
ಬಳ್ಳಾರಿ, 09 ಜುಲೈ (ಹಿ.ಸ.)
ಆ್ಯಂಕರ್ : ಮಾಜಿ ಶಾಸಕರು ಹಾಗೂ ರೈತ ಹೋರಾಟಗಾರರಾಗಿದ್ದ ದಿವಂಗತ ಸಿ.ಎಂ. ರೇವಣಸಿದ್ಧಯ್ಯ ಅವರ ಹೆಸರಿನಲ್ಲಿ `ದಿ.ರೇವಣಸಿದ್ಧಯ್ಯ ಜನ್ಮ ಶತಮಾನೋತ್ಸವ ಸಮಿತಿ'ಯು ನೀಡುವ ರಾಜ್ಯ ಮಟ್ಟದ ರೈತ ಪ್ರಶಸ್ತಿಗೆ ಮಂಡ್ಯ ಜಿಲ್ಲೆ ಕಿರುಗಾವಲಿನ ಪ್ರಗತಿಪರ ರೈತ ಸಯ್ಯದ್ ಘನಿ ಅವರು ಆಯ್ಕೆಯಾಗಿದ್ದಾರೆ.
ದಿ. ರೇವಣಸಿದ್ಧಯ್ಯ ಜನ್ಮ ಶತಮಾನೋತ್ಸವ ಸಮಿತಿಯು ನೀಡುತ್ತಿರುವ ಪ್ರಶಸ್ತಿ ಇದೇ ಮೊದಲಾಗಿದ್ದು, ರೈತ ಸಯ್ಯದ್ ಘನಿ ಅವರು
1360 ಕ್ಕೂ ಹೆಚ್ಚು ವಿಧದ ಭತ್ತದ ತಳಿಗಳನ್ನು ಸಂಶೋಧನೆ ಮಾಡಿದ್ದಾರೆ.
ಸಿ.ಎಂ. ರೇವಣಸಿದ್ಧಯ್ಯ ಅವರ ಹೆಸರಿನಲ್ಲಿ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲು `ದಿ.ರೇವಣಸಿದ್ಧಯ್ಯ ಜನ್ಮ ಶತಮಾನೋತ್ಸವ ಸಮಿತಿ'ಯು ನಿರ್ಧರಿಸಿದೆ.
ಸಿ.ಎಂ. ರೇವಣಸಿದ್ದಯ್ಯ ಅವರ ಹುಟ್ಟೂರಾಗಿರುವ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿಯಲ್ಲಿ ಸಿ.ಎಂ. ರೇವಣಸಿದ್ಧಯ್ಯ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಸಮಿತಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್