
ಬಳ್ಳಾರಿ, 08 ಜುಲೈ (ಹಿ.ಸ.)
ಆ್ಯಂಕರ್ : ಸರೋಜಿನಿ ದಾಮೋದರನ್ ಫೌಂಡೇಶನ್ (ಎಸ್ಡಿಎಫ್) ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 11 ನೇ ತರಗತಿಯ `ಕರ್ನಾಟಕ ವಿದ್ಯಾಧನ ವಿದ್ಯಾರ್ಥಿವೇತನ' ಅರ್ಜಿಗಳನ್ನು ಸಲ್ಲಿಸಲು ಜುಲೈ 19 ಕೊನೆಯ ದಿನವಾಗಿದೆ.
ವಿದ್ಯಾಧನ್ ವಿದ್ಯಾರ್ಥಿವೇತನ ಯೋಜನೆಯು ಆಯ್ದ ವಿದ್ಯಾರ್ಥಿಗಳಿಗೆ ವೈಯಕ್ತಿಕ ಮತ್ತು ವ್ಯಕ್ತಿತ್ವ ವಿಕಸನ, ಕೌಶಲ್ಯ ತರಬೇತಿ, ಮಾರ್ಗದರ್ಶನ ಮತ್ತು ವೃತ್ತಿಪರ ತರಬೇತಿಗಳನ್ನು ನೀಡಲಿದೆ. 2014 ರಲ್ಲಿ ಕರ್ನಾಟಕದಲ್ಲಿ ಪ್ರಾರಂಭವಾದಾಗಿನಿಂದ 1500 ಅಧಿಕ ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡಲಾಗಿದೆ.
ಕರ್ನಾಟಕ ಪಿಯುಸಿ ಕಾರ್ಯಕ್ರಮ 2025 ವಿದ್ಯಾಧಾನ್ ವಿದ್ಯಾರ್ಥಿ ವೇತನವು, ವಾರ್ಷಿಕ ಆದಾಯ ರೂ 2 ಲಕ್ಷಕ್ಕಿಂತ ಕಡಿಮೆ ಹೊಂದಿರುವ,
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನವನ್ನು ನೀಡಲಿದೆ. ಅಭ್ಯರ್ಥಿಗಳು 2026 ರಲ್ಲಿ ಕರ್ನಾಟಕ ರಾಜ್ಯದಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಶೇ. 90% (ಅಥವಾ ವಿಕಲಾಂಗ ವಿದ್ಯಾರ್ಥಿಗಳಿಗೆ 75%) ಅಥವಾ ಎಲ್ಲಾ ವಿಷಯಗಳಲ್ಲಿ ಂ+ ಗ್ರೇಡ್ ಪಡೆದಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಪಿಯುಸಿ ಅಧ್ಯಯನದ ಅವಧಿಯಲ್ಲಿ ವರ್ಷಕ್ಕೆ 10,000 ರೂ.ಗಳ ವಿದ್ಯಾರ್ಥಿವೇತನವನ್ನು ಪಾವತಿಸಲಾಗುತ್ತದೆ. ನಂತರ ಆ ವಿದ್ಯಾರ್ಥಿಯ ಪದವಿ ಅಧ್ಯಯನಕ್ಕಾಗಿ ವರ್ಷಕ್ಕೆ 15,000 ರಿಂದ 75,000 ರೂ ತನಕ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ಆಸಕ್ತ ವಿದ್ಯಾರ್ಥಿಗಳು www.vidyadhan.org ಗೆ ಭೇಟಿ ನೀಡಿ ಅಥವಾ ‘SDF Vidya'(ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ) ಬಳಸುವ ಮೂಲಕ ಅರ್ಜಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು. ಮೇ 15, 2026 ರಿಂದ ಆರಂಭವಾಗಿರುವ ಕರ್ನಾಟಕ ವಿದ್ಯಾರ್ಥಿ ವೇತನದ ಅರ್ಜಿಗಳು ಜೂಲೈ 19, 2026 ರವರೆಗೆ ಲಭ್ಯವಿದೆ.
ಹೆಚ್ಚಿನ ಮಾಹಿತಿಗಳಿಗಾಗಿ ವಿದ್ಯಾರ್ಥಿಗಳು vidyadhan.karnataka@sdfoundationindia.com ಅಥವಾ ವಿದ್ಯಾಧನ್ ಸಹಾಯವಾಣಿಯನ್ನು +918068333500 ನಲ್ಲಿ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಗಿ ಪವಿತ್ರಾ, ಕಾರ್ಯಕ್ರಮ ಸಂಯೋಜಕರು, ಸರೋಜಿನಿ ದಾಮೋದರನ್ ಪ್ರತಿಷ್ಠಾನ, ದೂರವಾಣಿ: 7349354415 ಅಥವಾ
ಜೆಸ್ವಿನ್, ಕಾರ್ಯಕ್ರಮ ಸಂಯೋಜಕರು, ಸರೋಜಿನಿ ದಾಮೋದರನ್ ಪ್ರತಿಷ್ಠಾನ, ದೂರವಾಣಿ: 9611896183 ಗೆ ಸಂಪರ್ಕ ಮಾಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್