ಬಳ್ಳಾರಿ : ಅವ್ವನಬಾವಿ ಕಾಲುವೆ - ಹೊಸ ಸೇತುವೆ : ಶಾಸಕ ನಾರಾ ಭರತರೆಡ್ಡಿ ಉದ್ಘಾಟನೆ
ಬಳ್ಳಾರಿ, 10 ಆಗಸ್ಟ್ (ಹಿ.ಸ.) ಆ್ಯಂಕರ್ : ಬಳ್ಳಾರಿ - ಸಿರುಗುಪ್ಪ ರಸ್ತೆಯ ಬಳ್ಳಾರಿ ಸಮೀಪದ ಎಚ್ಎಲ್ಸಿ ಕಾಲುವೆಗೆ ಲೋಕೋಪಯೋಗಿ ಇಲಾಖೆ 1.05 ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ತಿಂಗಳಲ್ಲಿ ನಿರ್ಮಾಣ ಮಾಡಿರುವ ಸೇತುವೆಯನ್ನು ಶಾಸಕ ನಾರಾ ಭರತರೆಡ್ಡಿ ಅವರು ಉದ್ಘಾಟಿಸಿ, ಜನಸೇವೆಗೆ ಅರ್ಪಿಸಿದ್ದಾರೆ. ಶಾ
ಬಳ್ಳಾರಿ : ಅವ್ವನಬಾವಿ ಕಾಲುವೆ - ಹೊಸ ಸೇತುವೆ : ಶಾಸಕ ನಾರಾ ಭರತರೆಡ್ಡಿ ಉದ್ಘಾಟನೆ


ಬಳ್ಳಾರಿ : ಅವ್ವನಬಾವಿ ಕಾಲುವೆ - ಹೊಸ ಸೇತುವೆ : ಶಾಸಕ ನಾರಾ ಭರತರೆಡ್ಡಿ ಉದ್ಘಾಟನೆ


ಬಳ್ಳಾರಿ, 10 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಳ್ಳಾರಿ - ಸಿರುಗುಪ್ಪ ರಸ್ತೆಯ ಬಳ್ಳಾರಿ ಸಮೀಪದ ಎಚ್ಎಲ್ಸಿ ಕಾಲುವೆಗೆ ಲೋಕೋಪಯೋಗಿ ಇಲಾಖೆ 1.05 ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ತಿಂಗಳಲ್ಲಿ ನಿರ್ಮಾಣ ಮಾಡಿರುವ ಸೇತುವೆಯನ್ನು ಶಾಸಕ ನಾರಾ ಭರತರೆಡ್ಡಿ ಅವರು ಉದ್ಘಾಟಿಸಿ, ಜನಸೇವೆಗೆ ಅರ್ಪಿಸಿದ್ದಾರೆ.

ಶಾಸಕ ನಾರಾ ಭರತರೆಡ್ಡಿ ಅವರು, ಸೇತುವೆಯ ಗುತ್ತಿಗೆದಾರರು ಕೇವಲ ಎರಡು ತಿಂಗಳಲ್ಲಿ ಸೇತುವೆಯನ್ನು ಉತ್ತಮವಾಗಿ ನಿರ್ಮಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿದ್ದಕ್ಕೆ ಅಭಿನಂದನೀಯ ಎಂದರು.

ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರು, ಮಾಜಿ ಮೇಯರ್ ಎಂ. ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಪರಶುರಾಮುಡು, ಹೊನ್ನಪ್ಪ, ಹಗರಿ ಗೋವಿಂದ, ಅವ್ವಂಭಾವಿ ಲೋಕೇಶ್, ಗಂಗಾಧರ್, ದೇವಿನಗರ ಹೊನ್ನೂರಪ್ಪ, ಬಿಆರ್ಎಲ್ ಸೀನಾ, ಮಹೇಂದ್ರ ಇನ್ನಿತರರು ಈ ಸಂದರ್ಭದಲ್ಲಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande