನೆ ಕಡೆ
ಕೊಪ್ಪಳ, 10 ಆಗಸ್ಟ್ (ಹಿ.ಸ.) ಆ್ಯಂಕರ್ : ಬಲ್ಡೋಟ ಕಾರ್ಖಾನೆ ಮಾಲಿನ್ಯ ವಿರೋಧಿಸಿ 300ನೇ ದಿನದ ಹೋರಾಟ ರೂಪಿಸುವ ಕುರಿತು ಭಾಗ್ಯನಗರದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಹಿರಿಯ ವೈದ್ಯ ಡಾ. ಕೆ.ಜಿ. ಕುಲಕರ್ಣಿ ಮಾತನಾಡಿ
ಬಲ್ಡೋಟ ಮಾಲೀಕ ಬಹಿರಂಗ ಚರ್ಚೆಗೆ ಬರಲಿ : ಗವಿಶ್ರೀಗಳು ಹೇಳಿದ್ದೇನು, ಜನಪ್ರತಿನಿಧಿಗಳು ಮಾಡಿದ್ದೇನು?


ಬಲ್ಡೋಟ ಮಾಲೀಕ ಬಹಿರಂಗ ಚರ್ಚೆಗೆ ಬರಲಿ : ಗವಿಶ್ರೀಗಳು ಹೇಳಿದ್ದೇನು, ಜನಪ್ರತಿನಿಧಿಗಳು ಮಾಡಿದ್ದೇನು?


ಬಲ್ಡೋಟ ಮಾಲೀಕ ಬಹಿರಂಗ ಚರ್ಚೆಗೆ ಬರಲಿ : ಗವಿಶ್ರೀಗಳು ಹೇಳಿದ್ದೇನು, ಜನಪ್ರತಿನಿಧಿಗಳು ಮಾಡಿದ್ದೇನು?


ಬಲ್ಡೋಟ ಮಾಲೀಕ ಬಹಿರಂಗ ಚರ್ಚೆಗೆ ಬರಲಿ : ಗವಿಶ್ರೀಗಳು ಹೇಳಿದ್ದೇನು, ಜನಪ್ರತಿನಿಧಿಗಳು ಮಾಡಿದ್ದೇನು?


ಬಲ್ಡೋಟ ಮಾಲೀಕ ಬಹಿರಂಗ ಚರ್ಚೆಗೆ ಬರಲಿ : ಗವಿಶ್ರೀಗಳು ಹೇಳಿದ್ದೇನು, ಜನಪ್ರತಿನಿಧಿಗಳು ಮಾಡಿದ್ದೇನು?


ಕೊಪ್ಪಳ, 10 ಆಗಸ್ಟ್ (ಹಿ.ಸ.)

ಆ್ಯಂಕರ್ :

ಬಲ್ಡೋಟ ಕಾರ್ಖಾನೆ ಮಾಲಿನ್ಯ ವಿರೋಧಿಸಿ 300ನೇ ದಿನದ ಹೋರಾಟ ರೂಪಿಸುವ ಕುರಿತು ಭಾಗ್ಯನಗರದ ಬಾಲಾಜಿ ಫಂಕ್ಷನ್ ಹಾಲ್‌ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಹಿರಿಯ ವೈದ್ಯ ಡಾ. ಕೆ.ಜಿ. ಕುಲಕರ್ಣಿ ಮಾತನಾಡಿ, ಬಲ್ಡೋಟ ಕಂಪನಿ ಮಾಲೀಕರು ತಮ್ಮೊಂದಿಗೆ ಮಾತನಾಡಿದ್ದು, ವೈಜ್ಞಾನಿಕ ತಂತ್ರಜ್ಞಾನ ಬಳಸಿ ಸುಮಾರು 30 ಕಿ.ಮೀ. ದೂರದಲ್ಲಿ ಭೂಗರ್ಭದಲ್ಲಿ ದ್ರವ ತ್ಯಾಜ್ಯ ಹಾಗೂ ರಾಸಾಯನಿಕ ಧೂಳು ಶೇಖರಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ. ಕಂಪನಿ ಮಾಲೀಕರು ಹೋರಾಟಗಾರರೊಂದಿಗೆ ನೇರವಾಗಿ ಚರ್ಚಿಸಲು ಸಿದ್ಧರಿದ್ದಾರೆ ಎಂದು ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕ್ರಿಯಾವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಕಾರ್ಖಾನೆ ಮಾಲೀಕರೊಂದಿಗೆ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧವಿದೆ ಎಂದರು. 2011ರಿಂದ ಕಾರ್ಯನಿರ್ವಹಿಸುತ್ತಿರುವ ಎಂಎಸ್‌ಪಿಎಲ್ ಪೆಲೆಟ್ ಘಟಕದಿಂದ ನಗರದ ಶೇ.40ರಷ್ಟು ಭಾಗ ಧೂಳಿನಿಂದ ಬಾಧಿತವಾಗಿದೆ ಎಂದು ಆರೋಪಿಸಿದ ಅವರು, ಮೊದಲು ಅಸ್ತಿತ್ವದಲ್ಲಿರುವ ಮಾಲಿನ್ಯವನ್ನು ನಿಯಂತ್ರಿಸಿ ತೋರಿಸಲಿ ಎಂದು ಆಗ್ರಹಿಸಿದರು. ತ್ಯಾಜ್ಯವನ್ನು ಭೂಗರ್ಭದಲ್ಲಿ ಶೇಖರಿಸುವುದರಿಂದ ಅಂತರ್ಜಲದ ಮೇಲೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ವಾಣಿಜ್ಯೋದ್ಯಮಿ ಬಸವರಾಜ ಬಳ್ಳೊಳ್ಳಿ ಮಾತನಾಡಿ, ಹೋರಾಟ ಇಷ್ಟೊಂದು ದೀರ್ಘಕಾಲ ಮುಂದುವರಿದಿರುವುದು ವಿಷಾದನೀಯ. ಮತ್ತೊಮ್ಮೆ ಸಚಿವರು, ಶಾಸಕ ಹಾಗೂ ಸಂಸದರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಬೇಕು ಎಂದರು.

