
ಬೆಂಗಳೂರು, 08 ಜುಲೈ (ಹಿ.ಸ.):
ಆ್ಯಂಕರ್
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ ಜುಲೈ 18ರಂದು ಶ್ವಾನ ದತ್ತು ಕಾರ್ಯಕ್ರಮವನ್ನು ಆಯೋಜಿಸಿದೆ.
ವೈಟ್ ಫೀಲ್ಡ್ ನೆಕ್ಸಸ್ ಶಾಂತಿನಿಕೇತನ ಮಾಲ್ ನಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಸ್ಥಳೀಯ ತಳಿಯ ಆರೋಗ್ಯವಂತ ಶ್ವಾನಗಳನ್ನು ದತ್ತು ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಕನ್ನಡ ನಟ ಮಾಸ್ಟರ್ ಆನಂದ್ ಶ್ವಾನಪ್ರಿಯರಿಗೆ ಮನವಿ ಮಾಡಿದ್ದು, ಶಾಶ್ವತ ಆಶ್ರಯಕ್ಕಾಗಿ ಕಾಯುತ್ತಿರುವ ಸ್ಥಳೀಯ ತಳಿಯ ಶ್ವಾನಗಳನ್ನು ದತ್ತು ಪಡೆದು ಅವುಗಳಿಗೆ ಹೊಸ ಬದುಕು ನೀಡುವಂತೆ ಕೋರಿದ್ದಾರೆ.
ಬೆಂಗಳೂರು ಪೂರ್ವ ನಗರ ನಿಗಮವು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ಥಳೀಯ ತಳಿಯ ಶ್ವಾನಗಳನ್ನು ದತ್ತು ಪಡೆಯುವಂತೆ ಗ್ರೇಟ್ ಬೆಂಗಳೂರು ಪ್ರಾಧಿಕಾರ ಆಹ್ವಾನಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / SNEHA K