ಎಸ್ಐಆರ್ ಕರ್ತವ್ಯಕ್ಕೆ ಶಿಕ್ಷಕರ ನಿಯೋಜನೆ: ಸರ್ಕಾರಿ ಶಾಲೆಗಳಲ್ಲಿ ಬೋಧನೆಗೆ ತೊಂದರೆ
SIR duty has kept teachers away from classrooms, affecting regular teaching and SSLC students.
SIR ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು


ಬೆಂಗಳೂರು, 08 ಜುಲೈ (ಹಿ.ಸ.):

ಆ್ಯಂಕರ್:

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಬೆಂಗಳೂರಿನ ಪ್ರೌಢಶಾಲೆಗಳ ಶಿಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿರುವುದರಿಂದ ಶಾಲೆಗಳ ಬೋಧನಾ ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ವಿಶೇಷವಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪಾಠಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಶಿಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಸುಮಾರು ಒಂದು ತಿಂಗಳ ಕಾಲ ಶಿಕ್ಷಕರು ಎಸ್ಐಆರ್ ಕರ್ತವ್ಯದಲ್ಲಿರುವ ಕಾರಣ ಶಾಲೆಗಳಲ್ಲಿ ಪಾಠಗಳು ನಿಯಮಿತವಾಗಿ ನಡೆಯುತ್ತಿಲ್ಲ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕ್ಷೇತ್ರ ಕಾರ್ಯದಲ್ಲಿ ತೊಡಗಿರುವುದರಿಂದ ಹೆಚ್ಚುವರಿ ತರಗತಿಗಳನ್ನು ನಡೆಸುವುದೂ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ನಮ್ಮ ಶಾಲೆಯಲ್ಲಿ ಆರು ಶಾಶ್ವತ ಶಿಕ್ಷಕರು ಎಸ್ಐಆರ್ ಕರ್ತವ್ಯಕ್ಕೆ ಹೋಗಿದ್ದಾರೆ. ಪ್ರತಿದಿನ ನಡೆಯಬೇಕಾದ ಪಾಠಗಳು ಬಾಕಿಯಾಗುತ್ತಿವೆ. ಇದರಿಂದ ಮಾಸಿಕ ಪರೀಕ್ಷೆಗಳ ವೇಳಾಪಟ್ಟಿಯ ಮೇಲೂ ಪರಿಣಾಮ ಬೀಳಬಹುದು. ಕೊನೆಗೆ ಇದರ ಹೊರೆ ವಿದ್ಯಾರ್ಥಿಗಳ ಮೇಲೇ ಬೀಳುತ್ತದೆ. ಇಂತಹ ಪರಿಸ್ಥಿತಿಯೇ ಹಲವು ಪೋಷಕರು ಸರ್ಕಾರಿ ಶಾಲೆಗಳ ಬಗ್ಗೆ ಹಿಂಜರಿಯಲು ಕಾರಣವಾಗುತ್ತಿದೆ, ಎಂದು ನಗರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ಇನ್ನೋರ್ವ ಶಿಕ್ಷಕರು, ಇಂತಹ ಕೆಲಸಗಳಿಗೆ ಶಿಕ್ಷಕರ ಬದಲು ಇತರ ಸರ್ಕಾರಿ ಇಲಾಖೆಗಳ ಸಿಬ್ಬಂದಿಯನ್ನು ಬಳಸಬಹುದಿತ್ತು. ಕಚೇರಿಯ ಕೆಲಸಗಳಲ್ಲಿ ಒಂದೆರಡು ದಿನ ವಿಳಂಬವಾದರೂ ನಿರ್ವಹಿಸಬಹುದು. ಆದರೆ ತರಗತಿಯಲ್ಲಿ ಶಿಕ್ಷಕರ ಸ್ಥಾನವನ್ನು ತಕ್ಷಣವೇ ಯಾರೂ ತುಂಬಲು ಸಾಧ್ಯವಿಲ್ಲ. ಬೋಧನೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸುಲಭದ ಕೆಲಸವಲ್ಲ, ಎಂದು ತಮ್ಮ ಅಭಿಪ್ರಾ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರೂ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದಾರೆ. ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ಇದರಿಂದ ಮಕ್ಕಳ ಕಲಿಕಾ ದಿನಗಳು ಕಡಿಮೆಯಾಗುತ್ತಿವೆ. ಶಿಕ್ಷಕರಿಗೆ ನಿರಂತರವಾಗಿ ಇಂತಹ ಹೆಚ್ಚುವರಿ ಕರ್ತವ್ಯಗಳನ್ನು ನೀಡಿದರೆ, ಸರ್ಕಾರಿ ಶಾಲೆಗಳ ಮೇಲಿನ ಪೋಷಕರ ವಿಶ್ವಾಸಕ್ಕೂ ಧಕ್ಕೆಯಾಗುವ ಸಾಧ್ಯತೆ ಇದೆ, ಎಂದು ಅವರು ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / SNEHA K


 rajesh pande