ಎಂ.ಎಂ.ಜೆ. ಹರ್ಷವರ್ಧನ ನಿಧನ
ಕೊಟ್ಟೂರು , 08 ಜುಲೈ (ಹಿ.ಸ.) ಆ್ಯಂಕರ್ : ಕೊಟ್ಟೂರು ತಾಲೂಕಿನ ಪ್ರಭಾವಿ ರಾಜಕಾರಣಿ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ, ಉಜ್ಜಯಿನಿ ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿಗಳಾಗಿದ್ದ ಎಂ.ಎಂ.ಜೆ. ಹರ್ಷವರ್ಧನ (64) ಅವರು ಅನಾರೋಗ್ಯದ ಕಾರಣ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೃತರು ಪತ್ನಿ, ಓರ್ವ
M.M.J. Harshavardhan passes away


M.M.J. Harshavardhan passes away


ಕೊಟ್ಟೂರು , 08 ಜುಲೈ (ಹಿ.ಸ.)

ಆ್ಯಂಕರ್ : ಕೊಟ್ಟೂರು ತಾಲೂಕಿನ ಪ್ರಭಾವಿ ರಾಜಕಾರಣಿ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ, ಉಜ್ಜಯಿನಿ ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿಗಳಾಗಿದ್ದ ಎಂ.ಎಂ.ಜೆ. ಹರ್ಷವರ್ಧನ (64) ಅವರು ಅನಾರೋಗ್ಯದ ಕಾರಣ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

1994ರಲ್ಲಿ ಕೊಟ್ಟೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕೊಟ್ಟೂರು ಎಪಿಎಂಸಿ ನಿರ್ದೇಶಕರಾಗಿ, ಕೊಟ್ಟೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ 2006ರಲ್ಲಿ ಉತ್ತಮ ಸೇವೆ ಸಲ್ಲಿಸಿ ಗುಲ್ಬರ್ಗಾ ವಿಭಾಗದಲ್ಲಿ ಮಾದರಿ ಪಟ್ಟಣ ಪಂಚಾಯಿತಿ ಪ್ರಶಸ್ತಿಯನ್ನು ಪಡೆದಿದ್ದರು.

ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ವಿವರಗಳಿಗಾಗಿ, 94483 24877 ಗೆ ಸಂಪರ್ಕಿಸಿರಿ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande