ಬೆಂಗಳೂರು ಸಂಚಾರ ಪೊಲೀಸರಿಗೆ ಐದು ಇವಿ ಪೆಟ್ರೋಲಿಂಗ್ ವಾಹನಗಳ ಹಸ್ತಾಂತರ
Five customised EV patrol vehicles added to Bengaluru Traffic Police fleet
ಬೆಂಗಳೂರು ಸಂಚಾರ ಪೊಲೀಸ್ ಪಡೆಗೆ ಹಸ್ತಾಂತರಿಸಲಾದ ಐದು ವಿದ್ಯುತ್ ಚಾಲಿತ ಪೆಟ್ರೋಲಿಂಗ್ ವಾಹನಗಳು.


ಬೆಂಗಳೂರು, 08 ಜುಲೈ (ಹಿ.ಸ.):

ಆ್ಯಂಕರ್:

ನಗರದ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನ್ಯೂಮೆರೋಸ್ ಮೋಟರ್ಸ್ ಸಂಸ್ಥೆಯು ತನ್ನ ಸಿಎಸ್ಆರ್ ಯೋಜನೆಯಡಿ ಐದು ವಿಶೇಷ ವಿನ್ಯಾಸದ ವಿದ್ಯುತ್ ಚಾಲಿತ ಪೆಟ್ರೋಲಿಂಗ್ ವಾಹನಗಳನ್ನು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಗೆ ದೇಣಿಗೆಯಾಗಿ ನೀಡಿದೆ.

ಈ ವಾಹನಗಳನ್ನು ಸಂಚಾರ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ತ್ವರಿತವಾಗಿ ಸ್ಥಳಕ್ಕೆ ತಲುಪಲು, ಸ್ಥಳೀಯ ಪೆಟ್ರೋಲಿಂಗ್ ನಡೆಸಲು ಹಾಗೂ ಸಂಚಾರ ನಿಯಂತ್ರಣ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಬಳಸಲಾಗುತ್ತದೆ.

ಈ ಕುರಿತು ಬೆಂಗಳೂರು ಸಂಚಾರ ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನ್ಯೂಮೆರೋಸ್ ಮೋಟರ್ಸ್ನ ಸಿಎಸ್ಆರ್ ಉಪಕ್ರಮದಡಿ ಈ ವಾಹನಗಳನ್ನು ಪಡೆಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / SNEHA K


 rajesh pande