
ಕೋಲಾರ, 10 ಆಗಷ್ಟ್ (ಹಿ.ಸ):
ಆ್ಯಂಕರ್ : ಹಳ್ಳಿ ಹಳ್ಳಿಗಳಲ್ಲಿ ಜನಪದ ಕಲೆಗಳು ಆಧುನಿಕತೆಯ ಭರಾಟೆಯಲ್ಲಿ ನಶಿಸಿಹೋಗುತ್ತಿವೆ. ಇವು ಅಳಿದುಹೋಗಿ ಸುಮಾರು ವರ್ಷಗಳೇ ಕಳೆದಿದ್ದರೂ, ಇಂದಿಗೂ ಗ್ರಾಮೀಣ ಭಾಗದ ಕೆಲ ಮೂಲೆಗಳಲ್ಲಿ ಮಾತ್ರ ಅವು ಸ್ವಲ್ಪಮಟ್ಟಿಗೆ ಜೀವಂತವಾಗಿವೆ, ಎಂದು ಅಂತಾರಾಷ್ಟ್ರೀಯ ಕಲಾವಿದರಾದ ಗೋನಾಸ್ವಾಮಿ ಆತಂಕ ವ್ಯಕ್ತಪಡಿಸಿದರು.
ಕೋಲಾರ ತಾಲೂಕಿನ ನೆರ್ನಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯ ಬೆಂಗಳೂರು ಹಾಗೂ ಸುವರ್ಣ ಭೂಮಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಲಾಸಂಘದ ಸಂಯುಕ್ತಾಶ್ರಯದಲ್ಲಿ 'ಜಾನಪದ ಸಂಭ್ರಮ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ನೆಲ, ಈ ಜಲ, ವೆಂಕಟಾಚಲಪತಿ ಮಾತನಾಡಿ ನಮ್ಮ ಈ ಕೋಲಾರ ಜಿಲ್ಲೆಯು ಅಪಾರವಾದ ಜಾನಪದ ಸಂಪ್ರದಾಯವನ್ನು ಹೊಂದಿದೆ. ತಾತ-ಮುತ್ತಾತಂದಿರಿAದ ಬಂದಿರುವ ಈ ಅಮೂಲ್ಯ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಕೇವಲ ಸರ್ಕಾರದ ಅನುದಾನದಿಂದ ಮಾತ್ರ ಕಲೆಗಳನ್ನು ಉಳಿಸಲು ಸಾಧ್ಯವಿಲ್ಲ, ಪ್ರತಿಯೊಬ್ಬ ಕಲಾಪ್ರೇಮಿಯೂ ಜಾನಪದದ ರಕ್ಷಣೆಗಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಗ್ರಾಮ ಮುಖಂಡ ವೀರೇಗೌಡ ಮಾತನಾಡಿ ನಮ್ಮ ನೆರ್ನಹಳ್ಳಿ ಗ್ರಾಮದಲ್ಲಿ ಇಂತಹ ಭವ್ಯವಾದ ಜಾನಪದ ಕಾರ್ಯಕ್ರಮ ಆಯೋಜನೆಗೊಂಡಿರುವುದು ಹೆಮ್ಮೆಯ ವಿಷಯ. ಆಧುನಿಕ ಪಬ್ಲಿಕ್ ಕಲ್ಚರ್ ವ್ಯಾಮೋಹಕ್ಕೆ ಬಿದ್ದು ನಮ್ಮ ಅಪ್ಪಟ ದೇಸಿ ಕಲೆಗಳನ್ನು ಮರೆಯುತ್ತಿದ್ದೇವೆ. ಯುವ ಜನತೆ ಮೊಬೈಲ್ ಮತ್ತು ಟಿವಿಯಿಂದ ಹೊರಬಂದು ನಮ್ಮ ಮಣ್ಣಿನ ಕಲೆಗಳಾದ ಕೋಲಾಟ, ಡೊಳ್ಳುಕುಣಿತ ಹಾಗೂ ಜನಪದ ಗೀತೆಗಳನ್ನು ಕಲಿಯಬೇಕು ಮತ್ತು ಪ್ರೋತ್ಸಾಹಿಸಬೇಕು, ಎಂದು ತಿಳಿಸಿದರು.
ಸುವರ್ಣ ಭೂಮಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಲಾಸಂಘದ ಅಧ್ಯಕ್ಷ ಕುಡುವನಹಳ್ಳಿ ಗಣೇಶಪ್ಪ ಮಾತನಾಡಿ ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದಲೇ ನಮ್ಮ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಜಾನಪದ ಸಂಸ್ಕೃತಿ ಶಾಶ್ವತವಾಗಿ ಉಳಿಯಲು ಸಾಧ್ಯ. ಮುಂದಿನ ದಿನಗಳಲ್ಲಿ ಇಲಾಖೆಯ ಸಹಕಾರದೊಂದಿಗೆ ಗ್ರಾಮೀಣ ಭಾಗದಲ್ಲಿ ಇಂತಹ ಹತ್ತಾರು ಕಲಾ ಉತ್ಸವಗಳನ್ನು ನಡೆಸಲಾಗುವುದು, ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಕಲಾ ತಂಡಗಳು ತಮ್ಮ ಅದ್ಭುತ ಪ್ರದರ್ಶನದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ತಬಲ ಅರುಣ್ ಹಾಗೂ ವಿನುತಾ ತಂಡದಿAದ ಜನಪದ ನೃತ್ಯ ಸಂಧ್ಯಾ ಕಾರ್ಯಕ್ರಮ ಜನಮನ ಸೆಳೆಯಿತು. ಅಭಿಲಾಶ್ ಹಾಗೂ ತಂಡದವರಿAದ ಪ್ರದರ್ಶನಗೊಂಡ ಸಾಂಪ್ರದಾಯಿಕ ಕೋಲಾಟ ನೋಡುಗರ ಮೈಕೇಳಿಸುವಂತಿತ್ತು. ರಘುನಾಥ್ ಬಿ.ವಿ. ತಂಡದವರಿAದ ಮೂಡಿಬಂದ ಜನಪದ ನೃತ್ಯಗಾಯನ ಕಾರ್ಯಕ್ರಮ ಸಭಿಕರನ್ನು ರಂಜಿಸಿತು. ರಾಣ ಡ್ಯಾನ್ಸ್ ಅಕಾಡೆಮಿಯಿಂದ ವರ್ಣರಂಜಿತ ನೃತ್ಯ ಪ್ರದರ್ಶನ ಜರುಗಿತು.
ಸಮಾರಂಭದಲ್ಲಿ ಎಚ್. ಶಾಂತಮ್ಮ, ವೆಂಕಟಲಕ್ಷ್ಮಮ್ಮ, ಶೈಲಜಾ ಎಂ. ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್