ಬಳ್ಳಾರಿಯಲ್ಲಿ ಎಬಿವಿಪಿ ಸಂಸ್ಥಾಪನಾ ದಿನಾಚರಣೆ
ಬಳ್ಳಾರಿ, 09 ಜುಲೈ (ಹಿ.ಸ.) ಆ್ಯಂಕರ್ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ 78ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಎಬಿವಿಪಿ ಕಚೇರಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು. ವಿಧಾನ ಪರಿಷತ್ ಪ್ರತಿ ಪಕ್ಷದ ಮುಖ್ಯ ಸಚೇತಕರಾದ ಎನ್. ರವಿಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರ
ಬಳ್ಳಾರಿ : ಎಬಿವಿಪಿ ಧ್ವಜಾರೋಹಣ


ಬಳ್ಳಾರಿ : ಎಬಿವಿಪಿ ಧ್ವಜಾರೋಹಣ


ಬಳ್ಳಾರಿ : ಎಬಿವಿಪಿ ಧ್ವಜಾರೋಹಣ


ಬಳ್ಳಾರಿ, 09 ಜುಲೈ (ಹಿ.ಸ.)

ಆ್ಯಂಕರ್ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ 78ನೇ ಸ್ಥಾಪನಾ ದಿನಾಚರಣೆಯ ಅಂಗವಾಗಿ ಬಳ್ಳಾರಿಯ ಎಬಿವಿಪಿ ಕಚೇರಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು.

ವಿಧಾನ ಪರಿಷತ್ ಪ್ರತಿ ಪಕ್ಷದ ಮುಖ್ಯ ಸಚೇತಕರಾದ ಎನ್. ರವಿಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು.

ಎಬಿವಿಪಿಯ ಕೇಂದ್ರೀಯ ಕಾರ್ಯಸಮಿತಿ ಸದಸ್ಯರು ಹಾಗೂ ಬಳ್ಳಾರಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಸಚಿನ್ ಕುಳಗೇರಿ, ಜಿಲ್ಲಾ ಪ್ರಮುಖರಾದ ಡಾ. ರಾಮಕಿರಣ, ನಾಗರಾಜ ಬಟಗೇರಾ, ಟಿ. ಭರತ, ವಿಭಾಗ ಸಂಚಾಲಕರಾದ ಕೆ. ದಿಲೀಪ್ ಕುಮಾರ್, ನಗರ ಅಧ್ಯಕ್ಷರಾದ ಡಾ. ಮಂಗಳಾ ಬಿ.ಎನ್., ನಗರ ಕಾರ್ಯದರ್ಶಿಯಾದ ಬಸವಕಿರಣಗೌಡ, ವಿ.ಎಸ್.ಎಸ್. ಟ್ರಸ್ಟ್ ಪ್ರಮುಖರು, ಹಿರಿಯ ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande