
ಬಳ್ಳಾರಿ, 10 ಆಗಸ್ಟ್ (ಹಿ.ಸ.)
ಆ್ಯಂಕರ್: ಜೆಸ್ಕಾಂ ಬಳ್ಳಾರಿ ನಗರ ಉಪವಿಭಾಗ-1 ರ ವ್ಯಾಪ್ತಿಯ 220/11ಕೆವಿ ಅಲ್ಲೀಪುರ ವಿದ್ಯುತ್ ಉಪಕೇಂದ್ರದಿ0ದ ಸರಬರಾಜು ಆಗುವ ವಿದ್ಯುತ್ ಲೈನ್ ಗಳ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುರಿಂದ ಆಗಸ್ಟ್ 11 ರಂದು ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ಎಫ್-34 ವ್ಯಾಪ್ತಿಯ ಪ್ರದೇಶಗಳಾದ ಫಸ್ಟ್ ಗೇಟ್, ಕೊರಚ ಸ್ಟಿಟ್, ಉರ್ದು ಸ್ಕೂಲ್, ಕಡಪಗೆರೆ, ಟೈಲರ್ ಸ್ಟಿçಟ್, ವಡ್ಡೆ ನಾಗಪ್ಪ ಕಾಲೋನಿ, ತಿಲಕ್ ನಗರ್, ವಿನಾಯಕ ನಗರ, ಐಶ್ವರ್ಯ ಕಾಲೋನಿ, ಐಟಿಐ ಕಾಲೇಜ್, ರೇಡಿಯೋ ಪಾರ್ಕ್, ಕೌಲ್ ಬಜಾರ್ ಮೇನ್ ರೋಡ್ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.
ಹಾಗಾಗಿ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್