
ತೋರಣಗಲ್ಲು, 09 ಜುಲೈ (ಹಿ.ಸ.)
ಆ್ಯಂಕರ್ : ಕ್ರೀಡೆ ಮತ್ತು ಶಿಕ್ಷಣದ ಮೂಲಕ ಮಕ್ಕಳ ಸಮಗ್ರ ಅಭಿವೃದ್ಧಿಗೆ ನೆರವಾಗುತ್ತಿರುವ ಜಿಎಸ್ಡಬ್ಲ್ಯು ಫೌಂಡೇಶನ್ ತೋರಣಗಲ್ಲುನ ಓಪಿಜೆಸಿಯಲ್ಲಿ ಕ್ರೀಡಾಕಿಟ್ ಅನ್ನು ವಿತರಣೆ ಮಾಡಿದೆ.
10 ಹಳ್ಳಿಗಳ 16 ಸರ್ಕಾರಿ ಶಾಲೆಗಳಿಗೆ 35 ಲಕ್ಷ ರೂಪಾಯಿ ಮೌಲ್ಯದ ಕ್ರೀಡಾ ಕಿಟ್ಗಳನ್ನು ವಿತರಿಸಿದೆ. ಈ ಕ್ರೀಡಾ ಸಾಮಗ್ರಿಗಳನ್ನು 4,182 ವಿದ್ಯಾರ್ಥಿಗಳು ಬಳಕೆ ಮಾಡಲಿದ್ದಾರೆ.
ತೋರಣಗಲ್ಲು ಶಾಲಾ ಶಿಕ್ಷಣ ಇಲಾಖೆಯ ಸಿಆರ್ಪಿ ಶ್ರೀಮತಿ ಎಂ.ಜೆ. ಯಾಸ್ಮಿನ್; ಜೆಎಸ್ಡಬ್ಲ್ಯು ಸ್ಟೀಲ್ ಲಿಮಿಟೆಡ್ನ ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್; ಸಿಮೆಂಟ್ನ ಮುಖ್ಯಸ್ಥ ರಾಜ್ಕುಮಾರ್ ಧೆಂಪೆ;
ಜಿಂದಾಲ್ ಸ್ಟೀಲ್ನ ಸಹಾಯಕ ಉಪಾಧ್ಯಕ್ಷ ಜಯಪ್ರಕಾಶ್; ಜೆಎಸ್ಡಬ್ಲ್ಯೂ ಫೌಂಡೇಶನ್ನ ದಕ್ಷಿಣ ವಲಯ ಮುಖ್ಯಸ್ಥರಾದ ಪೆದ್ದಣ್ಣ ಬೀದಲ; ಮತ್ತು ಜೆಎಸ್ಡಬ್ಲ್ಯೂ ಫೌಂಡೇಶನ್ನ ವಿಜಯನಗರದ ಸ್ಥಳೀಯ ಮುಖ್ಯಸ್ಥರಾದ ಭಾರತಿ ಪಳನಿಸಾಮಿ ಹಾಗೂ 40 ಕ್ಕೂ ಹೆಚ್ಚು ಶಿಕ್ಷಕರು, ಶಾಲಾ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಾಗಲಾಪುರ, ಬಸಾಪುರ, ತಾಳೂರು, ಜೋಗ, ಹೊಸ ದರೋಜಿ, ಮಾದಾಪುರ, ಹಳೇ ಮಾದಾಪುರ, ಲಿಂಗದಹಳ್ಳಿ, ಕೊಡಾಲು, ದೊಡ್ಡ ಅಂತಾಪುರ ಮತ್ತು ಚಿಕ್ಕಂತಾಪುರ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಕ್ರೀಡಾ ಕಿಟ್ಗಳನ್ನು ಈ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್