
ಬಳ್ಳಾರಿ, 09 ಜುಲೈ (ಹಿ.ಸ.)
ಆ್ಯಂಕರ್ : ಸಂಗನಕಲ್ಲು ಗ್ರಾಮದ ಗುಡ್ಡದ ಬಳಿ ನಿರಂತರ ಜ್ಯೋತಿ ವಿದ್ಯುತ್ ಕಂಭದಿಂದ ವಿದ್ಯುತ್ ಸಂಪರ್ಕದ ಲೈನ್ ಹಾಕುವಾಗ ಖಾಸಗಿ ಶಿಕ್ಷಣ ಸಂಸ್ಥೆಯು ಜನರೇಟರ್ ಪ್ರಾರಂಭಿಸಿದ ಕಾರಣ ವಿದ್ಯುತ್ ರಿವರ್ಸ್ನಲ್ಲಿ ಪ್ರವಹಿಸಿದ ಕಾರಣ ಓರ್ವ ಯುವಕ ವಿದ್ಯುತ್ ಕಂಬದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಮೃತನು ಯರಗುಡಿ ಹುಲಗಪ್ಪ (22). ಮೃತನು ಖಾಸಗಿ ವ್ಯಕ್ತಿಯಾಗಿದ್ದು, ಜೆಸ್ಕಾಂನ ಅಧಿಕೃತ ಲೈನ್ಮೆನ್ ಈ ಯುವಕನನ್ನು ಅನಧಿಕೃತವಾಗಿ ಕಂಬ ಹತ್ತಿಸಿದ್ದ ಕಾರಣ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಬಳ್ಳಾರಿ ಜೆಸ್ಕಾಂ ಗ್ರಾಮೀಣ ಉಪ ವಿಭಾಗದ ಮೋಕ ಕಚೇರಿಯಿಂದ ಸಂಗನಕಲ್ಲು ಬಳಿಯಲ್ಲಿ ನಿರಂತರಜ್ಯೋತಿ ವಿದ್ಯುತ್ ಪೂರೈಸುವ ಕಂಭದಿಂದ ನೀರಾವರಿ ಪಂಪ್ಸೆಟ್ಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಒದಗಿಸುವಾಗ ಖಾಸಗಿ ಶಾಲೆಯ ಜನರೇಟರ್ ಪ್ರಾರಂಭವಾಗಿ ರಿವರ್ಸ್ನಲ್ಲಿ ವಿದ್ಯುತ್ ಪ್ರವಹಿಸಿ, ಈ ಘಟನೆ ನಡೆದಿದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್