
ಕೋಲಾರ, ಜುಲೈ ೮ (ಹಿ.ಸ):
ಆ್ಯಂಕರ್: ಕೋಲಾರ ಜಿಲ್ಲೆಯ ಮಾಲೂರಿನ ಹೊಸೂರು ರಸ್ತೆಯಲ್ಲಿರುವ ಆರ್.ಎಸ್. ಕನ್ವೆನ್ಷನ್ ಹಾಲ್ನಲ್ಲಿ ಮಾಲೂರಿನ ತಬಲ ನಾರಾಯಣಪ್ಪ ಅವರ ಮೊಮ್ಮಗಳು, ಶ್ರೀನಿವಾಸ ಮೂರ್ತಿ, ಪದ್ಮ ದಂಪತಿಯ ಮಗಳಾದ ಕು.ಹರ್ಷಿತ ಝಾನ್ಸಿ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಶ್ರೀ ಲಲಿತ ಕಲಾ ಅಕಾಡೆಮಿ ಕಲಾ ಶಾಲೆಯ ನಿದೇಶಕರಾದ ಖ್ಯಾತ ನೃತ್ಯಗುರು ಡಾ. ಜಿ. ಎನ್. ಅರುಣ ಅವರ ಮಾರ್ಗದರ್ಶನದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಹಲವು ವರ್ಷಗಳ ಕಾಲ ಭರತನಾಟ್ಯವನ್ನು ಅಭ್ಯಾಸ ಮಾಡಿರುವ ಹರ್ಷಿತ ಝಾನ್ಸಿ ಅವರು ತಮ್ಮ ರಂಗಪ್ರವೇಶದಲ್ಲಿ ಗಣೇಶ ವಂದನೆ, ಅಲಾರಿಪ್ಪು, ಜತಿಸ್ವರಂ, ಶಬ್ದಂ, ವರ್ಣಂ, ಪದಗಳು ಹಾಗೂ ತಿಲ್ಲಾನಾ ಸೇರಿದಂತೆ ವಿವಿಧ ಶಾಸ್ತಿಯ ನೃತ್ಯಗಳನ್ನು ಮನೋಜ್ಞವಾಗಿ ಪ್ರದರ್ಶಿಸಿ ನೆರೆದಿದ್ದ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್. ವಿ. ಗಿರಿಧರ್, ಕರ್ನಾಟಕ ಕಲಾ ಕೇಸರಿ, ಬೆಂಗಳೂರು ಇವರು ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಶಾಸ್ತಿçÃಯ ನೃತ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ಹರ್ಷಿತ ಝಾನ್ಸಿ ಅವರ ಪ್ರತಿಭೆ, ಶ್ರದ್ಧೆ ಹಾಗೂ ಶಿಸ್ತಿನ ಸಾಧನೆಯನ್ನು ಶ್ಲಾಘಿಸಿದರು.
ಬೆಂಗಳೂರಿನ ನೃತ್ಯೋಧಯ ಅಕಾಡೆಮಿ ನಿದೇಶಕರಾದ ವಿದೂಷಿ ದಿವ್ಯಶ್ರೀ ಎಸ್. ವಟಿ ಮಾತನಾಡಿ ಮಾನವನ ಸೃಜನಶೀಲತೆ, ಭಾವನೆ ಮತ್ತು ಸಂಸ್ಕೃತಿಯ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವಾಗಿದೆ. ಚಿತ್ರಕಲೆ, ಶಿಲ್ಪಕಲೆ, ಸಂಗೀತ, ನೃತ್ಯ, ನಾಟಕ ಹಾಗೂ ಕರಕುಶಲ ಕಲೆಗಳು ಲಲಿತ ಕಲೆಯ ಪ್ರಮುಖ ವಿಭಾಗಗಳಾಗಿವೆ. ಈ ಕಲೆಗಳು ವ್ಯಕ್ತಿಯ ಕಲ್ಪನಾಶಕ್ತಿ, ಸೌಂದರ್ಯ ಪ್ರಜ್ಞೆ ಮತ್ತು ಸೃಜನಾತ್ಮಕ ಚಿಂತನೆಯನ್ನು ಬೆಳೆಸುತ್ತವೆ.
ಲಲಿತ ಕಲೆಗಳು ಕೇವಲ ಮನರಂಜನೆಯ ಸಾಧನಗಳಲ್ಲ; ಅವು ಸಮಾಜದ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸೇತುವೆಯೂ ಆಗಿವೆ. ಮಕ್ಕಳಲ್ಲಿ ಆತ್ಮವಿಶ್ವಾಸ, ಏಕಾಗ್ರತೆ, ಶಿಸ್ತು ಹಾಗೂ ಅಭಿವ್ಯಕ್ತಿ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಲಲಿತ ಕಲೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಲಲಿತ ಕಲೆಗಳಿಗೆ ಅಪಾರ ಅವಕಾಶಗಳಿವೆ. ಅನೇಕ ವೃತ್ತಿ ಕ್ಷೇತ್ರಗಳಲ್ಲಿ ಕಲಾವಿದರಿಗೆ ಉತ್ತಮ ಭವಿಷ್ಯವಿದೆ ಎಂದು ನುಡಿದರು.
ದಿವ್ಯಸಾನಿಧ್ಯ ವಹಿಸಿದ್ದ ಶ್ರೀಮದ್ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠ ನಾಗಲಾಪುರ ತೆಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಮಹಂತ ಶಿವಾಚಾರ್ಯ ಮಹಾಸ್ವಾಮಿಗಳು, ಬೆಳ್ಳಾವಿ ಸಂಸ್ಥಾನ ಮಠ, ಬೆಳ್ಳಾವಿ, ಮಾಲೂರು. ಇವರು ಆಶೀರ್ವಚನ ನೀಡಿದರು. ಗುರು ಡಾ. ಜಿ. ಎನ್. ಅರುಣ ಅವರ ಸಮರ್ಪಿತ ತರಬೇತಿಯನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಮಾಲೂರಿನ ಹೆಸರಾಂತ ಶಾಸಕರಾದ ಕೆ. ಎನ್. ನಂಜೇಗೌಡ ಹಾಗೂ ಮಾಜಿ ಶಾಸಕರು, ಸಂಸದರು ಇನ್ನು ಅನೇಕ ರಾಜಕಾರಣಿಗಳು ಪೋಷಕರು, ಬಂಧು-ಬಳಗ, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿನಿಗೆ ಶುಭ ಹಾರೈಸಿದರು. ಕೊನೆಯಲ್ಲಿ ಗುರುಗಳು, ಸಂಗೀತ ಕಲಾವಿದರು ಮತ್ತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಗೌರವ ಸಮರ್ಪಿಸಿ ಕೃತಜ್ಞತೆ ಸಲ್ಲಿಸಲಾಯಿತು. ಹರ್ಷಿತ ಝಾನ್ಸಿ ಅವರ ರಂಗಪ್ರವೇಶವು ಮಾಲೂರಿನ ಸಾಂಸ್ಕೃತಿಕ ವಲಯದಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ನಿರೂಪಣೆ ಕುಮಾರಿ ಗಾಯತ್ರಿ, ಸ್ವಾಗತವನ್ನ ಸಂಗೀತ ಶಿಕ್ಷಕರಾದ ಸಿ. ನಾರಾಯಣಸ್ವಾಮಿ ರವರು ನಡೆಸಿಕೊಟ್ಟರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್