
ಬೆಂಗಳೂರು, 08 ಜುಲೈ (ಹಿ.ಸ.):
ಆ್ಯಂಕರ್:ಪಿಸಿಎ ಚಾರಿಟೇಬಲ್ ಟ್ರಸ್ಟ್ ಹಾಗೂ ಆ್ಯಕ್ಟ್ ಆಫ್ ಲವ್ ಸಂಸ್ಥೆಗಳು, ಐಕಾನ್ ಆಸ್ಪತ್ರೆ ಮತ್ತು ನಂದನಾ ಕ್ಲಿನಿಕ್ ಸಹಯೋಗದಲ್ಲಿ ಜುಲೈ 9 (ಗುರುವಾರ) ಮಾಸಿಕ ಕಣ್ಣಿನ ಮತ್ತು ಸ್ತ್ರೀರೋಗ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿವೆ.
ಶಿಬಿರವು ಹೆಬ್ಬಾಳ ಕೆಂಪಾಪುರದ ಕಾಫಿ ಬೋರ್ಡ್ ಉದ್ಯಾನವನದ ಎದುರಿನ ಐಕಾನ್ ಆಸ್ಪತ್ರೆಯಲ್ಲಿ ನಡೆಯಲಿದೆ. ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ಮತ್ತು ಸಲಹೆ ನೀಡಲಾಗುವುದು. ನೋಂದಣಿ ಹಾಗೂ ಸಮಾಲೋಚನೆ ಶುಲ್ಕ ₹100 ನಿಗದಿಪಡಿಸಲಾಗಿದೆ.
ಸಾರ್ವಜನಿಕರು ಈ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಇತರರಿಗೂ ಮಾಹಿತಿ ತಲುಪಿಸುವಂತೆ ಪಿಸಿಎ ಟ್ರಸ್ಟ್ ಮುಖ್ಯಸ್ಥರು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.