ಬಳ್ಳಾರಿ: ಜಿಲ್ಲೆಯಾದ್ಯಂತ 12 ಆಧಾರ್ ಕೇಂದ್ರಗಳು ಲಭ್ಯ
ಬಳ್ಳಾರಿ, 10 ಆಗಸ್ಟ್ (ಹಿ.ಸ.) ಆ್ಯಂಕರ್: ಜಿಲ್ಲೆಯ ನಾಗರಿಕರಿಗೆ ಸುಲಭ, ಸುರಕ್ಷಿತ ಹಾಗೂ ಪಾರದರ್ಶಕ ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಅಂಚೆ ಇಲಾಖೆ (ಬಳ್ಳಾರಿ ವಿಭಾಗ) ಜಿಲ್ಲೆಯ ವಿವಿಧ ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆಗಳನ್ನು ಮತ್ತಷ್ಟು ಬಲಪಡಿಸ
ಬಳ್ಳಾರಿ: ಜಿಲ್ಲೆಯಾದ್ಯಂತ 12 ಆಧಾರ್ ಕೇಂದ್ರಗಳು ಲಭ್ಯ


ಬಳ್ಳಾರಿ, 10 ಆಗಸ್ಟ್ (ಹಿ.ಸ.)

ಆ್ಯಂಕರ್: ಜಿಲ್ಲೆಯ ನಾಗರಿಕರಿಗೆ ಸುಲಭ, ಸುರಕ್ಷಿತ ಹಾಗೂ ಪಾರದರ್ಶಕ ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಅಂಚೆ ಇಲಾಖೆ (ಬಳ್ಳಾರಿ ವಿಭಾಗ) ಜಿಲ್ಲೆಯ ವಿವಿಧ ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆಗಳನ್ನು ಮತ್ತಷ್ಟು ಬಲಪಡಿಸಿದೆ.

ಸಾರ್ವಜನಿಕರಿಗೆ ತಮ್ಮ ಸಮೀಪದ ಅಂಚೆ ಕಚೇರಿಯಲ್ಲೇ ಗುಣಮಟ್ಟದ ಆಧಾರ್ ಸೇವೆಗಳು ಸಿಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು 12 ಆಧಾರ್ ಕೌಂಟರ್ಗಳು ತರಬೇತಿ ಪಡೆದ ಸಿಬ್ಬಂದಿ ಹಾಗೂ ಆಧುನಿಕ ಬಯೋಮೆಟ್ರಿಕ್ ಸಾಧನಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ.

*ಬಳ್ಳಾರಿ ಜಿಲ್ಲೆಯ ಆಧಾರ್ ಕೇಂದ್ರಗಳ ವಿವರ:*

ಬಳ್ಳಾರಿ ಮುಖ್ಯ ಅಂಚೆ ಕಚೇರಿ: 3 ಕೌಂಟರ್ಗಳು

ಕೌಲ್ ಬಜಾರ್ ಅಂಚೆ ಕಚೇರಿ: 1 ಕೌಂಟರ್

ಕಾ0ಟೋನ್ ಮೆಂಟ್ ಅಂಚೆ ಕಚೇರಿ: 1 ಕೌಂಟರ್

ಗಾ0ಧಿನಗರ ಅಂಚೆ ಕಚೇರಿ: 1 ಕೌಂಟರ್

ಕುರುಗೋಡು ಅಂಚೆ ಕಚೇರಿ: 1 ಕೌಂಟರ್

ಸಿರಿಗೇರಿ ಅಂಚೆ ಕಚೇರಿ: 1 ಕೌಂಟರ್

ಸಿರುಗುಪ್ಪ ಅಂಚೆ ಕಚೇರಿ: 1 ಕೌಂಟರ್

ಸ0ಡೂರು ಅಂಚೆ ಕಚೇರಿ: 1 ಕೌಂಟರ್

ಡಿ.ಟಿ. ಶಿಪ್ ಅಂಚೆ ಕಚೇರಿ: 1 ಕೌಂಟರ್

ಕ0ಪ್ಲಿ ಅಂಚೆ ಕಚೇರಿ: 1 ಕೌಂಟರ್

*ಲಭ್ಯವಿರುವ ಆಧಾರ್ ಸೇವೆಗಳು:*

ಹೊಸ ನೋಂದಣಿ: ಅರ್ಹರಿಗೆ ಸಂಪೂರ್ಣ ಉಚಿತವಾಗಿ ಹೊಸ ನೋಂದಣಿ.

ಬಯೋಮೆಟ್ರಿಕ್ ನವೀಕರಣ: ಫೋಟೋ, ಬೆರಳಚ್ಚು ಹಾಗೂ ಐರಿಸ್ ನವೀಕರಣ.

ಡೆಮೋಗ್ರಫಿಕ್ ನವೀಕರಣ: ಮೊಬೈಲ್ ಸಂಖ್ಯೆ, ವಿಳಾಸ, ಹೆಸರು, ಜನ್ಮ ದಿನಾಂಕ ಹಾಗೂ ಲಿಂಗ ತಿದ್ದುಪಡಿ.

ದಾಖಲೆ ನವೀಕರಣ ಹಾಗೂ ಯುಐಡಿಎಐ ಅನುಮೋದಿತ ಇತರೆ ಸೇವೆಗಳು.

*ಸಾರ್ವಜನಿಕರಲ್ಲಿ ಮನವಿ:*

ಹೊಸ ನೋಂದಣಿ ಸಂಪೂರ್ಣ ಉಚಿತವಾಗಿದ್ದು, ನವೀಕರಣ ಸೇವೆಗಳಿಗೆ ಯುಐಡಿಎಐ ನಿಗದಿಪಡಿಸಿರುವ ಅಧಿಕೃತ ಶುಲ್ಕವನ್ನು ಮಾತ್ರ ವಿಧಿಸಲಾಗುತ್ತದೆ. ನಾಗರಿಕರು ದೂರದ ಪ್ರಯಾಣ ಹಾಗೂ ಅನಗತ್ಯ ಅಲೆದಾಟವನ್ನು ತಪ್ಪಿಸಲು ತಮ್ಮ ಸಮೀಪದ ಅಂಚೆ ಕಚೇರಿಗೆ ಅಗತ್ಯ ಮೂಲ ದಾಖಲೆಗಳೊಂದಿಗೆ ಕಚೇರಿ ವೇಳೆಯಲ್ಲಿ ಭೇಟಿ ನೀಡಿ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ಅಂಚೆ ಕಚೇರಿಗಳ ಅಧೀಕ್ಷಕರು (ಬಳ್ಳಾರಿ ವಿಭಾಗ) ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande