
ಬಳ್ಳಾರಿ, 10 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಳ್ಳಾರಿಯ ಸಾಯಿ ದುರ್ಗಾ ಶ್ರೀ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಬಲಿಜ ಸಮುದಾಯ ವಿದ್ಯಾರ್ಥಿಗಳಿಗೆ `ಪ್ರತಿಭಾ ಪುರಸ್ಕಾರ - 2026'ವನ್ನು ಯಶಸ್ವಿಯಾಗಿ ನೆರವೇರಿಸಿದೆ.
ಬಲಿಜ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ, ಅವರನ್ನು ಪೆÇ್ರೀತ್ಸಾಹಿಸಿ, ಗೌರವಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 85% ಮತ್ತು ಅದಕ್ಕಿಂತಹ ಅಧಿಕ ಅಂಕಗಳನ್ನು ಗಳಿಸಿದ ಬಲಿಜ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ - ಅಭಿನಂದಿಸಿ ಗೌರವಿಸಿ ಪ್ರೋತ್ಸಾಹಿಸಲಾಯಿತು.
ಓ. ಕುಮಾರಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದರು. ಬಲಿಜ ಸಮಾಜದ ಜಾನಮ್ಮ, ರಮೇಶ್ ಬುಜ್ಜಿ, ಟಪಾಲ್ ಗಣೇಶ, ಗಾಜುಲ ಶ್ರೀನಿವಾಸಲು, ಅನಿಲ್ ನಾಯ್ಡು, ಹಂಪಿ ರಮಣ, ಕಾಂಡ್ರ ಸತೀಶ್, ಕೆ. ನಾಗೇಶ್, ಸಾಯಿ ನಾಯ್ಡು, ಭಾಸ್ಕರ್, ಪ್ರೇಮ್, ಜಿ. ಶ್ರೀನಿವಾಸ್, ಆನಂದ್, ಅಶೋಕ್, ರಾಜೇಶ್, ಎರ್ರಿಸ್ವಾಮಿ, ರಘು ಅವರು ವೇದಿಕೆಯಲ್ಲಿದ್ದರು.
ಶ್ರೀ ಸಾಯಿ ದುರ್ಗಾಸೇವಾ ಟ್ರಸ್ಟ್ ಅಧ್ಯಕ್ಷರಾಗಿರುವ ಎನ್. ನಾಗರಾಜು, ಎನ್. ನೀಲಿಮಾ, ಎನ್. ಗೋವಿಂದರಾಜಲು, ಎನ್. ರಶ್ಮಿ, ಜಿ. ರಂಗಸ್ವಾಮಿ, ವಿಜಯ್ ನಾಯ್ಡು, ಸಂತೋಷ್, ನಿರಂಜನ್ ಮುತ್ಯಾಲ, ಬೋರವೆಲ್ಲಿ ವೆಂಕಟೇಶ್ ಬಾಬು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್