ಡಿ.ಎಚ್. ಪೂಜಾರ ಮಾತನಾಡಿ, ಬೃಹತ್ ಬಂಡವಾಳ ಹೂಡಿಕೆಯ ಕಾರ್ಖಾನೆ ಸ್ಥಾಪನೆ ತಡೆಯಲು ಸರ್ಕಾರದಿಂದ ಆದೇಶ ತರಬೇಕೆಂಬ ಜವಾಬ್ದಾರಿಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ವಹಿಸಲಾಗಿತ್ತು. ಆದರೆ ಈವರೆಗೆ ಕ್ರಮವಾಗಿಲ್ಲ ಎಂದು ಆರೋಪಿಸಿ, 301ನೇ ದಿನದಂದು ‘ಹೋರಾಟದ ನಡೆ ಶಾಸಕರ ಮನೆ ಕಡೆ’ ಎಂಬ ಘೋಷಣೆಯೊಂದಿಗೆ ಬೃಹತ್ ಹೋರಾಟ ನಡೆಸುವಂತೆ ಕರೆ ನೀಡಿದರು.

ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ನಿರ್ಣಯ ಮಂಡಿಸಿ, ಆಗಸ್ಟ್ 27ರಂದು ‘ನಮ್ಮ ಹೋರಾಟದ ನಡೆ ಶಾಸಕರ ಮನೆ ಕಡೆ’ ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸಲು ತೀರ್ಮಾನಿಸಲಾಯಿತು. ಬಾಧಿತ ಗ್ರಾಮಗಳು ಹಾಗೂ ನಗರದ ಪ್ರತಿಯೊಂದು ವಾರ್ಡ್‌ನ ನಾಗರಿಕರು ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು. ಆಗಸ್ಟ್ 15ರಂದು ಗವಿಶ್ರೀಗಳು ನೀಡಿದ ಹೇಳಿಕೆ ಹಾಗೂ ಜನಪ್ರತಿನಿಧಿಗಳು ಕೈಗೊಂಡ ಕ್ರಮಗಳ ಕುರಿತು ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವರು, ಶಾಸಕ ಹಾಗೂ ಸಂಸದರನ್ನು ಪ್ರಶ್ನಿಸುವ ನಿರ್ಣಯವೂ ಕೈಗೊಳ್ಳಲಾಯಿತು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ವಿ. ಕಣವಿ ಕಾನೂನು ಸಲಹೆಗಾಗಿ ಕಾನೂನು ಘಟಕ ರಚಿಸುವುದಾಗಿ ತಿಳಿಸಿದರು. ಸಭೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ನಾಗರಿಕರು ಭಾಗವಹಿಸಿ ಸಲಹೆಗಳನ್ನು ನೀಡಿದರು. ರಂಗಧಾರ ರೆಪರ್ಟರಿ ತಂಡದಿಂದ ಆದಿವಾಸಿ ಹಕ್ಕು ದಿನಾಚರಣೆ ಅಂಗವಾಗಿ ಕಿರು ನೃತ್ಯ ಪ್ರದರ್ಶನ ನಡೆಯಿತು. ರಮೇಶ ತುಪ್ಪದ ವಂದಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande